ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಕೊರೋನಾ ಪೇಷಂಟ್ ಗುಣಮುಖ-ಇಂದು ಡಿಸ್ಚಾರ್ಜ!

620

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ 8 ಕೊರೊನಾ ಸೋಂಕಿತರ ಪೈಕಿ ಇಬ್ಬರು ಈಗಾಗಲೇ ಗುಣಮುಖರಾಗಿದ್ದು ಅವರನ್ನ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಮಾಡುವುದಾಗಿ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ ಮಾಹಿತಿ ನೀಡಿದ್ದಾರೆ.

ಇಂದು ಕಾರವಾರದಲ್ಲಿ ಕನ್ನಡವಾಣಿ ಜೊತೆ ಮಾತನಾಡಿದ ಅವರು ಕಾರವಾರ ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ಈಗಾಗಲೇ ಇಬ್ಬರು ಪೂರ್ಣ ಗುಣಮುಖರಾಗಿದ್ದು ಅವರನ್ನ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ.

ಆದರೆ ಮುಂಜಾಗ್ರತೆಯ ಉದ್ದೇಶದಿಂದ ಮುಂದಿನ 14 ದಿನಗಳ ಕಾಲ ಜಿಲ್ಲಾಡಳಿತವೇ ಕ್ವಾರಂಟೈನ್ ಮಾಡಲಿದ್ದು ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗುವುದು.

ಇನ್ನು ಉಳಿದ ಸೋಂಕಿತರು ಸಹ ಏಪ್ರಿಲ್ 14ರೊಳಗೆ ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ. ಜೊತೆಗೆ ಸೋಂಕಿತರ ಸಂಪರ್ಕಕ್ಕೆ ಬಂದವರು ಸಹ 14 ದಿನಗಳನ್ನ ಪೂರೈಸುತ್ತಿದ್ದು ಅವರ ನಿಗಾ ಅವಧಿ ಸಹ ಮುಕ್ತಾಯಗೊಳ್ಳುತ್ತಿದೆ.

https://youtu.be/E03M-GzZzPw

ಜೊತೆಗೆ ದೆಹಲಿಯ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಮ್ಮ ಜಿಲ್ಲೆಯವರ ಗಂಟಲ ದ್ರವದ ಪರೀಕ್ಷೆಗಳು ಸಹ ನೆಗೆಟಿವ್ ಬಂದಿದ್ದು ಉಳಿದಂತೆ ಅಂತಹವರ ಸಂಪರ್ಕಕ್ಕೆ ಬಂದವರು ಹಾಗೂ ಸ್ಥಳೀಯರು ಸೇರಿ ಇನ್ನೂ 50 ಮಾದರಿಗಳ ಪರೀಕ್ಷಾ ವರದಿ ಬರಬೇಕಿದ್ದು ಜಿಲ್ಲೆಯಲ್ಲಿ ಯಾವ ರೀತಿಯ ಪರಿಸ್ಥಿತಿ ಇರಲಿದೆ ಎನ್ನುವುದು ಮುಂದಿನ ವಾರದೊಳಗೆ ತಿಳಿದುಬರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಈಮೂಲಕ ಜಿಲ್ಲೆಯ ಭಟ್ಕಳದಲ್ಲಿನ ನಿವಾಸಿಗಳಾಗಿರುವ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರು ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಓರ್ವ ವ್ಯಕ್ತಿ ಗುಣಮುಖರಾದಂತಾಗಿದ್ದು ಉಳಿದ ರೋಗಿಗಳ ಸ್ಥಿತಿಯಲ್ಲಿ ಕೂಡ ಸುದಾರಣೆ ಕಂಡಿದ್ದು ಚೇತರಿಕೆಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Leave a Reply

Your email address will not be published. Required fields are marked *