add

ಪರಾರಿಯಾಗಿದ್ದ ಕರೋನಾ ಸೊಂಕಿತ ವಾಹನ ಕಳ್ಳನ ಬಂಧಿಸಿದ ಪೊಲೀಸರು

1331

ಕಾರವಾರ: ಕಾರವಾರ ನಗರದ ಮೆಡಿಕಲ್ ಕಾಲೇಜಿನ ಕೋವಿಡ್ 19 ವಾರ್ಡಿನಿಂದ ತಪ್ಪಿಸಿಕೊಂಡಿದ್ದ ಕೊರೋನಾ ಸೋಂಕಿತ ಕಳ್ಳನನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಕಾರವಾರ ತಾಲೂಕಿನ ಶಿರವಾಡ ಬಳಿಯ ನಾರಗೇರಿ ಬಳಿ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿರಸಿಯಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಧಾರವಾಡದಲ್ಲಿ ಕಳ್ಳನೋರ್ವನನ್ನ ಬಂದಿಸಿದ್ದರು. ಅನಾರೋಗ್ಯ ಹಿನ್ನಲೆಯಲ್ಲಿ ಆತನನ್ನ ಪರೀಕ್ಷೆ ನಡೆಸಿದಾಗ ಕೊರೋನಾ ಇರುವುದು ದೃಢಪಟ್ಟಿತ್ತು. ಕಳ್ಳನನ್ನ ಕೋವಿಡ್ 19 ವಾರ್ಡಿಗೆ ದಾಖಲು ಮಾಡಲಾಗಿತ್ತು. ಕಳೆದ ಸೋಮವಾರ ವಾರ್ಡ್ ನಲ್ಲಿದ್ದ ಇಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದ ಕಳ್ಳನನ್ನ ತಾಲೂಕಿನ ಕದ್ರಾ ಬಳಿ ಬಂದಿಸಿ ಮತ್ತೆ ಆಸ್ಪತ್ರೆಗೆ ದಾಖಲು ಮಾಡಿದ್ದರು.

ನಿನ್ನೆ ರಾತ್ರಿ ವೇಳೆ ಕಳ್ಳ ಮತ್ತೆ ಬಾಗಿಲು ಮುರಿದು ವಾರ್ಡಿನಿಂದ ತಪ್ಪಿಸಿಕೊಂಡು ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸಿ ಕಾರವಾರದ ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ ಗೆ ಮರಳಿ ಕರೆತಂದಿದ್ದು ಹೆಚ್ಚಿನ ನಿಗಾ ಇಟ್ಟಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ