ಉತ್ತರ ಕನ್ನಡ ಕ್ಕೆ ಮತ್ತೆರೆಡು ಫಾಸಿಟಿವ್! ರಾಜ್ಯದಲ್ಲಿ ಎಷ್ಟು ಗೊತ್ತಾ?

2019

ಕಾರವಾರ: ರಾಜ್ಯದಲ್ಲಿ ಇಂದು ಕರೋನಾ ಸೊಂಕಿನ ಸಂಖ್ಯೆ 378 ಕ್ಕೆ ಏರಿಕೆಯಾಗಿದೆ.ಉಡುಪಿ ಜಿಲ್ಲೆಯಲ್ಲಿ ಇಂದು 121 ಜನರಲ್ಲಿ ಸೊಂಕು ಪತ್ತೆಯಾಗಿದೆ.ಯಾದಗಿರಿ 103 ಪ್ರಕರಣ ಪತ್ತೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಪ್ರಕರಣ ವರದಿಯಾಗಿದೆ.

34 ವರ್ಷದ ಪುರುಷ, ಪೇಷೆಂಟ್ ಸಂಖ್ಯೆ 5000 ಹಾಗೂ 61 ವರ್ಷದ ಮಹಿಳೆ, ಪೇಷೆಂಟ್ ಸಂಖ್ಯೆ 5001ರಿಗೆ ಕೊರೊನಾ ಫಾಸಿಟಿವ್ ಬಂದಿದ್ದು
ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರು ಸೋಂಕಿತರು ಕ್ವಾರಂಟೈನ್‌ನಲ್ಲಿದ್ದರು. ಇದೀಗ ಇವರಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ.

ಕಾರವಾರದ ಕ್ರಿಮ್ಸ್ ಕೊರೊನಾ ವಿಶೇಷ ವಾರ್ಡ್‌ನಲ್ಲಿ ಪ್ರಸ್ತುತ 22 ಸಕ್ರಿಯ ಪ್ರಕರಣಗಳಿದ್ದು
ಬಿಡುಗಡೆ ಗೊಂಡ 72 ಮಂದಿ ಸೇರಿ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 94 ಪ್ರಕರಣಗಳಾಗಿವೆ.

ರಾಜ್ಯದ ಕರೋನಾ ಸೊಂಕಿತರ ಸಂಖ್ಯೆ ವಿವರ ಈ ಕೆಳಗಿನಂತಿದೆ:-

ಉತ್ತರ ಕನ್ನಡ ಜಿಲ್ಲೆಯಲ್ಲಿ ಹದಿನೆಂಟು ಜನ ಗುಣಮುಖ ಬಿಡುಗಡೆ

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಮಂದಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.

ಕೊರೋನಾ ದೃಢಪಟ್ಟ ಒಟ್ಟು 39 ಮಂದಿ ಕ್ರಿಮ್ಸ್ ನ ಕೋವಿಡ್- 19 ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ಪೈಕಿ ಕುಂದಾಪುರದ ಒಂದು ವರ್ಷದ ಗಂಡು ಮಗು, 35 ವರ್ಷದ ಮಹಿಳೆಯನ್ನೂ ಸೇರಿದಂತೆ 18 ಮಂದಿ ಗುಣಮುಖರಾಗಿದ್ದು, ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿದೆ.

ಈ ಕಾರಣದಿಂದ ಆಸ್ಪತ್ರೆಯಿಂದ ಅವರನ್ನು ಇಂದು ಬಿಡುಗಡೆ ಮಾಡಲಾಗಿದೆ. ಇನ್ನೂ 21 ಮಂದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ