ಸೋಮವಾರದ ಗಿಡದ ಬಗ್ಗೆ ನಿಮಗೇನು ಗೊತ್ತು?ಪಶ್ಚಿಮ ಘಟ್ಟದ ಔಷಧೀಯ ಸಸ್ಯಗಳ ಮಾಹಿತಿ ಇಲ್ಲಿದೆ ನೋಡಿ

286

“ಸೋಮವಾರದ ಗಿಡ”

Croton oblongifolius – Euphorbiaceae

ಮಲೆನಾಡಿನ ಕಾಡಂಚಿನಲ್ಲಿ ವಿರಳವಾಗಿ ಕಂಡುಬರುವ ಸಸ್ಯ ಪ್ರಬೇಧ ಸೋಮವಾರದ ಗಿಡ ಅಥವಾ ಆಚೆ ದಿಂಬದ ಗಿಡ. ಇದರ ಬೇರುಗಳು ವ್ಯಾಪಿಸಿರವಲ್ಲಿ ಬೇರಿನಿಂದಲೇ ಚಿಗುರೊಡೆದು ಗುಂಪಾಗಿ ಬೆಳೆಯುತ್ತದೆ.

ದೊಡ್ಡ ಮರವೂ ಅಲ್ಲದ ಗಿಡವೂ ಅಲ್ಲದ ಅಪರೂಪದ ಔಷಧೀಯ ಸಸ್ಯ. ಇದರ ಬೇರು, ತೊಗಟೆ, ಎಲೆ ಔಷಧೀಯ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ.

ಚಿಕಿತ್ಸೆ : –

ಸರ್ಪಸುತ್ತು :- ಸೋಮವಾರ ಗಿಡದ ಬೇರು ಯಾ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ತೇಯ್ದು ಒಂದು ಚಮಚ ಗಂಧಕ್ಕೆ ಮೂರು ಚಮಚ ಅಕ್ಕಿ ತೊಳೆದ ನೀರು ಸೇರಿಸಿ ಏಳು ದಿವಸ ಸೇವಿಸುವುದು. ಗಿಡದ ಎಲೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಚೆನ್ನಾಗಿ ಅರೆದು ಸರ್ಪಸುತ್ತು ವ್ಯಾಪಿಸಿರುವ ಜಾಗದಲ್ಲಿ ಲೇಪನ ಮಾಡಬೇಕು. ಒಣಗಿದಂತೆ ಪದೇ ಪದೇ ಲೇಪಿಸುತ್ತಿರಬೇಕು.

ಅಂಡ ವೃದ್ಧಿ ಹಾಗೂ ನೋವಿನ ಗಂಟು ಕರಗಲು :-

ಗಿಡದಬೇರು ಮತ್ತು ಜಾಯಿಕಾಯಿ ಯನ್ನು ನಿಂಬೆ ಹುಳಿಯಲ್ಲಿ ತೇಯ್ದು ಚೆನ್ನಾಗಿ ಮಿಶ್ರಣ ಮಾಡಿ ಲೇಪನ ಮಾಡುವುದು.

ಹಳೆಯ ಹುಣ್ಣಿಗೆ :-

ಬೇರನ್ನು ನಿಂಬೆ ಹುಳಿಯಲ್ಲಿ ತೇಯ್ದು ತುಂಬಾ ದಿನಗಳಿಂದ ಗಣವಾಗದಿರುವ ಹುಣ್ಣಿಗೆ ಲೇಪಿಸುವುದು.

ಜಾನುವಾರು ಗಳಲ್ಲಿ ಕೆಚ್ಚಲು ಬಾವು :-

ಸೋಮವಾರದ ಗಿಡದ ತೊಗಟೆಯನ್ನು ನಿಂಬೆ ಹುಳಿಯಲ್ಲಿ ತೇಯ್ದು ಅದಕ್ಕೆ ಸ್ವಲ್ಪ ಮೈದಾಹಿಟ್ಟು ಸೇರಿಸಿ ಕೆಚ್ಚಲು ಬಾವಿರುವ ಭಾಗದಲ್ಲಿ ಲೆಪಿಸುವುದು.

ಲೇಖನ:-

“ತಜ್ಞರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಮಾಡಬೇಕು.”

” ಪಶ್ಚಿಮಘಟ್ಟ ಉಳಿಸಿ ಔಷಧೀಯ ಸಸ್ಯಗಳನ್ನು ಸಂರಕ್ಷಿಸಿ ಸಂವರ್ಧನೆ ಮಾಡೋಣ.”
Leave a Reply

Your email address will not be published. Required fields are marked *

error: Content is protected !!