ನವದೆಹಲಿ (ಸುದ್ದಿ ಮೂಲ -PTI):- ಸಸ್ಯಹಾರಿ ಮತ್ತು ಧೂಮಪಾನಿಗಳಿಗೆ ಕರೋನಾ ವೈರೆಸ್ ಅಷ್ಟೇನೂ ಹಾನಿ ಮಾಡದು ಎಂದು ಹೊಸ ಸಂಶೋಧನೆಯೊಂದು ಬೆಳಕು ಚಲ್ಲಿದೆ.
ಅರೇ ಈ ವಿಷಯ ನಿಜವಾಗಿಯೂ ಸತ್ಯವೇ ಎಂದು ನೀವು ಕೇಳಬಹುದು. ಹೌದು ಎನ್ನುತ್ತದೆ ಸರ್ಕಾರಿ ಸಾಮ್ಯದ ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡ್ರಸ್ಟಿಯಲ್ ರಿಸರ್ಚ (CSIR) ಸಂಸ್ಥೆಯ ವರದಿ.
ಸಿ.ಎಸ್.ಐ.ಆರ್ ಭಾರತ ದೇಶಾಧ್ಯಾಂತ 40 ವಿವಿಧ ಕೇಂದ್ರಗಳಲ್ಲಿ ಸಂಶೋಧನೆ ನಡೆಸಿ ಈ ವರದಿ ಸಿದ್ದಪಡಿಸಿ ಪ್ರಕಟಿಸಿದೆ.
ಈ ವರದಿ ಆಧಾರದಲ್ಲಿ ‘O’ ರಕ್ತದ ಗುಂಪು ಹೊಂದಿರುವ ,ಸಸ್ಯಹಾರಿಗಳು ಹಾಗೂ ಧೂಮಪಾನಿಗಳಿಗೆ ಕರೋನಾ ವೈರೆಸ್ ಅಷ್ಟೇನೂ ಹಾನಿ ಮಾಡದು ಎಂದು ತಿಳಿಸಿದೆ.

ಆದರೇ ‘ಬಿ’ ಮತ್ತು ‘ಎಬಿ’ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳಿಗೆ ಕರೋನಾ ಸೋಂಕು ಅತ್ಯಧಿಕ ಎಂದು ಹೇಳಿದೆ.
ಸಿ.ಎಸ್.ಐ.ಆರ್ ಈ ಅಧ್ಯಯನ ಕೈಗೊಳ್ಳಲು 10,427 ವಿವಿಧ ವಯಸ್ಕರನ್ನು ಸಂದರ್ಶಿಸಿ ಆರು ತಿಂಗಳ ಕಾಲ ಇವರ ಮೇಲೆ ಅಧ್ಯಯನ ಕೈಗೊಂಡಿತ್ತು.
ಧೂಮಪಾನಿಗಳಿಗೆ ಹಾನಿ ಇಲ್ಲ!

ಈ ಸಂಸ್ಥೆ ಕೈಗೊಂಡ ಅಧ್ಯಯನದ ವೇಳೆ ಹಲವರು ಧೂಮಪಾನಿಗಳು ಕೂಡ ಭಾಗವಹಿಸಿದ್ದರು.ಹೀಗಾಗಿ ಈ ಅಧ್ಯಯನದ ವೇಳೆ ಅವರಿಗೆ ಯಾವುದೇ ಹಾನಿ ಯಾಗಿಲ್ಲ ಎಂದು ವರದಿಯಲ್ಲಿ ಹೇಳಿದ್ದು ಚೀನಾ,ಇಟಲಿ,ನ್ಯೂಯಾರ್ಕ,ಪ್ರಾನ್ಸ್ ನಲ್ಲಿ ಕೂಡ ಇದೇ ಮಾದರಿಯಲ್ಲಿ ಅಧ್ಯಯನ ಕೈಗೊಳ್ಳಲಾಗಿದ್ದು ಅಲ್ಲಿಯೂ ಕೂಡ ಧೂಮಪಾನಿಗಳಿಗೆ ಕರೋನಾ ವೈರೆಸ್ ಸೊಂಕಿನ ಪ್ರಭಾವ ಕಮ್ಮಿ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ವರದಿಯನ್ನು ಪ್ರಕಟಿಸುವ ಮುಂಚೆ ವಿವಿಧ ವಯೋಮಾನ,ಭೋಗೋಳಿಕ ಭಿನ್ನತೆ,ಉದ್ಯೋಗ,ಹವ್ಯಾಸ ಹೀಗೆ ಹಲವು ಆಯಾಮಗಳಲ್ಲಿ ಸಂಶೋಧನೆ ಕೈಗೊಂಡು ಪ್ರಕಟಿಸಿರುವುದಾಗಿ ಸಿ.ಎಸ್.ಐ.ಆರ್ ಹೇಳಿದ್ದು ಜನಜಂಗುಳಿ ಇಲ್ಲದ ಪ್ರದೇಶ,ಖಾಸಗಿ ವಾಹನ ಬಳಕೆ,ಅಂತರ ಸಂಚಾರ ಕೂಡ ಕರೋನಾ ವೈರೆಸ್ ಸೊಂಕು ತಡೆಯುವಲ್ಲಿ ಸಫಲವಾಗಿದೆ ಎಂದು ತಿಳಿಸಿದೆ.