ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಸಿಟಿ ರವಿ-ಬೆಂಗಳೂರು ಗಲಭೆ ಪ್ರಕರಣದ ಆರೋಪಿಗಳಿಗೆ ಕಾನೂನಿನ ಪಾಠ ಕಲಿಸುತ್ತೇವೆ

283

ನವದೆಹಲಿ:- ರಾಜ್ಯದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಸಿ.ಟಿ.ರವಿ ಅವರು ಕೇಂದ್ರ ಯುವಜನ ಮತ್ತು ಕ್ರೀಡಾ ಖಾತೆ ಸಚಿವ ಕಿರಣ್ ರಿಜಿಜು ಅವರನ್ನು ನವದೆಹಲಿಯಲ್ಲಿ ಇಂದು ಭೇಟಿ ಮಾಡಿ ಕ್ರೀಡಾ ಇಲಾಖೆಯ ಚಟುವಟಿಕೆ ಹಾಗೂ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು. ನಂತರ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಇವರ ಉಪಸ್ಥಿತಿಯಲ್ಲಿ ಸಿಟಿ ರವಿಯವರು ನವದೆಹಲಿಯಲ್ಲಿ ಇಂದು ಭೇಟಿ ಮಾಡಿ ರಾಜ್ಯದ ಕಾಫಿ ಬೆಳೆಗಾರರ ಬಿಡುಗಡೆಯಾಗಬೇಕಾದ ಸಸ್ಸಿಡಿಯನ್ನು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಬೆಂಗಳೂರು ಗಲಭೆ ಪ್ರಕರಣದಲ್ಲಿರುವ ಆರೋಪಿಗಳಿಗೆ ಕಾನೂನಿನ ಪಾಠ ಕಲಿಸುತ್ತೇವೆ

ಬೆಂಗಳೂರಿನ ಕೆಜೆ ಹಳ್ಳಿ – ಡಿಜೆ ಹಳ್ಳಿ ಪ್ರಕರಣದಲ್ಲಿರುವ ಆರೋಪಿಗಳಿಗೆ ಕಾನೂನು ಪಾಠ ಹೇಳಿಕೊಡಲಾಗುವುದು ಎಂದು ಆರೋಪಿಗಳ ವಿರುದ್ಧ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ‌. ಈ ಆರೋಪಿಗಳಿಗೆ ಏಳು ದಶಕಗಳಿಂದ ಕಾನೂನು ಪಾಠ ಹೇಳಿಕೊಟ್ಟಿಲ್ಲ ಟ್ಯಾಕ್ಸ್ ಕಟ್ಟದೇ ಅಕ್ರಮವಾಗಿ ಸೌಲಭ್ಯ ಪಡೆಯುತ್ತಿದ್ದಾರೆ, ಪರವಾನಿಗೆ ಇಲ್ಲದೇ ವ್ಯವಹಾರ ಮಾಡ್ತಿದ್ದಾರೆ ನಾವು ಅವರಿಗೆ ಕಾನೂನಿನ ಪಾಠ ಹೇಳಿಲಿದ್ದೇವೆ ಎಂದರು.

ಘಟನೆಯಲ್ಲಿ ಭಾಗಿಯಾದವರು ಮುಗ್ದರು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹಣಕಾಸಿನ ನೆರವು ನೀಡುತ್ತಿದ್ದಾರೆ‌ ಮುದೊಂದು ದಿನ ಕಾಶ್ಮೀರ ಉಗ್ರರಿಗೂ ಹಣಕಾಸಿನ ನೆರವು ನೀಡುತ್ತಾರೆ ಎಂದು ಸಿ.ಟಿ ರವಿ ಆರೋಪಿಸಿದರು.

ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅಖಂಡ ಶ್ರೀನಿವಾಸ್ ಮನೆ ಸುಟ್ಟಿರುವುದು, ವಾಹನ ಸುಟ್ಟು ಹಾಕಿರುವುದು ಸಮರ್ಥಿಸಿಕೊಳ್ಳಲಿದೆಯೇ ಕಾಂಗ್ರೆಸ್ ಜಾತಿ ರಾಜಕಾರಣ ಮಾಡಿ ಕೆಲವು ರಾಜ್ಯಗಳಿಗೆ ಸೀಮಿತ ವಾಗಿದೆ, ಮುಂದೆ ಕೆಲವು ಕ್ಷೇತ್ರಗಳಿಗೆ ಸೀಮಿತವಾಗಲಿದೆ ಎಂದು ಡಿ.ಕೆ ಶಿವ ಆರೋಪಗಳಿಗೆ ಟಾಂಗ್ ನೀಡಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ