ಬುಧವಾರದ ದಿನ ಭವಿಷ್ಯ.

421

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ, ತಿಥಿ: ನವಮಿ,
ನಕ್ಷತ್ರ: ರೇವತಿ,
ರಾಹುಕಾಲ: 12.22 ರಿಂದ 1.47
ಗುಳಿಕ ಕಾಲ: 10.56 ರಿಂದ 12.22
ಯಮಗಂಡಕಾಲ: 8.04 ರಿಂದ 9.30

ಮೇಷರಾಶಿ
ಯತ್ನ ಕಾರ್ಯದಲ್ಲಿ ವಿಳಂಬ ,ಉದ್ಯೋಗ ತೊಂದರೆ,ಕುಟುಂಬದಲ್ಲಿ ತೊಂದರೆ,ಸ್ಥಳ ಬದಲಾವಣೆ, ವಾಹನ ರಿಪೇರಿಯ ಖರ್ಚು ಬಂದೀತು. ಮನೆಯಲ್ಲಿ ಶುಭ ಕಾರ್ಯ ನಡೆಸುವ ಪ್ರಯತ್ನ,ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭರಾಶಿ
ದೈಹಿಕವಾಗಿ ಸ್ವಲ್ಪ ಸುದೃಢರಾದರೂ ಅನಾವಶ್ಯಕ ಭೀತಿ ಬೇಡ,. ಪತ್ನಿಯ ಆರೋಗ್ಯದಲ್ಲಿ ಏರುಪೇರು, ಕ್ರೀಡಾಳುಗಳಿಗೆ ಸ್ಥಾನ ಪ್ರಾಪ್ತಿ, ಆದಾಯವು ಏರಿಕೆಯಾದರು ಖರ್ಚು ಏರಿಕೆ, ಮಾನಸಿಕ ಒತ್ತಡ, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ಮನಃಶಾಂತಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ ಹೆಚ್ಚಲಿದೆ.

ಮಿಥುನರಾಶಿ
ಹಿರಿಯರಲ್ಲಿ ಭಕ್ತಿ ಗೌರವ, ಸ್ತ್ರೀಸೌಖ್ಯ, ಸ್ಥಳ, ನಿವೇಶನಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಕೋರ್ಟು ಕಚೇರಿಯ ದರ್ಶನ ಭಾಗ್ಯ, ರಾಜಕೀಯದಲ್ಲಿ ಸ್ಥಾನಕ್ಕಾಗಿ ಹೋರಾಟ ಮಾಡಬೇಕಾದೀತು. ಹಿತಶತ್ರುಗಳ ಪೀಡೆಯು ಅರಿವಿಲ್ಲದೆ ನಡೆದೀತು. ಆಸ್ತಿಯ ವಿಚಾರಗಳು ಬಗೆಹರಿಯಲಿವೆ, ಋಣಭಾದೆ, ಯತ್ನ ಕಾರ್ಯಗಳಲ್ಲಿ ಜಯ.

ಕಟಕರಾಶಿ
ಹಿರಿಯರಲ್ಲಿ ಭಕ್ತಿ ಗೌರವ, ಸ್ತ್ರೀಸೌಖ್ಯ, ಶತ್ರುಪೀಡೆಯ ಸ್ವಲ್ಪ ಕಡಿಮೆಯಾಗಲಿದೆ, ರೈತಾಪಿ ಜನರಿಗೆ ಜಾನುವಾರುಗಳಿಂದ ಸ್ವಲ್ಪ ನಷ್ಟ ಸಂಭವ, . ಕೆಲಸಗಾರರ ಮುಷ್ಕರ ಯಾ ಅಭಾವವು ಆಹಾರೋದ್ಯಮದಲ್ಲಿ ಭಾರೀ ನಷ್ಟ ಉಂಟುಮಾಡಬಹುದು. ಆಸ್ತಿಯ ವಿಚಾರಗಳು ಬಗೆಹರಿಯಲಿವೆ, ಋಣಭಾದೆ, ಯತ್ನ ಕಾರ್ಯಗಳಲ್ಲಿ ಜಯ.

ಸಿಂಹರಾಶಿ
ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಿತ್ತ ಖಾತೆ, ಹಣಕಾಸು, ಅಪಚಾರ, ಅಪವಾದ ಭಯ ಸಣ್ಣ ತಪ್ಪಿಗಾಗಿ ದೊಡ್ಡ ಬೆಲೆ ತೆರಬೇಕಾದೀತು. ಮನೆಯ ಮದುವೆಯ ಬಗ್ಗೆ ಮಾತುಕತೆ ನಡೆದು ಮುರಿದು ಬೀಳುವ ಸಂಭವ, ಮುನ್ನಡೆಯಿರಿ. ವಿವಾಹಕ್ಕೆ ಅಡಚಣೆ, ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ ಎಚ್ಚರ.

ಕನ್ಯಾರಾಶಿ
ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಆದಾಯ, ಕಫ‌ ಹಾಗೂ ನರದೌರ್ಬಲ್ಯದಿಂದ ಆರೋಗ್ಯಕ್ಕೆಹಾನಿ, ತಾಯಿಗೂ ಕಾಲು, ಬೆನ್ನು, ಸಂಧಿವಾತಗಳಿಂದ ಆರೋಗ್ಯದಲ್ಲಿ ಏರುಪೇರು, ನೌಕರ ವರ್ಗಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ, ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ.

ತುಲಾರಾಶಿ
ಕುಟುಂಬದಲ್ಲಿ ಸಂತಸ, ವಿದ್ಯಾರ್ಥಿಗಳಿಗೆ ಹೊಸ ಗೆಳತನದ ಪ್ರಾಪ್ತಿ, . ಯಾತ್ರೆ, ಪ್ರವಾಸಗಳಿಂದ ಮನಸ್ಸಿಗೆ ತುಂಬಾ ಸಂತೋಷ, ಸಮಾಧಾನ ದೊರಕೀತು. ಯಂತ್ರ ಸ್ಥಾವರ, ರೀಪೇರಿ ಕೆಲಸಗಾರರಿಗೆ ಉದ್ಯೋಗದಲ್ಲಿ ಆದಾಯ ಹೆಚ್ಚಲಿದೆ. ಸ್ವಪ್ರಯತ್ನದಿಂದ ಕಾರ್ಯಸಿದ್ಧಿ, ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ.

ವೃಶ್ಚಿಕರಾಶಿ
ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ಮಕ್ಕಳೊಡನೆ ಭಿನ್ನಾಭಿಪ್ರಾಯ, ವಾಹನಾಧಿ ಗಳಿಂದ ನಷ್ಟ ಸಂಭವ. ಯಾವುದೇ ಕೆಲಸ ಕಾರ್ಯಗಳೂ ವಿಘ್ನ ಭೀತಿಯಿಂದಾಗಿ ಸ್ಥಗಿತಗೊಳ್ಳುವುದು. ಗೃಹದಲ್ಲಿ ಚಿಂತೆ ಅವರಿಸಲಿದೆ. ಪ್ರವಾಸವು ಕೂಡಿಬರಲಿದೆ. ಕುಲದೇವರನ್ನು ಪೂಜಿಸಿ, ತೀರ್ಥಯಾತ್ರೆ ದರ್ಶನ, ಅತಿಯಾದ ನಿದ್ರೆ.

ಧನಸ್ಸುರಾಶಿ
ಶ್ರಮಕ್ಕೆ ತಕ್ಕ ಫಲ, ಮನೆಯಲ್ಲಿ ಶುಭ ಕಾರ್ಯ, ಧನಾಗಮನವು ನಿಧಾನವಾದೀತು. ಆದಾಯದ ಮೂಲವು ವರ್ಧಿಸಲಿದೆ. ಹಳೆಯ ಬಾಕಿಯು ವಸೂಲಿಯಾಗಲಿದೆ. ಪ್ರವಾಸಾದಿಗಳಿಂದ ಹರ್ಷ ತಂದೀತು. ಚಿನ್ನಾಭರಣಗಳ ಖರೀದಿಯಿಂದ ಸಂತಸವಾದೀತು. ವಿವಾಹ ಯೋಗ, ಸುಖ ಭೋಜನ, ದ್ರವ್ಯ ಲಾಭ.

ಮಕರರಾಶಿ
ಇತರರೊಂದಿಗೆ ಮಾತನಾಡುವಾಗ ಎಚ್ಚರ, ಆರೋಗ್ಯ ಸುಧಾರಣೆಯಿಂದ, ದೇವತಾ ಕಾರ್ಯಗಳಿಂದ ತೃಪ್ತಿ ದೊರಕಲಿದೆ. ಬಂಧುಗಳ ಸಹಕಾರದಿಂದ ಮಂಗಲಕಾರ್ಯವು ಮುಕ್ತಾಯಗೊಂಡಿತು. ರೋಗ ರುಜಿನಗಳಿಗೆ ಹೆದರಿ ತಲೆಬಿಸಿ ಮಾಡಿಕೊಳ್ಳುವುದು ಬೇಡ.ಉದ್ಯೋಗದಲ್ಲಿ ಬಡ್ತಿ, ಬಂಧು ಮಿತ್ರರ ಸಮಾಗಮ, ದ್ರವ್ಯಲಾಭ.

ಕುಂಭರಾಶಿ
ಹೊಸ ಉದ್ಯೋಗ ಲಭ್ಯ, ಆದಾಯ ಮೀರಿ ಖರ್ಚುವೆಚ್ಚಗಳು ಬಂದಾವು. ಆದರಿಂದ ತಲೆಬಿಸಿಯಾಗಲಿದೆ. ನಿವೇಶನ ಖರೀದಿ, ಯಾ ಜಾಗ ಖರೀದಿಯ ಸಮಯವು ಒದಗಿ ಬಂದೀತು. ವ್ಯವಹಾರವು ಬದಲಿಯಾಗಲಿದೆ. ನಿಮಗೆ ಶುಭವಿದೆ. ಅಧಿಕ ಖರ್ಚು, ಸ್ಥಳ ಬದಲಾವಣೆ, ದುಡುಕು ಮನೋಭಾವ, ಮನಕ್ಲೇಷ.

ಮೀನರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕಾರ್ಯಭಾರದಲ್ಲಿ ಪಾಲು ಬಂಡವಾಳಕ್ಕೆ ಕುತ್ತು ಬಂದೀತು. ಹಿರಿಯತನಕ್ಕೂ ಸಂಚಕಾರ ಬಂದೀತು. ದೇಹಕ್ಕೆ ಸುಸ್ತು, ಅರ್ಜೀಣದ ಉಪದ್ರಗಳು ಕಂಡುಬರಲಿದೆ. ಶತ್ರು ವಿರೋಧ, ಗೃಹಕಲಹವು ಕಂಡುಬಂದೀತು. ಮಾತೃವಿನ ಶುಭಹಾರೈಕೆ, ವಾಹನ ರಿಪೇರಿ, ಪರರ ಧನ ಪ್ರಾಪ್ತಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ