ದಾಂಡೇಲಿ-ಪ್ಲಾಸ್ಟಿಕ್ ತಿಂದು ಸ್ಥಳದಲ್ಲೇ ಮೃತಪಟ್ಟ ಹಸುವಿನ ಅಂತ್ಯ ಸಂಸ್ಕಾರ ಮಾಡಿದ ಯುವಕರು.

240

ಕಾರವಾರ :- ಇಂದಿನ ದಿನಗಳಲ್ಲಿ ಮಾನವೀಯತೆ ,ಮನುಷ್ಯ ಧರ್ಮವನ್ನೇ ಮರೆತಿರುವಾಗ ಬಿಡಾಡಿ ಹಸುವೊಂದು ಪ್ಲಾಸ್ಟಿಕ್ ತಿಂದು ಅಸ್ವಸ್ಥವಾಗಿ ಸಾವು ಕಂಡಾಗ ಆ ಹಸುವನ್ನು ವಿಶೇಷ ರೀತಿಯಲ್ಲಿ ಪೂಜಿಸಿ ಸಾರ್ವಜನಿಕರು ಅಂತ್ಯ ಸಂಸ್ಕಾರ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಇಂದು ನಡೆದಿದೆ.

ದಾಂಡೇಲಿ ನಗರದಲ್ಲಿ ಬೀದಿಯಲ್ಲಿ ಮೇಯುವ ಹಸುವೊಂದು ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತಿಂದಿದೆ.
ಈ ವೇಳೆ ಅಸ್ವಸ್ಥವಾಗಿ ಅಲ್ಲಿಯೇ ಕುಸಿದು ಬಿದ್ದಿದೆ. ಇದನ್ನು ಗಮನಿಸಿದ ಪ್ರವೀಣ್ ಕೊಠಾರಿ ಎಂಬುವವರು ಹಾಗೂ ಆತನ ಸ್ನೇಹಿತರು ಸ್ಥಳಕ್ಕೆ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ‌. ಆದರೇ ಚಿಕಿತ್ಸೆ ಫಲಕಾರಿಯಾಗದೇ ಹಸುವು ಸಾವು ಕಂಡಿದ್ದು , ನಂತರ ಪ್ರವೀಣ್ ಹಾಗೂ ಸ್ಥಳೀಯ ಯುವಕರು ಸೇರಿ ಹಸುವಿನ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ.
ಸಾವು ಕಂಡ ಜಾಗದಲ್ಲಿ ಹಸುವಿಗೆ ಪೂಜೆ ಸಲ್ಲಿಸಿ ಅದನ್ನು ನಗರದ ಬೇರೆಡೆ ಕೊಂಡೊಯ್ದು ವಿಧಿ ವಿಧಾನದ ಮೂಲಕ ಸಂಸ್ಕಾರ ಮಾಡಿ ಮಾನವೀಯತೆ ತೋರಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ