ಮನೆಯಲ್ಲಿದ್ದ ಸಿಲೆಂಡರ್ ಸ್ಪೋಟ: ಗೃಹಪಯೋಗಿ ವಸ್ತುಗಳಿಗೆ ಬೆಂಕಿ.

787

ಕಾರವಾರ :- ಅಡುಗೆ ಅನಿಲ ಸಿಲೆಂಡರ್ ಸ್ಪೋಟ ಗೊಂಡು ಮನೆಯೊಳಗಡೆಯಿದ್ದ ಪ್ರಿಜ್, ಸೋಪಾ ಸೆಟ್ ಸೇರಿದಂತೆ ಹಲವು ಸಾಮಗ್ರಿ ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ
ದಾಂಡೇಲಿಯ ಟೌನ್ ಶಿಪ್ ವಸತಿ ಪ್ರದೇಶದಲ್ಲಿ ನಡೆದಿದೆ.

ಶ್ರೀನಾಥ ಪ್ರಭು ಎಂಬವರಿಗೆ ಸೇರಿದ ಮನೆಯಾಗಿದ್ದು
ಖಾಲಿಯಾದ ಸಿಲೆಂಡರ ಬದಲಾಯಿಸಿ ಹೊಸ ಸಿಲೆಂಡರ ಜೋಡಿಸುವಾಗ ಸಿಲೆಂಡರ್ ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿದೆ. ಇದರಿಂದಾಗಿ ಸಿಲೆಂಡರ್ ಸ್ಪೋಟಗೊಂಡು ಮನೆಯೊಳಗಡೆಯಿದ್ದ ಪ್ರಿಜ್, ಸೋಪಾ ಸೆಟ್ ಸೇರಿದಂತೆ ಹಲವು ಸಾಮಗ್ರಿ ಬೆಂಕಿಗಾಹುತಿಯಾಗಿದ್ದು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.ದಾಂಡೇಲಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ