ದಾಂಡೇಲಿ:ಕಾಳಿ ನದಿಯಲ್ಲಿ ಆನೆಯನ್ನೇ ಕೊಂದಿತು ಮೊಸಳೆಗಳು!

2016

ಕಾರವಾರ(ಮೇ 22):- ನೀರು ಕುಡಿಯಲು ಬಂದ ಆನೆಯನ್ನು ಮೊಸಳೆಗಳು ಹಿಡಿದು ಬಲಿ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ನಡೆದಿದೆ.

ದಾಂಡೇಲಿಯ ಬೊಮ್ಮನಳ್ಳಿ ಪಿಕಪ್ ಡ್ಯಾಂಬಳಿ ಹಿನ್ನೀರಿಗೆ ದಾಹ ತೀರಿಸಿಕೊಳ್ಳಲು ಎಲ್ಲಾ ಪ್ರಾಣಿಗಳೂ ಬಂದು ನೀರು ಕುಡಿದು ಹೋಗುತ್ತವೆ. ಈ ವೇಳೆ ಮೊಸಳೆಗಳು ದಾಳಿ ಮಾಡುವುದೂ ಸಾಮಾನ್ಯ.

ಆದರೇ ಇದೇ ಮೊದಲಬಾರಿಗೆ ನೀರು ಕುಡಿಯಲು ಬಂದಿದ್ದ ಆನೆಯನ್ನು ಹಿಡಿದು ನದಿಯೊಳಗೆ ಎಳೆದೊಯ್ದು ಮೊಸಳೆಗಳು ಗಾಯಗೊಳಿಸಿದ್ದು ಆನೆ ಸ್ಥಳದಲ್ಲಿಯೇ ಮೃತಪಟ್ಟಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಸತತ ಕಾರ್ಯಾಚರಣೆ ನಡೆಸಿ ಆನೆಯನ್ನು ನದಿಯಿಂದ ಹೊರತೆಗೆದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!