BREAKING NEWS
Search

ದಾಂಡೇಲಿ-ಅಕ್ರಮ ಮರಳುಗಾರಿಕೆ ತಡೆಯಲು ಹೋದ ಅರಣ್ಯ ಪಾಲಕನ ಮೇಲೆ ಮಾರಣಾಂತಿಕ ಹಲ್ಲೆ!

3451

ಕಾರವಾರ :- ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಮರಳುಗಾರಿಕೆ ಮಾಡುತಿದ್ದವರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆಯಲು ಹೋದಾಗ ಆತನಮೇಲೆ ನಾಲ್ಕೈದು ಜನರ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಸಂದೀಪ್ ಗೌಡ ಹಲ್ಲೆಗೊಳಗಾದ ಅರಣ್ಯ ಸಿಬ್ಬಂದಿಯಾಗಿದ್ದು ತಲೆಗೆ ಹೆಚ್ಚಿನ ಹೊಡೆತ ಬಿದ್ದಿದ್ದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದಿದ್ದು ಏನು?

ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ಹಳಿಯಾಳದ ಕೃಷ್ಣ ಷಡೇಕರ್ ,ದೇವರಾಜ್ ಎಂಬುವವರು ಅಕ್ರಮವಾಗಿ ಟ್ರಕ್ ನೊಂದಿಗೆ ಪ್ರವೇಶಿಸಿದ್ದಾರೆ.ಈ ವೇಳೆ ಇದನ್ನು ತಡೆದ ಸಂದೀಪ್ ಗೌಡ ಹಾಗೂ ಬಸವನ ಗೌಡ ಅರಣ್ಯ ಸಿಬ್ಬಂದಿಗಳು ತಡೆದಿದ್ದಾರೆ. ಈವೇಳೆ ಅರಣ್ಯ ಪಾಲಕ ಸಂದೀಪ್ ಗೌಡ ಹಾಗೂ ಕೃಷ್ಣ ರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಂದೀಪ್ ಗೌಡ ಕೃಷ್ಣ ರವರ ಮೇಲೆ ಹಲ್ಲೆ ಮಾಡಿದ್ದಾರೆ .

ಈವೇಳೆ ಆತನಿಗೆ ಪೆಟ್ಟು ಬಿದ್ದಿದ್ದು ನಂತರ ಕೃಷ್ಣ ಮತ್ತು ಆತನ ತಂಡ ಸಂದೀಪ್ ಗೌಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು

ಘಟನೆ ಸಂಬಂಧ ದಾಂಡೇಲಿ ಗ್ರಾಮಾಂತರ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ