ದಾಂಡೇಲಿ:- ಕಚೇರಿಗೆ ಮಾಸ್ಕ ಧರಿಸಿ ಬರುವಂತೆ ನಗರಸಭಾ ಸದದ್ಯರಿಗೆ ಪೌರಾಯುಕ್ತ ಗಣಪತಿ ಶಾಸ್ತ್ರಿ ರವರು ಹೇಳಿದ್ದಕ್ಕೆ ಅಧಿಕಾರಿಯ ವಿರುದ್ಧ ಕುಪಿತಗೊಂಡ ನಗರಸಭಾ ಸದಸ್ಯರು ಪೌರಾಯುಕ್ತರ ವಿರುದ್ಧ ಗಲಾಟೆ ಮಾಡಿ ಮಾಸ್ಕ ಧರಿಸಲು ಹೇಳಿದ ಪೌರಾಯುಕ್ತರಿಗೆ ಕ್ಷಮೆ ಕೇಳಿಸಿದ ಘಟನೆ ಶುಕ್ರವಾರ ದಾಂಡೇಲಿ ನಗರಸಭಾ ಕಚೇರಿಯಲ್ಲಿ ನಡೆದಿದೆ.
ದಾಂಡೇಲಿಯ ನಗರಸಭೆಯ ಸದಸ್ಯ ಮೌಲಾಲಿ ಉಲ್ಲಾ ಮಾಸ್ಕ ಧರಿಸದೇ ಕಚೇರಿಗೆ ಬಂದಿದ್ದರು. ಈ ವೇಳೆ ಮಾಸ್ಕ ಧರಿಸದೇ ಕಚೇರಿಗೆ ಬರಬೇಡಿ ಎಂದು ಪೌರಾಯುಕ್ತರು ಹೇಳಿದ್ದಾರೆ.
ಈ ವೇಳೆ ಕುಪಿತಗೊಂಡ ನಗರಸಭಾ ಸದಸ್ಯ ಪೌರಾಯುಕ್ತರ ಬಳಿ ಗಲಾಟೆಗೆ ಇಳಿದಿದ್ದಾರೆ.
ಪೌರಾಯುಕ್ತರ ವಾಹನಕ್ಕೆ ಅಡ್ಡಹಾಕಿ ಮೌಲಾಲಿ ಉಲ್ಲಾ ಸೇರಿದಂತೆ ಅನೇಕ ನಗರಸಭಾ ಸದಸ್ಯರು ತಮಗೆ ಅವಮಾನ ಮಾಡಲಾಗಿದೆ,ಕ್ಷಮೆ ಕೇಳದೇ ಹೊರಡುವಂತಿಲ್ಲ ಎಂದು ವಾಹನಕ್ಕೆ ಗೆರಾವ್ ಹಾಕಿದ್ದಾರೆ.
ಗಲಾಟೆ ಪ್ರಕೋಪಕ್ಕೆ ಹೋಗಿ ದಾಂಡೇಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಕೊನೆಗೂ ಪಟ್ಟು ಬಿಡದ ಸದಸ್ಯರು ಪೌರಾಯುಕ್ತರಿಂದ ಕ್ಷಮಾಪಣೆ ಕೇಳಿಸಿದರು.