ದಾಂಡೇಲಿ: 3.250 ಕೆಜಿ ಗಾಂಜ ವಶ

718

ಕಾರವಾರ :- ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಯೊರ್ವನನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದು, ಅಂದಾಜು 1.5 ಲಕ್ಷ ಮೌಲ್ಯದ 3.250 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ದಾಂಡೇಲಿಯ 14ನೇ ಬ್ಲಾಕ್ ಟೌನ್ ಶಿಪ್ ನ ಫಾರುಖ್ ಸಲೀಮ್ ಶೇಖ್ (38) ಬಂಧಿತ ಆರೋಪಿ. ಈತ ದಾಂಡೇಲಿಯ ಬರ್ಚಿ ಕ್ರಾಸ್ ಹತ್ತಿರ ಗಾಂಜಾ ಸಾಗಾಟ ಮಾಡಿಕೊಂಡು ಬರುತ್ತಿದ್ದಾಗ ಮಾಲು ಸಮೇತ ಬಂಧಿಸಲಾಗಿದೆ.

ಆರೋಪಿತನಿಂದ ಕೃತ್ಯವನ್ನು ನಡೆಸಲು ಉಪಯೋಗಿಸಿದ ಹೀರೊ ಸ್ಪ್ಲೆಂಡರ್ ಮೊಟಾರ್ ಸೈಕಲ್ (ಕೆಎ-65 J2016 ) ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಂಡೇಲಿ ಗ್ರಾಮಿಣ ಪೊಲೀಸ್ ಠಾಣಾ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ