BREAKING NEWS
Search

ಕುಮಟಾ ದಲ್ಲಿ ರೈತರ ಅನ್ನಕ್ಕೆ ಕನ್ನ ಹಾಕಿದ ಸಹಕಾರ ಸಂಘ! ವಂಚಿಸಿತೇ ಲಕ್ಷ ಲಕ್ಷ !

1125

ಕಾರವಾರ:- ಸರ್ಕಾರ ರೈತರಿಗೆ ಸಾಲ ಮನ್ನಾ ದಿಂದ ಹಿಡಿದು ಕೃಷಿ ಯೋಜನೆಗಳಿರಲಿ ಅದರಲ್ಲಿನ ಪಾಲ ಅಧಿಕಾರಿಗಳಿಗೆ ಹೋಗಲೇ ಬೇಕು. ಹೋಗದಿದ್ರೂ ರೈತರ ಮುಗ್ಧತೆಯನ್ನ ಬಳಸಿಕೊಂಡು ಮೊಸ ಮಾಡುತ್ತಾರೆ.
ಇಂತಹ ಘಟನೆಯೊಂದು ಕುಮಟಾ ತಾಲೂಕಿನಲ್ಲಿ ನಡೆದಿದೆ.

ವಂಚನೆಗೊಳಗಾದ ರೈತರಿಂದ ಮುತ್ತಿಗೆ

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಪ್ರಯೋಜನೆ ರೈತರ ಬೆರಳಿಗೂ ಮುಟ್ಟಿಲ್ಲ.
ಕಳೆದ ಮೂರು ವರ್ಷದಿಂದ ರೈತರಿಗೆ ಬೆಳೆ ಸಾಲ ಸಿಗದೇ ತೊಂದರೆ ಅನುಭವಿಸುತಿದ್ದಾರೆ. ಸೇವಾ ಸಹಕಾರಿ ಸಂಘ ರೈತರಿಗೆ ಸೌಲಭ್ಯದಿಂದ ವಂಚಿಸುತ್ತಿದೆ.

ಪ್ರತಿಭಟನಾ ನಿರತ ರೈತರು.

ಇದಕ್ಕೆ ಪುಷ್ಟಿ ನೀಡುವಂತೆ ಕುಮಟಾ ತಾಲೂಕಿನ ಬರಗದ್ದೆ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಪಟಗಾರ್ ಕೆಲವು ಸಂಶಯಾಸ್ಪದ ನಡೆತೆಯ ಕುರಿತು ಆರೋಪಿಸಿ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯವ್ಯಾಪಿ ಕ್ಷೇತ್ರದ ರೈತರು, ಸದಸ್ಯರು ಇಂದು ಕುಮಟಾದ ಕೆ.ಡಿ.ಸಿ.ಸಿ ಬ್ಯಾಂಕ ಎದುರು ಪ್ರತಿಭಟಿಸಿದರು.

ಆಗಿದ್ದೇನು? ರೈತರಿಗೆ ಟೋಪಿ ಹಾಕಿದ್ರ ಕಾರ್ಯದರ್ಶಿ!

ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘ ಕಳೆದ 3 ವರ್ಷಗಳಿಂದ ಬೆಳೆಸಾಲ ನೀಡದಿರುವದು ರೈತರಿಗೆ ಸೌಲಭ್ಯ ವಂಚಿತರನ್ನಾಗಿಸಿದೆ. 2007 ರಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ 50,೦೦೦ ರೂ. ಸಾಲಮನ್ನಾವನ್ನು ಸರ್ಕಾರ ಸಂಪೂರ್ಣವಾಗಿ ನೀಡಿದೆ. ಆದರೆ ಬರಗದ್ದೆ ಸೇವಾ ಸಹಕಾರಿ ಸಂಘ ಇನ್ನೂ ತನ್ನ ಸದಸ್ಯರ ಖಾತೆಗೆ ಸಂಪೂರ್ಣವಾಗಿ ಹಣ ಜಮಾ ಮಾಡಿಲ್ಲ. ಅಲ್ಲದೆ ರೈತರಿಗೆ ಸಾಲ ಮುಕ್ತ ಪ್ರಮಾಣ ಪತ್ರ ಸಹ ನೀಡಿಲ್ಲ ಎಂದು ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಯ ವಿರುದ್ಧ ಜನರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೆಡಿಸಿಸಿ ಬ್ಯಾಂಕ್ ಕುಮಟಾ ಶಾಖೆಯ ಸಿಬ್ಬಂದಿ ಹಾಗೂ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಇಲ್ಲಿನ 200ಕ್ಕೂ ಅಧಿಕ ರೈತರಿಗೆ ವಿತ್‌ಡ್ರಾವಲ್ ಚೆಕ್ಕಿಗೆ ಮೊತ್ತ ನಮೂದಿಸಿದೇ ಸಹಿ ಪಡೆದುಕೊಂಡಿರುವದು ರೈತರ ಪ್ರಮುಖ ಆಕ್ರೋಶಕ್ಕೆ ಕಾರಣವಾಗಿದೆ.

ನಿಮ್ಮೂರಿನ ಸುದ್ದಿಗಳನ್ನು ನೀವೂ ಕಳುಹಿಸಬಹುದು ಮೇಲಿನ ನಂಬರ್ ಗೆ ವಾಟ್ಸ್ ಅಪ್ ಮಾಡಿ

ಅದರಲ್ಲೂ ಕೆಲವರ ಮನೆಮನೆಗೆ ತೆರಳಿ ಸಹಿ ಪಡೆದುಕೊಂಡಿದ್ದಾರೆ ಎಂಬ ಮಾತೂ ಕೇಳಿಬಂದವು. ಕಾನೂನಾತ್ಮಕವಾಗಿ ಇಂತಹ ಚೆಕ್ಕನ್ನು ಬ್ಯಾಂಕಿಗೆ ತೆರಳಿ ಅಲ್ಲಿಯೇ ಬರೆದು ಕೊಟ್ಟು ಹಣ ಪಡೆಯಬೇಕಾಗುತ್ತದೆ.

ಆದರೆ ನಿಯಮ ಉಲ್ಲಂಘಿಸಿ ಬ್ಯಾಂಕ್ ಸಹಕಾರಿ ಸಂಘದ ಕಾರ್ಯದರ್ಶಿ ಮೂಲಕ ಸಹಿ ಪಡೆದುಕೊಂಡಿರುವದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಹೀಗಾಗಿ ಸೇವಾ ಸಹಕಾರಿ ಸಂಘದ ಕಾರ್ಯವೈಖರಿ ಬಗ್ಗೆ ರೈತರು ಸಂಶಯ ವ್ಯಕ್ತ ಪಡಿಸಿದ್ದರಲ್ಲದೇ, ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆಯನ್ನೂ ವ್ಯಕ್ತ ಪಡಿಸಿದ್ದಾರೆ.

ಹಿಂದಿನ ರಾಜ್ಯ ಸರ್ಕಾರ ರೈತರ 1 ಲಕ್ಷದ ವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ 45ರಿಂದ 41ಸಾವಿರ ಸಾಲ ಪಡೆದ ರೈತರ ಖಾತೆಗೂ 1 ಲಕ್ಷ ಸಾಲಮನ್ನಾ ಮಾಡಿಸಿ ಕಾರ್ಯದರ್ಶಿ ಲಕ್ಷ್ಮಣ್ ಪಟಗಾರ್ ಅಕ್ರಮ ಎಸಗಿದ್ದಾರೆ, ಅದಲ್ಲದೇ, ಕೆಲವರ ವಿತ್‌ಡ್ರಾವಲ್ ಚೆಕ್ಕಿನ ಮೊತ್ತವನ್ನು ಡ್ರಾ ಮಾಡಲಾಗಿದೆ. ಆದರೆ ರೈತರಿಗೆ ಯಾವ ಮೊತ್ತವನ್ನೂ ನಿಡಿಲ್ಲ ಎಂದು ತಿಳುದಯ ಬಂದಿದ್ದು ತನಿಖೆಗೆ ರೈತರು ಆಗ್ರಹಿಸಿದ್ದಾರೆ.
Leave a Reply

Your email address will not be published. Required fields are marked *