ಶಿವಮೊಗ್ಗ :- ನಾಯಿ ದಾಳಿಗೆ ತುತ್ತಾಗಿದ್ದ ಜಿಂಕೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉರಗನಹಳ್ಳಿಯಲ್ಲಿ ನಡೆದಿದೆ.

ಆಹಾರ ಅರಸುತ್ತ ಕಾಡಿನಿಂದ ಗ್ರಾಮದ ಕಡೆಗೆ ಬಂದಿತ್ತು ಜಿಂಕೆಯ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಸುಪರ್ಧಿಗೆ ನೀಡಿದ್ದರು.
ಡಿ.ಆರ್. ಎಫ್.ಒ ಸತ್ಯನಾರಾಯಣ, ಅರಣ್ಯ ರಕ್ಷಕ ವಿರೂಪಾಕ್ಷಪ್ಪ ಅವರು ಗಾಯಗೊಂಡ ಜಿಂಕೆಯನ್ನು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಕಾಡಿಗೆ ಬಿಡುವ ವೇಳೆಗೆ ಜಿಂಕೆ ಮೃತಪಟ್ಟಿದೆ.