BREAKING NEWS
Search

ಭದ್ರಾವತಿ ಉಕ್ಕಿನ ಕಾರ್ಖಾನೆ ಬಂಡವಾಳ ಹಿಂತೆಗೆತ ಪ್ರಕ್ರಿಯೆ ನಿಲ್ಲಿಸಲು ಮುಖ್ಯಮಂತ್ರಿ ,ಸಂಸದರಿಂದ ಕೇಂದ್ರ ಸಚಿವರಿಗೆ ಮನವಿ

147

ದೆಹಲಿ:-ಉಕ್ಕು ಮತ್ತು ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರದಾನ್ ಅವರನ್ನು ಭೇಟಿ ಮಾಡಿದ ಮಾನ್ಯ ಮುಖ್ಯಮಂತ್ರಿಗಳು ಹಾಗು ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿಯ ವಿಐಎಸ್ಎಲ್ ಬಗ್ಗೆ ಮಾನ್ಯ ಸಚಿವರ ಜೊತೆ ಚರ್ಚೆ ನಡೆಸಿದರು.

ಈ ವೇಳೆ ವಿಐಎಸ್ಎಲ್ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನ ನಿಲ್ಲಿಸುವಂತೆ ಮಾನ್ಯ ಸಚಿವರಲ್ಲಿ ಮನವಿ ಮಾಡಿದರು

ವಿಐಎಸ್ಎಲ್ ಬಗ್ಗೆ ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ಜನತೆಗೆ ಭಾವನಾತ್ಮಕ ಸಂಬಂಧವಿದೆ

ನೀತಿ ಆಯೋಗದ ಸಲಹೆಯಂತೆ ಬಂಡಾವಳ ಹಿಂತೆಗೆತಕ್ಕೆ ಚಾಲನೆ ನೀಡಲಾಗಿದೆ ಆದರೆ ಈವರೆಗು ಯಾವುದೇ ಖಾಸಗಿ ಬಂಡವಾಳಗಾರರು ಈ ಬಗ್ಗೆ ಒಲವು ತೋರಿಲ್ಲ

ಈ ವಿಐಎಸ್ಎಲ್ ಉತ್ಪಾದಿಸುವ ಉಕ್ಕು ಉತ್ಕೃಷ್ಟ ಗುಣಮಟ್ಟದ ಕಬ್ಬಿಣವಾಗಿದ್ದು ದೇಶದಲ್ಲಿಯೇ ಹೆಸುರುವಾಸಿಯಾಗಿದೆ.

ಹೀಗಾಗಿ ಬಂಡವಾಳ ಹಿಂತೆಗೆತವನ್ನು ಕೈಬಿಟ್ಟು ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳು ಹಾಗು ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರ ಅವರು ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರಲ್ಲಿ ಮನವಿ ಮಾಡಿದರು




Leave a Reply

Your email address will not be published. Required fields are marked *