ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ- ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದೇನು ಗೊತ್ತಾ?

1759

ಕಾರವಾರ: ಮುಂದಿನ ಮೂರ್ನಾಲ್ಕು ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳದ ಪರಿಸ್ಥಿತಿ ಬೇರಾವ ತಾಲೂಕಿಗೂ ಬರಬಾರದೆಂಬ ಉದ್ದೇಶ ನಮ್ಮದು. ಸೋಮವಾರದ ನಂತರ ಎರಡನೇ ಹಂತದ ಸಡಿಲಿಕೆ ನೀಡಲು ನಿರ್ಧರಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಯ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ದೇಶನವನ್ನು ಅಳವಡಿಸಿಕೊಂಡು ಜಿಲ್ಲೆಯಲ್ಲಿ ಸಡಿಲಿಕೆ ನೀಡುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.

ಕೋವಿಡ್- 19 ಜತೆಗೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ನಡೆಯಬೇಕು. ಸಾರಿಗೆ, ಶಾಲೆಗಳು ಸೇರಿದಂತೆ ಇತರ ಚಟುವಟಿಕೆಗಳನ್ನು ಪ್ರಾರಂಭಿಸಲು ರಾಜ್ಯ, ರಾಷ್ಟ್ರ ಮಟ್ಟದಲ್ಲಿ‌ ನಿರ್ಧಾರವಾಗಬೇಕಿದೆ. ಇವುಗಳ ಬಗ್ಗೆ ಮೂರನೇ ಹಂತದ ಲಾಕ್ ಡೌನ್ ನ ಮುಕ್ತಾಯದ ದಿನ, ಅಂದೆ ಮೇ 17ರ ನಂತರ ಗೊತ್ತಾಗಲಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರವರು ಲಾಕ್ ಡೌನ್ ಸಡಿಲಿಕೆ ಹಾಗೂ ಹೊರರಾಜ್ಯದಿಂದ ಕರ್ನಾಟಕಕ್ಕೆ ಬರುವ…

Posted by Kannadavani on Tuesday, 12 May 2020

ಪಿ.ಮಣಿವಣ್ಣನ್ ವರ್ಗಾವಣೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯೇ ಕಾರಣ ಎಂದ್ರು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ವಿವೇಚನೆಗೆ, ಅಧಿಕಾರಕ್ಕೂ ಮೀರಿದಾಗ ಒಮ್ಮೊಮ್ಮೆ ಅಪಾಯ ತರುತ್ತದೆ. ತಾಂತ್ರಿಕತೆಯನ್ನ ಬಳಸುವವರು ತಮ್ಮ ಮಿತಿಯನ್ನ ಅರಿತು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರದ ವಾರ್ತಾ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಪಿ.ಮಣಿವಣ್ಣನ್ ವರ್ಗಾವಣೆ ವಿಚಾರ ಕುರಿತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.ಇಂದು ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಅವರನ್ನ ಯಾವ ಕಾರಣಕ್ಕೆ ವರ್ಗಾವಣೆ ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ,ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ವಿವೇಚನೆಗೆ, ಅಧಿಕಾರಕ್ಕೂ ಮೀರಿದಾಗ ಒಮ್ಮೊಮ್ಮೆ ಅಪಾಯ ತರುತ್ತದೆ. ತಾಂತ್ರಿಕತೆಯನ್ನ ಬಳಸುವವರು ತಮ್ಮ ಮಿತಿಯನ್ನ ಅರಿತು ಕಾರ್ಯನಿರ್ವಹಿಸಬೇಕು ಎಂದಿದ್ದಾರೆ. ಅವರು ಕಾರ್ಮಿಕರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಕಾರ್ಮಿಕ ಇಲಾಖೆ ಕಾರ್ಮಿಕರು ಹಾಗೂ ಮಾಲಕರ ನಡುವಿನ ಸೇತುವೆಯಂತೆ ಕೆಲಸ ಮಾಡಬೇಕಾಗಿದೆ. ಕಾರ್ಮಿಕರ ಪರವಾಗಿ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಇಲಾಖೆಗೆ ಸಾಕಷ್ಟು ಅವಕಾಶ ಇದೆ. ಆದ್ರೆ ಮುಂದಿನ ಭವಿಷ್ಯದಲ್ಲಿ ಕಾರ್ಮಿಕರ ಸ್ಥಿತಿ ಏನು ಅನ್ನೋದನ್ನ ಸಹ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದಿದ್ದಾರೆ.ಇನ್ನು ರಾಜ್ಯಕ್ಕೆ ಹೊರರಾಜ್ಯದಿಂದ ಬರುತ್ತಿರುವ ಲಕ್ಷಕ್ಕೂ ಹೆಚ್ಚು ಜನರನ್ನು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಮಾಡಲಾಗುತ್ತದೆ,ರಾಜ್ಯಕ್ಕೆ ಇವರನ್ನು ಹಂತ ಹಂತವಾಗಿ ಕರೆಸಿಕೊಳ್ಳಲಾಗುತ್ತದೆ. ಯಾರಿಗೂ ತಡೆಯಲು ಹೊಗುವುದಿಲ್ಲ ಬಂದವರನ್ನೆಲ್ಲಾ ಕೊರಂಟೈನ್ ಮಾಡಲಾಗುತ್ತದೆ ಎಂದರು.

ಕಾರವಾರದಲ್ಲಿ ಕೋವಿಡ್ -೧೯ ಪ್ರಯೋಗಾಲಯ ಉದ್ಘಾಟನೆ.

ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಕರಾವಳಿ ಭಾಗದ ಮೊದಲ ಕೋವಿಡ್ -19 ಪ್ರಯೋಗಾಲಯವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಇಂದು ಉದ್ಘಾಟಿಸಿದರು.
ಇಷ್ಟು ದಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೊಂಕಿತರ ಪರೀಕ್ಷೆಯನ್ನು ಶಿವಮೊಗ್ಗ ಅಥವಾ ಬೆಂಗಳೂರಿಗೆ ಕಳುಹಿಸಿ ವರದಿ ತರಬೇಕಿತ್ತು.ಇದು ತಡವಾಗುತಿತ್ತು ಆದರೇ ಈಗ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿಯೇ ಮಾಡಲು ಸುಸಜ್ಜಿತ ಪ್ರಯೋಗಾಲಯ ನಿರ್ಮಾಣವಾಗಿದ್ದು ಇಂದಿನಿಂದ ಕಾರ್ಯ ನಿರ್ವಹಿಸಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ