BREAKING NEWS
Search

ಶಿವಮೊಗ್ಗದಲ್ಲಿ 83 ಕ್ಕೆ ಏರಿಕೆಯಾದ ಕರೋನಾ! ಮಠದ ಸ್ವಾಮೀಜಿಗೂ ಫಾಸಿಟಿವ್!

529

ಶಿವಮೊಗ್ಗ : ಮಲೆನಾಡಿನ ಜಿಲ್ಲೆ ಶಿವಮೊಗ್ಗದಲ್ಲಿ ಇಂದು 10 ಮಂದಿಗೆ ಕೊರೊನಾ ಪಾಸಿಟಿವ್‌ ಇರುವುದು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ.

ಇಂದು ಪಾಸಿಟಿವ್ ಪತ್ತೆಯಾಗಿರುವ 10 ಮಂದಿಯಲ್ಲಿ 8 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಇದರಲ್ಲಿ ಒಂದೇ‌ ಕುಟುಂಬದ ಐವರಿಗೆ ಸೋಂಕು ತಗುಲಿದೆ. ಸೋಂಕು ಪತ್ತೆಯಾಗಿರುವ ಎಲ್ಲರನ್ನು ಮಹಾರಾಷ್ಟ್ರದಿಂದ ಬಂದ ದಿನದಿಂದಲೇ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.

ಕ್ವಾರಂಟೈನ್ ನಲ್ಲಿ ಇದ್ದವರಿಗೆ ಪಾಸಿಟಿವ್ ಪತ್ತೆಯಾಗಿದೆ. ಇನ್ನು‌ ಯಾವುದೇ ಟ್ರ್ಯಾವೆಲ್ ಹಿಸ್ಟರಿ ಇಲ್ಲದ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸ್ವಾಮೀಜಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದರೆ, ಬೆಂಗಳೂರಿನಿಂದ ಬಂದಿದ್ದ ಮಹಿಳೆಯೊಬ್ಬರಿಗು ಸಹ ಕೊರೊನಾ ಪಾಸಿಟಿವ್ ಇರುವುದು ದೃಡವಾಗಿದೆ.

ಆಶ್ರಮ ಸೀಲ್ ಡೌನ್

ಪಾಸಿಟಿವ್ ಪತ್ತೆಯಾದ 10 ಮಂದಿಗು ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇಂದು 10 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಮೂರು ಭಾಗದಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಸೀಲ್ ಡೌನ್ ಮಾಡಿದ್ದಾರೆ. ಶಿವಮೊಗ್ಗ ನಗರದ ಕುಂಬಾರಗುಂಡಿ, ನಗರದ ಹೊರವಲಯದ ಕಲ್ಲುಗಂಗೂರು ಹಾಗೂ ಭದ್ರಾವತಿಯ ರಂಗಪ್ಪ ವೃತ್ತದ ರಸ್ತೆಯನ್ನು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಈ ಎಲ್ಲಾ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಸ್ಯಾನಿಟೈಸರ್ ಸಿಂಪಡಿಸಲಾಗಿದ್ದು, ಸೀಲ್ ಡೌನ್ ಆಗಿರುವ ಏರಿಯಾಗಳಲ್ಲಿ ಜನರು‌ ಮನೆಯಿಂದ ಹೊರಗೆ ಬಾರದಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ