ಶಿರಸಿಯಲ್ಲಿ ಸಿ.ಎಂ ರಾಜಕೀಯ ಕಾರ್ಯದರ್ಶಿ ಸಿಡಿ ರಹಸ್ಯ ಹೊರತೆಗೆದ ಡಿ.ಕೆ ಶಿವಕುಮಾರ್.

417

ಕಾರವಾರ:- ಒಂದು ಸಿಡಿ ವಿಚಾರದಲ್ಲಿ ಗೊಂದಲದಲ್ಲಿ ಆತ್ಮಹತ್ಯೆಗೆ ಯತ್ನವಾಗಿದೆ,
ಸಂತೋಷ್ ಹೆಂಡತಿಯೇ ಇದನ್ನ ಬಹಿರಂಗಪಡಿಸಿದ್ದಾರೆ,ಸಿಡಿ ಇಟ್ಟುಕೊಂಟು ಯಾರೋ ಒಬ್ಬರಿಗೆ ತಲುಪಿಸಿದರು,ಅದನ್ನು ಇಟ್ಟುಕೊಂಡು ವ್ಯಾಪಾರ ಮಾಡಲು ಪ್ರಯತ್ನ ಮಾಡಿದರು ಆದರೇ ಅದು ಆಗಿಲ್ಲ ಎಂಬ ಮಾಹಿತಿ ನನಗೆ ಬಂದಿದೆ, ಸಂತೋಷ್ ಅವರು ಆ ಸಿ.ಡಿಯನ್ನು ಬೇರೆಯೊಬ್ಬರಿಗೆ ಕೊಟ್ಟಿದ್ದಾರೆ,ಆ ಸಿ.ಡಿಯನ್ನು ಬೇರೆಯೊಬ್ಬರಿಗೆ ಕೊಟ್ಟಿದ್ದಾರೆ ಅವರು ಬ್ಲಾಕ್ ಮೇಲ್ ಮಾಡಲು ಹೋದರು ಎಂಬ ಮಾಹಿತಿ ಮಾಧ್ಯಮ ಸ್ನೇಹಿತರಿಂದಲೇ ಬಂದಿದೆ.ಇದಾದಮೇಲೆ ದೆಹಲಿಗೆ ಆ ಸಿಡಿ ಕೊಟ್ಟಿದ್ದಾರೆ.ತಾನು ಕೊಟ್ಟಿರುವುದು ತಪ್ಪು ಎಂದು ಆತನಿಗೆ ಅನಿಸಿ ಹೀಗೆ ಮಾಡಿಕೊಂಡಿದ್ದಾರೆ.


ಯಾವ ಸಿಡಿ ಏನು ಎನ್ನುವ ಬಗ್ಗೆ ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲ್ಲ,ಸಿಡಿಯನ್ನ ಕೆಲವರು ಹೈಕಮಾಂಡ್ ಗೆ ತಲುಪಿಸಿರುವ ಬಗ್ಗೆ ಮಾಹಿತಿ ಇದೆ,ಕೆಲವು ದಿನದ ಹಿಂದೆ ಮುಖ್ಯಮಂತ್ರಿಗಳ ಪ್ರಸ್ ಸೆಕ್ರೆಟ್ರಿ ರಾಜೀನಾಮ ಕೊಡುತ್ತಾರೆ,ಇನ್ನೊಬ್ಬ ಪ್ರಸ್ ಸೆಕ್ರೆಟ್ರಿ ಯನ್ನು ಕೆಲಸದಿಂದ ತೆಗೆಯುತ್ತಾರೆ,ಇದು ಮೂರನೆಯದು ,ಸಮ್ ತಿಂಗ್ ಈಸ್ ನಾಟ್ ದಿ ಎಂಟೇರ್ ಸಿಸ್ಟಮ್ ,ಅದಕ್ಕೆ ನಾನು ಹೇಳುತ್ತಿರುವುದು ಇದರ ಬಗ್ಗೆ ವ್ಯಾಪಕ ತನಿಖೆ ಆಗಬೇಕು ಎಂದರು.ಇನ್ನು ತಮ್ಮ ಹೇಳಿಕೆಗೆ
ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಹೌದಾ ಬಹಳ ಸಂತೋಷ
ಹಿಂದೆ ಅವರ ಪಿಎಗಳ ವಿಚಾರ ಏನಾಯಿತು ಅಂತಾ ಗೆತ್ತಲ್ಲ,ಹೌದಾ ಸರಿ ಬಿಡಿ ಎಂದಷ್ಟೇ ಪ್ರತಿಕ್ರಿಯಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ