ಶಿವಮೊಗ್ಗದ ವೈದ್ಯೆಗೆ ‘ಮಿಸಸ್ ಸೋಷಿಯಲ್ ಐಕಾನ್ – 2019’ ಕಿರೀಟ

463

ನವದೆಹಲಿಯ ಕಂಟ್ರಿ ಇನ್ ಅಂಡ್ ಸೂಟ್ಸ್ ಹೋಟೆಲ್ ನ ಭವ್ಯ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ‘ಮಿಸಸ್ ಇಂಡಿಯಾ ಗ್ಯಾಲಕ್ಸಿ-2019’ ಅದ್ದೂರಿ ಕಾರ್ಯಕ್ರಮದಲ್ಲಿ ಶಿವಮೊಗ್ಗದ ವೈದ್ಯೆ ಡಾ.ರಶ್ಮಿ ಎಸ್.ಫ್ರಾನ್ಸಿಸ್ ರವರು “ಮಿಸಸ್ ಸೋಷಿಯಲ್ ಐಕಾನ್ 2019” ಎಂಬ ಕಿರೀಟ ಮುಡಿಗೇರಿಸಿಕೊಂಡರು. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಇಪ್ಪತ್ತು ಮಹಿಳೆಯರು ಭಾಗವಹಿಸಿದ್ದರು.

ಡಾ.ರಶ್ಮಿ

ಡಾ.ರಶ್ಮಿ ಯವರು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಆಡಿಷನ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ನಾಲ್ಕು ತಿಂಗಳುಗಳ ಕಾಲ ವಿವಿಧ ಟಾಸ್ಕ್ ಗಳನ್ನು ನೀಡಲಾಗಿತ್ತು. ದಿನಾಂಕ 22ನೇ ಜುಲೈ 2019 ರಿಂದ 27ನೇ ಜುಲೈ 2019ರವರೆಗೆ ನಡೆದ ವಿವಿಧ ಹಂತಗಳ ತರಬೇತಿ ಮತ್ತು ಆಯ್ಕೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.


ಇದು ನಮ್ಮ ಸಂಸ್ಕೃತಿ, ಪಾರಂಪರಿಕ ಉಡುಗೆ-ತೊಡುಗೆ, ಪರಿಸರ ಪ್ರೀತಿ, ಪ್ರಾಣಿ ಪ್ರೀತಿ, ಸ್ತ್ರೀ ಹಿಂಸಾ ಸಮಸ್ಯೆ, ಸಮಾಜದಲ್ಲಿ ಹೆಣ್ಣಿನ ಪಾತ್ರ, ಪ್ರತಿಭಾ ಪ್ರದರ್ಶನ, ತೀವ್ರತರ ಖಾಯಿಲೆಯಂದ ಬಳಲುವ ಬಡಮಕ್ಕಳ ಔಷಧೋಪಚಾರಕ್ಕಾಗಿ ಹಣ ಸಂಗ್ರಹಣೆ, ಹೆಣ್ಣಿಗೆ ಸಂಬಂಧಿಸಿದ ವಿಷಯಗಳ ಮೇಲೆ ಪಿಪಿಟಿ ಪ್ರಸೆಂಟೇಷನ್, ರಾಂಪ್ ವಾಕ್ ಮುಂತಾದ ಹಲವು ವಿಷಯಗಳನ್ನು ಒಳಗೊಂಡಿತ್ತು.

ಈ ಈ ಎಲ್ಲಾ ವಿಷಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಡಾ.ರಶ್ಮಿ ಎಸ್ ಫ್ರಾನ್ಸಿಸ್ ರವರು “ಮಿಸಸ್ ಇಂಡಿಯಾ ಗೆಲಕ್ಸಿ ಸೋಷಿಯಲ್ ಐಕಾನ್” ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮತ್ತು ಬೂಟಿಪುಲ್ ಹೇರ್ ಟೈಟಲ್ ಗೂ ಪಾತ್ರರಾದರು. ಈ ಸೌಂದರ್ಯ ಸ್ಪರ್ಧೆ ಕೇವಲ ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗಿರದೆ ಮಹಿಳೆಯ ಆಂತರಿಕ ಸೌಂದರ್ಯಕ್ಕೆ ಆದ್ಯತೆ ನೀಡುವುದಾಗಿತ್ತು.

ಕಾರ್ಯಕ್ರಮವನ್ನು ವೈಬ್ರಂಟ್ ಕಾನ್ಸೆಪ್ಟ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸಿನಿಮಾ ನಟ-ನಟಿಯರು, ಟಿವಿ ಕಲಾವಿದರು, ಮಾಡೆಲ್ ಗಳು, ಫ್ಯಾಷನ್ ಡಿಸೈನರ್ ಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜೂರಿಗಳಾಗಿ ಮತ್ತು ಮುಖ್ಯ ಅತಿಥಿಗಳಾಗಿ ಸನ್ನಿ ಸಚ್ಚಿದೇವಾ, ಹರ್ಷಿತಾ ಕಶ್ಯಪ್, ಗುರುಪ್ರೀತ್ ಸೋಧಿ, ಸಲ್ಲೋಲಿಕುಮಾರ್,ಸೋನಿಯಾ ಜೇಟ್ಲಿ, ವರುಣ್ ಕತ್ಯಾಲ್, ಅಂಕಾ ವರ್ಮಾ, ಮನೋಜ್ ಶರ್ಮಾ, ರಾಜೀವ್ ಗುಪ್ತಾ, ಅಂಜು ವರ್ಷಿಣಿ, ಸದನ್ ಪಾಂಡೆ, ಲೂನಾ ದತ್ತಾ, ಅನ್ನು ಮಾರ್ಬಾನಿಯಾಂಗ್, ಶಾರೋನ್ ವಿನ್ಸಲೇಟ್, ಸಿಲ್ವಿ ಮತ್ತಿತರು ಭಾಗವಹಿಸಿದ್ದರು. ವೈಬ್ರಂಟ್ ಕಾನ್ಸೆಪ್ಟ್‌ ನ ನಿರ್ದೇಶಕರುಗಳಾದ ಗಿನ್ನಿ ಕಪೂರ್ ಮತ್ತು ಗಗನ್ ದೀಪ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು .

ಈ ಸ್ಪರ್ಧೆಯ ಮುಖ್ಯ ಧ್ಯೇಯ “ಮಹಿಳೆ ಮೇಲಿನ ದೌರ್ಜನ್ಯ ನಿಲ್ಲಿಸಿ” (Stop violence against women) ಎಂಬುದಾಗಿತ್ತು.
Leave a Reply

Your email address will not be published. Required fields are marked *