ಮತಾಂತರ ತಡೆಕಾಯ್ದೆ ಕುರಿತು ಕಾರವಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

421

ಉತ್ತರ ಕನ್ನಡ:-ಮತಾಂತರ ತಡೆ ಕಾಯ್ದೆ ಜಾರಿಗೆ ತರುವ ಕುರಿತುಸಿಟಿ ರವಿಯವರ ಹೇಳಿಕೆಗೆ ಕಾರವಾರ ಮಲ್ಲಾಪುರದಲ್ಲಿ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಸ್ವಾಗತಿಸಿದ್ದಾರೆ.ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು ಯಾವ ಹೆಣ್ಣುಮಕ್ಕಳು ಲವ್ ಜಿಹಾದ್ ಗೆ ಬಲಿಯಾಗುತಿದ್ದಾರೋ ಅವರಿಗೆ ಕಾನೂನಿನ ಲಾಭ ಸಿಗಲಿದೆ.ಲವ್ ಜಿಹಾದ್ ನಂತಹ ಕೆಲಸಕ್ಕೆ ಹುಟ್ಟಿದ ಅಯೋಗ್ಯರಿದ್ದಾರೆ ಇಂತವರಿಗೆ ಎಚ್ಚರಿಕೆಯ ಘಂಟೆ ಕೊಟ್ಟಂತೆ ಆಗುತ್ತದೆ.


ತಮಗೇ ಗೊತ್ತಿಲ್ಲದಂತೆ ಹಿಂದು ಹೆಣ್ಣುಮಕ್ಕಳನ್ನ ಕರೆದುಕೊಂಡು ಹೋಗಿ ಮತಾಂತರಿಸಿ ಮದುವೆಯಾಗಿ ಆ ಮಕ್ಕಳನ್ನು ಪಡೆದು ಡೆಮಾಗ್ರಸಿ ಚೈಂಜ್ ಮಾಡಲು ಹೊರಟಿದ್ದಾರಲ್ಲ ಇದು ಪ್ರೇವದ ಹೆಸರಿನಲ್ಲಿ ಅವಮಾನ ಮತ್ತು ಮೋಸ. ಮತವನ್ನು ,ಧರ್ಮವನ್ನು ಪ್ರಚಾರ ಮಾಡಲು ಇವರು ಯಾವಹಂತಕ್ಕೆ ಬೇಕಾದರೂ ಹೋಗುತ್ತಾರೆ,ಪ್ರೇಮದ ಹೆಸರಲ್ಲಿ ಹಿಂದು ಹೆಣ್ಣುಮಕ್ಕಳನ್ನು ಅಪಹರಿಸಿ ಕೊಲ್ಲುವ ಈ ದೃಷ್ಟ ರಾಕ್ಷಸರಿಂದ ಕಾನೂನಿನ ನೆರವು ಹಿಂದೂ ಹೆಣ್ಣುಮಕ್ಕಳಿಗೆ ದೊರೆಯುತ್ತದೆ.ಅತ್ಯಂತ ಪ್ರೀತಿಯಿಂದ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ, ಜನತೆ ಇಂತಹ ಕಾನೂನಿನ ಪರ ನಿಲ್ಲಬೇಕು ಎಂದರು.
Leave a Reply

Your email address will not be published. Required fields are marked *