BREAKING NEWS
Search

ಆಶ್ರಯ ನೀಡಿದ ಅಭಿಮಾನಿಯೊಡನೆ ಕಿರಿಕ್- ಮನೆಯಲ್ಲಿ ಹಲ್ಲಿ,ಜಿರಲೆ ಬರುತ್ತೆ ಎಂದು ಕರ್ಕಿಯ ಮನೆ ಬಿಟ್ಟು ಬಂದ ನಟಿ ವಿಜಯಲಕ್ಷ್ಮಿ!

1612

ಕಾರವಾರ :-ಕರೋನಾ ಬಂದು ಆಸ್ಪತ್ರೆಯ ಬಿಲ್ ಕಟ್ಟಲಾಗದೇ ತೊಂದರೆಗೊಳಗಾಗಿದ್ದ ಚಲನ ಚಿತ್ರ ನಟಿ ವಿಜಯಲಕ್ಷ್ಮಿ ತಾನು ಬದುಕುವುದಿಲ್ಲ ಸಹಾಯ ಬೇಕಿದೆ, ಉಳಿದುಕೊಳ್ಳಲು ನನಗೆ ಮನೆ ಬೇಕಿದೆ ಎಂದು ಫೇಸ್ ಬುಕ್ ಮೂಲಕ ತಮ್ಮ ನೋವು ತೋಡಿಕೊಂಡಿದ್ದರು.

ಇದನ್ನು ಗಮನಿಸಿದ್ದ ಉತ್ತರ ಕನ್ನಡ ಜಿಲ್ಲೆಯ ದೀಪಾ ತೂಕರಾಮ್ ನಾಯ್ಕ ರವರು ಅವರ ಫೇಸ್ ಬುಕ್ ಮೂಲಕ ಸಂಪರ್ಕ ಮಾಡಿ ಅವರ ಆಸ್ಪತ್ರೆ ಬಿಲ್ ಮೊತ್ತ ₹30,000 ವನ್ನು ಬರಿಸಿದ್ದರು. ದೀಪಾ ನಂತರ ಹೊನ್ನಾವರದ ಕರ್ಕಿಯಲ್ಲಿದ್ದ ತಂದೆ ತುಕಾರಾಮ್ ರವರಿಗೆ ಕರೆ ಮಾಡಿ ಮನೆಯ ವ್ಯವಸ್ಥೆ ಮಾಡಲು ತಿಳಿಸಿದ್ದರು.

ಇದರಂತೆ ತುಕಾರಾಮ್ ರವರು ಕರ್ಕಿಯಲ್ಲಿ ತಮ್ಮದೇ ವೆಚ್ಚದಲ್ಲಿ ನಾಲ್ಕು ಸಾವಿರ ರುಪಾಯಿಗೆ ಬಾಡಿಗೆ ಮನೆ ಮಾಡಿ ಅವರ ಕುಟುಂಬವನ್ನು ತಮ್ಮದೇ ವೆಚ್ಚದಲ್ಲಿ ಕರ್ಕಿಗೆ ಕರೆಸಿ ಆರು ದಿನಗಳ ಕಾಲ ಸಲಹಿದ್ದಾರೆ.

ಆದರೇ ಮನೆಯಲ್ಲಿ ಪಲ್ಲಿ, ಜಿರಲೆ ಬರುತ್ತದೆ ,ಮನೆ ಸರಿಯಿಲ್ಲ ಎಂದು ಅವರೊಂದಿಗೆ ಕಿರಿಕ್ ಮಾಡಿಕೊಂಡ ವಿಜಯಲಕ್ಷ್ಮಿ ತಾಯಿ ಮತ್ತು ಅಕ್ಕ ನನ್ನು ಕರೆದುಕೊಂಡು ಇಂದು ಬೆಂಗಳೂರಿಗೆ ತೆರಳಿದರು.

ಫೇಸ್ ಬುಕ್ ನಲ್ಲಿ ಮನೆ ಬಗ್ಗೆ ಹೇಳಿಕೊಂಡಿದ್ದ ವಿಜಯಲಕ್ಷ್ಮಿ

ಹೊನ್ನಾವರದ ಕರ್ಕಿ ಯಲ್ಲಿ ಅಭಿಮಾನಿಯೊಬ್ಬರು ಆಶ್ರಯ ನೀಡಿರುವ ಕುರಿತು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದ ವಿಜಯಲಕ್ಷ್ಮಿ ,ಮನೆ ಸರಿ ಇಲ್ಲ ಎಂದು ಸಹ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು.

ಬಂದಾಗಿನಿಂದ ಕಿರಿಕ್- ತಾಯಿ,ಅಕ್ಕನನ್ನು ನಿರ್ಲಕ್ಷ ಮಾಡಿದ್ದ ವಿಜಯಲಕ್ಷ್ಮಿ.

ಕರ್ಕಿಗೆ ಬಂದಾಗಿನಿಂದ ಕಿರಿಕ್ ಮಾಡಿಕೊಂಡಿದ್ದ ವಿಜಯ ಲಕ್ಷ್ಮಿ ಹಾಸಿಗೆ ಯಲ್ಲಿಯೇ ಇರುವ ಅಕ್ಕ, ತಾಯಿಯನ್ನು ನೋಡಿಕೊಳ್ಳುತ್ತಿರಲಿಲ್ಲ. ಅಕ್ಕ ,ತಾಯಿಯ ಶೌಚಾ, ಸ್ವಚ್ಛ ಮಾಡುವುದು,ಊಟ ಮಾಡಿಸುವುದು ಸಹ ತುಕಾರಾಮ್ ರವರ ಮನೆಯವರು ಹಾಗೂ ಅವರ ಮನೆಯ ಕೆಲಸದವರು ಮಾಡಿದ್ದಾರೆ.

ತುಕಾರಾಮ್ ರವರು ವಿಜಯಲಕ್ಷ್ಮಿ ಪರಿಸ್ಥಿತಿ ನೋಡಿ , ತಾಯಿ ಮತ್ತು ಅಕ್ಕಳನ್ನು ಇಲ್ಲಿಯೇ ಬಿಡಿ ,ಇಲ್ಲಿ ಆಶ್ರಮ ಇದೆ ಇಲ್ಲಿ ನಾನು ಇರುತ್ತೇನೆ ನೋಡಿಕೊಳ್ಳುತ್ತೇನೆ. ನೀವು ಬೆಂಗಳೂರಿಗೆ ಹೋಗಿ ಸಿನಮಾ ದಲ್ಲಿ ಅವಕಾಶ ಪಡೆದು ನಿಮ್ಮ ವೃತ್ತಿ ಮುಂದುವರೆಸುವಂತೆ ಹೇಳಿದ್ದಾರೆ. ಆದರೇ ಇದಕ್ಕೆ ಒಪ್ಪದ ಅವರು ನನ್ನ ತಾಯಿ ,ಅಕ್ಕ ನನ್ನೊಂದಿಗೆ ಇರುತ್ತಾರೆ. ಅವರನ್ನು ಬಿಟ್ಟು ಇರುವುದಿಲ್ಲ ಎಂದಿದ್ದರಂತೆ . ನಂತರ ಉಚಿತವಾಗಿ ಎಲ್ಲವನ್ನೂ ಮಾಡಿದರೂ ಮನೆ ಸರಿಯಿಲ್ಲ, ವ್ಯವಸ್ಥೆ ಸರಿಇಲ್ಲ. ನನಗೆ ಕೆಲಸದವರನ್ನು ನೇಮಿಸಿ, ಮನೆಗೆ ಬೇರೆ ವ್ಯವಸ್ಥೆ ಕಲ್ಪಿಸಿ ಅಂದಿದ್ದರು. ಆದರೇ ಅಷ್ಟರಲ್ಲಾಗಲೇ ಫೇಸ್ ಬುಕ್ ನಲ್ಲಿ ಮನೆ ಸರಿ ಇಲ್ಲ ಎಂದು ಹೇಳಿದ್ದ ಬಗ್ಗೆ ತಿಳಿದುಕೊಂಡ ತುಕಾರಾಮ್ ರವರು ಅವರಲ್ಲಿ ವಿಚಾರಿಸಿದ್ದಾರೆ. ಹೀಗೆ ವಿಚಾರಿಸಿದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡ ಅವರು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದರು. ಅದಕ್ಕೆ ನಾನೇ ಕಾರನ್ನು ಮಾಡಿಸಿ ಕಳುಹಿಸಿ ಕೊಟ್ಟಿದ್ದೇನೆ ಎಂದು ಆಶ್ರಯ ನೀಡಿದ ತುಕಾರಾಮ್ ರವರು ಮಾಹಿತಿ ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ