ಮೇಕಪ್ ಇಲ್ಲದ ಕಾಜಲ್ ಅಗರ್ ವಾಲ್ ! ಹೆದರದೇ ನೋಡಿ!

1160

ರಂಗು ರಂಗಿನ ಸಿನಿಮಾ ಲೋಕದಲ್ಲಿ ನಟಿಮಣಿಗಳು ಸುಂದರವಾಗಿ ಕಾಣುತ್ತಾರೆ. ಆಹಾ ಎಂತಹ ಸುಂದರಿ ಅಂತ ನೀವು ಕಣ್ಣು ,ಮನಸ್ಸಿನಲ್ಲೆಲ್ಲಾ ತುಂಬಿಕೊಳ್ತೀರ ಆದ್ರೆ ಅವರನ್ನು ರ ರಿಯಲ್ ಆಗಿ ನೋಡಿದ್ರೆ ಗುರುತು ಸಹ ಹಿಡಿಯುವುದಿಲ್ಲ .

ಹಾಗಾಗಿ ಸಿನಿಮಾ ರಂಗದ ನಟಿ ಮಣಿಗಳು ಮೇಕಪ್ ಇಲ್ಲದೇ ಹೊರ ಬರುವುದಿಲ್ಲ . ಇತ್ತೀಚೆಗೆ ಬಹುಭಾಷಾ ನಟಿ ಶೃತಿ ಹಾಸನ್ ನಟಿಯರ ಮೇಕಪ್ ಕುರಿತು ತಮ್ಮ ಮನದಾಳದ ಮಾನ್ನಾಡಿದ್ದರು ,ನಟಿಯರನ್ನು ಮೇಕಪ್ ಇಲ್ಲದೇ ನೋಡಲು ಸಾಧ್ಯವಿಲ್ಲ ,ಸೆಲೆಬ್ರಿಟಿ ಆದಮೇಲೆ ಅವರನ್ನು ಸುಂದರವಾಗಿ ಕಾಣುವಂತೆ ಮಾಡಲು ಒಂದು ಸೈನ್ಯವೇ ಇರುತ್ತದೆ,ಅದಕ್ಕಾಗಿ ಲಕ್ಷ ಲಕ್ಷ ಕರ್ಚು ಮಾಡುತ್ತಾರೆ ಎಂದಿದ್ದರು. ಇನ್ನು ಅದಕ್ಕೂ ಮುಂದೆ ಹೋಗಿ ನಟಿ ಕಾಜಲ್ ಅಗರವಾಲ್ ತಮ್ಮ ಮೇಕಪ್ ಇಲ್ಲದ ಪೋಟೋ ವನ್ನು ಇನ್ ಸ್ಟ್ರಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಜನರು ತಮ್ಮನ್ನು ಹೆಚ್ಚು ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಜನರು ತೋರಿಕೆಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಸೌಂದರ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಪರಿಪೂರ್ಣ ದೇಹವನ್ನು ಕಂಡುಕೊಳ್ಳುವ ಭರವಸೆಯಿಂದ ಜನರು ಲಕ್ಷಂತಾರ ರೂ. ಖರ್ಚು ಮಾಡಿ ಕಾಸ್‍ಮೆಟಿಕ್ಸ್ ಗಳನ್ನು ಹಾಗೂ ಸೌಂದರ್ಯದ ಉತ್ಪನ್ನಗಳನ್ನು ಖರೀದಿಸುತ್ತಾರೆ ಎಂದು ಬರೆದಿದ್ದಾರೆ.

ಈಗ ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.
Leave a Reply

Your email address will not be published. Required fields are marked *

error: Content is protected !!