ಒಬ್ಬರಿಗೊಬ್ಬರು ಮದುವೆಯಾಗುತ್ತಾರಂತೆ ಈ ಇಬ್ಬರು ನಟಿಯರು!

1515

ಚೆನ್ನೈ: ಒಬ್ಬಳು ತೆಲುಗು, ತಮಿಳು, ಕನ್ನಡ, ಹಿಂದಿ ಹೀಗೆ ಬಹುಭಾಷಾ ಚಿತ್ರಗಳಲ್ಲಿ ನಟಿಸಿರುವ ಪ್ರಸಿದ್ಧ ನಟಿ ಮತ್ತೊಬ್ಬಳು ತೆಲುಗು ಸಿನಿಮಾರಂಗದಲ್ಲಿ ನಟನೆ, ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ನಟಿ. ಈಗ ಈ ಇಬ್ಬರೂ ಚೆಲುವೆಯರು ಮದುವೆ ಮಾಡಿಕೊಳ್ಳುತ್ತಾರಂತೆ !

ನಾವಿಲ್ಲಿ ಹೇಳುತ್ತಿರುವುದು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ತ್ರಿಶಾ ಕೃಷ್ಣನ್ ಹಾಗೂ ನಟಿ, ನಿರ್ಮಾಪಕಿ ಚಾರ್ಮಿ ಕೌರ್ ಬಗ್ಗೆ . ಇವರಿಬ್ಬರೂ ತಮ್ಮ ಟ್ವಿಟರ್ನಲ್ಲಿ ಮದುವೆ ವಿಚಾರವನ್ನು ಪ್ರಸ್ತಾಪಿಸಿಕೊಂಡಿದ್ದಾರೆ. ಅಲ್ಲದೆ ಚಾರ್ಮಿ ಕೌರ್ ನೇರವಾಗಿ ತ್ರಿಶಾಗೆ ಪ್ರಪೋಸ್ ಮಾಡಿದ್ದಾರೆ. ಅದಕ್ಕೆ ತ್ರಿಶಾ ಒಕೆ ಎಂದಿದ್ದಾರೆ.

ಮೇ 4ರಂದು ತ್ರಿಶಾ ಅವರ 36 ನೇ ವರ್ಷದ ಜನ್ಮದಿನಾಚರಣೆಯಿತ್ತು. ಅವರ ಅಭಿಮಾನಿಗಳು, ಸಹನಟ, ನಟಿಯರು ಸೇರಿ ಅನೇಕ ಜನ ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್ಡೇ ವಿಶ್ ಮಾಡಿದ್ದಾರೆ. ಅಲ್ಲದೆ ಹಲವು ಗಣ್ಯರೂ ಸಹ ತಾವು ತ್ರಿಶಾ ಅವರೊಂದಿಗೆ ಇದ್ದ ಫೋಟೋಗಳನ್ನು ಶೇರ್ ಮಾಡಿಕೊಂಡು ಹ್ಯಾಪಿ ಬರ್ತ್ ಡೇ ತ್ರಿಶಾ ಎಂದು ಹಾರೈಸಿದ್ದಾರೆ.

ಹಾಗೇ ಚಾರ್ಮಿ ಕೌರ್ ಕೂಡ ಒಬ್ಬರು. ಆದರೆ ಈಕೆ ಜನ್ಮದಿನಕ್ಕೆ ಶುಭಕೋರುವ ಜತೆ ನೇರವಾಗಿ ನಾವಿಬ್ಬರೂ ಮದುವೆಯಾಗೋಣವೇ ಎಂದಿದ್ದಾರೆ.

ಇವರಿಬ್ಬರೂ ಬಹುಕಾಲದ ಗೆಳತಿಯರು. ತ್ರಿಶಾ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಚಾರ್ಮಿ, ಬೇಬಿ, ಐ ಲವ್ ಯೂ. ಇಂದು ಮತ್ತೆ ಮುಂದೆಂದಿಗೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ನನ್ನ ಮೊಣಕಾಲ ಮೇಲೆ ಕುಳಿತು ಕೇಳುತ್ತಿದ್ದೇನೆ, ಇನ್ನಾದರೂ ನನ್ನ ಮದುವೆಯಾಗಲು ಒಪ್ಪಿಕೊಳ್ಳುತ್ತೀಯಾ? ಈಗ ಕಾನೂನಿನಲ್ಲೂ ಅವಕಾಶ ಇದೆಯಲ್ಲ ಎಂದು ಹೇಳಿ, ನಂತರ ಬರ್ತ್ ಡೇ ವಿಶ್ ಮಾಡಿದ್ದಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ತ್ರಿಶಾ, ನಾನು ಈಗಾಗಲೇ ನಿನ್ನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಇವರಿಬ್ಬರ ಈ ಟ್ವಿಟರ್ ಸಂಭಾಷಣೆ ಹಲವರ ಹುಬ್ಬೇರುವಂತೆ ಮಾಡಿದೆ. ಅವರಿಬ್ಬರೂ ಪರಸ್ಪರ ಕಿಚಾಯಿಸಿಕೊಳ್ಳುತ್ತಿದ್ದಾರೋ, ನಿಜವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಚಾರ್ಮಿ ಕೌರ್ ಹಾಗೂ ತ್ರಿಶಾ ಕೃಷ್ಣನ್ ಇಬ್ಬರೂ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. 2015ರ ಜನವರಿಯಲ್ಲಿ ತ್ರಿಶಾ ಚೆನ್ನೈ ಮೂಲದ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದೇ ವರ್ಷ ಮೇ ನಲ್ಲಿ ಆ ಸಂಬಂಧ ಮುರಿದು ಬಿದ್ದಿತ್ತು. 2018ರಲ್ಲಿ ಕೂಡ ತ್ರಿಶಾ ಮದುವೆ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ನಂತರ ತಿಳಿಸುತ್ತೇವೆ ಎಂದು ತ್ರಿಶಾ ತಾಯಿ ಹೇಳಿದ್ದರು. ಚಾರ್ಮಿ ಕೂಡ ಸದ್ಯ ನಟನೆಯಿಂದ ದೂರವುಳಿದಿದ್ದಾರೆ.

ಆದರೆ ಈ ಟ್ವೀಟ್ಗಳಿಂದ ನಟಿಯರಿಬ್ಬರ ಫಾಲೋವರ್ಸ್ ಕೆಲವರು ಆಶ್ಚರ್ಯಕ್ಕೆ ಒಳಗಾಗಿದ್ದರೆ, ಕೆಲವರು ಬೇಗ ಮದುವೆಯಾಗಿ ಎಂದು ಹಾರೈಸಿದ್ದಾರೆ.
Leave a Reply

Your email address will not be published. Required fields are marked *

error: Content is protected !!