BREAKING NEWS
Search

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಕ್ಕೆಆರ್ಥಿಕ​ ಪ್ಯಾಕೇಜ್​ 6 ಹೊಸ ಕ್ರಮಗಳು: ನಿರ್ಮಲಾ ಸೀತಾರಾಮನ್​

1052

ನವದೆಹಲಿ: ಕೊವಿಡ್​-19ರಿಂದಾದ ಬಿಕ್ಕಟ್ಟು ನಿರ್ವಹಣೆಗಾಗಿ ಪ್ರಧಾನಮಂತ್ರಿ ಮೋದಿಯವರು ನಿನ್ನೆ ಆತ್ಮ ನಿರ್ಭರ ಭಾರತ ಅಭಿಯಾನ ಹೆಸರಿನಲ್ಲಿ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.


ಈ ಆರ್ಥಿಕ ಪ್ಯಾಕೇಜ್​ ದೇಶಾದ್ಯಂತ ಹೇಗೆ ಹಂಚಿಕೆಯಾಗುತ್ತದೆ ಯಾವ್ಯಾವ ವರ್ಗಕ್ಕೆ ಎಷ್ಟು ಎಂಬಿತ್ಯಾದಿ ವಿಚಾರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಕನ್ನಡ ಸೇರಿದಂತೆ ತಮಿಳು ಭಾಷೆಯಲ್ಲೂ ಮಾಹಿತಿ ನೀಡಿದರು

ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ಸಮಗ್ರ ದೃಷ್ಟಿಕೋನವನ್ನು ರೂಪಿಸಿದ್ದಾರೆ. ಸಮಾಜದ ಹಲವಾರು ವರ್ಗಗಳೊಂದಿಗೆ ವ್ಯಾಪಕ ಚರ್ಚೆ ನಡೆಸಿದ ನಂತರವೇ ಈ ಪ್ಯಾಕೇಜ್​ ಘೋಷಿಸಲಾಗಿದೆ.

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮತ್ತು ಆರ್ಥಿಕತೆಯ ಅತ್ಯಂತ ವೇಗದ ಬೆಳವಣಿಗೆಗೆ ಈ ಪ್ಯಾಕೇಜ್​ ಸಹಾಯಕವಾಗಲಿದೆ.

ಸ್ವಾವಲಂಬಿ ಭಾರತ ಎಂದರೆ ನಮ್ಮ ರಾಷ್ಟ್ರ ಪ್ರತ್ಯೇಕವಾಗಿ ಇರುತ್ತದೆ ಎಂದೂ ಅಲ್ಲ. ನಾವು ನಮ್ಮ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಬ್ರ್ಯಾಂಡ್​ನ್ನಾಗಿ ಪರಿವರ್ತಿಸಬೇಕು. ಸ್ವಾವಲಂಬಿ ಭಾರತದ ಐದು ಆಧಾರ ಸ್ತಂಭಗಳಾದ ಆರ್ಥಿಕತೆ, ಮೂಲ ಸೌಕರ್ಯ, ವ್ಯವಸ್ಥೆ, ಜನಸಂಖ್ಯೆ, ಬೇಡಿಕೆ-ಪೂರೈಕೆಗಳನ್ನು ಉತ್ತೇಜನ ಮಾಡಲೆಂದೇ ಈ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.

ಹಾಗೇ ಲಾಕ್​ಡೌನ್​ ಸಂದರ್ಭದಲ್ಲಿ ರೈತರಿಗೆ ಕಿಸಾನ್​ ಸಮ್ಮಾನ್​ ಯೋಜನೆಯ ಮೂಲಕ ನೆರವು ನೀಡಲಾಗಿದೆ. ಹಾಗೇ ಉಜ್ವಲಾ ಯೋಜನೆ ಮೂಲಕ ಬಡವರಿಗೆ ಉಚಿತ ಗ್ಯಾಸ್​ ವಿತರಣೆ ಮಾಡಲಾಗಿದೆ. ಈ ಯೋಜನೆ ಇಲ್ಲದಿದ್ದರೆ ಅವರಿಗೆ ಗ್ಯಾಸ್​ ಸಿಗುತ್ತಿರಲಿಲ್ಲ. 41 ಕೋಟಿ ಜನಧನ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಬಡವರಿಗೆ 71 ಸಾವಿರ ಟನ್ ಪಡಿತರ ವಿತರಿಸಲಾಗಿದೆ ಎಂದು ತಿಳಿಸಿದರು.

ಪ್ಯಾಕೇಜ್​ಗೆ ಸಂಬಂಧಪಟ್ಟಂತೆ ಇಂದು 15 ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದರಲ್ಲಿ 6 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಪಟ್ಟದ್ದಾಗಿವೆ. ಎರಡು ಇಪಿಎಫ್​ಗೆ, ಎರಡು ಎಚ್​ಎಫ್​ಸಿಎಸ್​ ಮತ್ತು ಎಂಎಫ್​ಐಎಸ್​ಗೆ ಹಾಗೂ ಒಂದು ಡಿಸ್ಕಾಮ್​ಗಳಿಗೆ, ಒಂದು ಗುತ್ತಿಗೆದಾರರು, ಒಂದು ರಿಯಲ್ ಎಸ್ಟೇಟ್​ ಮತ್ತು ಇತರರಿಗೆ ಸಂಬಂಧಪಟ್ಟದ್ದು ಎಂದು ತಿಳಿಸಿದರು. ಹಾಗೇ ಮೊದಲನೇದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುವುದಾಗಿ ತಿಳಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ