ಸಂಸದ ,ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ತಮ್ಮ ಬಾಯಿ ಚಪಲಕ್ಕೆ ಏನೂ ಬೇಕಾದ್ರೂ ಹೇಳುತ್ತಾರೆ ಅನ್ನುವುದಕ್ಕೆ ಹಲವು ನಿದರ್ಶನಗಳಿವೆ. ಆದ್ರೆ ಅವರು ಹೇಳಿದ ಮಾತುಗಳನ್ನು ಜನರು ನಂಬಿ ಹಲವು ವರ್ಷಗಳಿಂದ ಮೋಸ ಹೋಗುತ್ತಲೇ ಇದ್ದಾರೆ.ಈ ಬಾರಿ ಯಲ್ಲಾಪುರ ಚುನಾವಣೆ ಪ್ರಚಾರದಲ್ಲೂ ಸಹ ಒಂದು ಸುಳ್ಳು ಹರಿ ಬಿಟ್ಟಿದ್ದು ಈಗ ಅವರ ಪಕ್ಷದ ನಾಯಕರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಅಷ್ಟಕ್ಕೂ ಅವರು ಹೇಳಿದ್ದೇನು ಅಂತೀರ ಇಲ್ಲಿದೆ ನೋಡಿ.
ಮಹಾರಾಷ್ಟ್ರ ದಲ್ಲಿ ರಾತ್ರೋ ರಾತ್ರೀ ಬಿಜೆಪಿ ಸರ್ಕಾರ ರಚಿಸಲು ಕಾರಣ ವೇನು ಎಂದು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗಿ ಅನಂತಕುಮಾರ್ ಹೆಗಡೆ ಮಾತನಾಡಿದ್ದಾರೆ.
ವೀಡೋಯೋ ನೋಡಲು ಈ ಲಿಂಕ್ ಬಳಸಿ:-
https://m.facebook.com/story.php?story_fbid=741374036357478&id=2138406246425296
ಮಹಾರಾಷ್ಟ್ರ ದಲ್ಲಿ ಪಾಟ್ನವಿಸ್ ಮುಖ್ಯಮಂತ್ರಿ ಆಗಲೇ ಬೇಕಿತ್ತು
ಸುಮಾರು 40ಸಾವಿರ ಕೋಟಿ ಕೇಂದ್ರದ ಅನುದಾನದ ಹಣ ಮುಖ್ಯಮಂತ್ರಿ ಖಾತೆಯಲ್ಲಿತ್ತು. ಈ ಹಣದ ರಕ್ಷಣೆ ಮಾಡಬೇಕಿತ್ತು.
ಈ ಕಾರಣದಿಂದ ಅವರು ಮುಖ್ಯಮಂತ್ರಿ ಯಾದರು ,ನಂತರ ಕೇಂದ್ರದ ಹಣವನ್ನು ಎಲ್ಲಿ ತಲುಪಿಸಬೇಕೋ ಸಲ್ಲಿಗೆ ತಲುಪಿಸಿದರು.ಇಲ್ಲವಾಗಿದ್ದರೆ ಕಾಂಗ್ರೆಸ್ ಈ ಹಣವನ್ನು ಲೂಟಿ ಮಾಡುತಿತ್ತು,ಕಾಂಗ್ರೇಸ್ ಮತ್ತು ಎನ್.ಸಿ.ಪಿ ಯಿಂದ ಹಣ ರಕ್ಷಣೆಗಾಗಿ ಮಹಾರಾಷ್ಟ್ರ ದಲ್ಲಿ ತರಾತುರಿಯಲ್ಲಿ ಸರಕಾರ ರಚನೆ ಮಾಡಬೇಕಾಯಿತು.
ಮಹಾರಾಷ್ಟ್ರ ದಂತೆ ರಾಜ್ಯದಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿತ್ತು ಎಂದಿದ್ದಾರು.
ಮಹರಾಷ್ಟ್ರದ ಬಿಜೆಪಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಟ್ನವಿಸ್ ಹೇಳುದ್ದು ಹೀಗೆ:-
ಫಡ್ನವೀಸ್ ಸರ್ಕಾರ ರಚಿಸಿದ್ದು ಮಹಾಮೈತ್ರಿಕೂಟದಿಂದ ಸಿಎಂ ನಿಧಿ(40,000 ಕೋಟಿ) ರಕ್ಷಣೆಗಾಗಿ ಎಂದಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಅವರ ಹೇಳಿಕೆ ಸರಿಯಲ್ಲ, ನನ್ನ 80 ಗಂಟೆಯ ಅಧಿಕಾರದಲ್ಲಿ ಸಿಎಂ ನಿಧಿ ವರ್ಗಾವಣೆಯಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಫಡ್ನವೀಸ್ ಸ್ಪಷ್ಟನೆ ನೀಡಿದ್ದು ಅಲ್ಲಗಳೆದಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ಸಂಸದ ಅನಂತಕುಮಾರ್ ಹೆಗಡೆ ಏನುಬೇಕಾದ್ರು ಹೇಳುತ್ತಾರೆ ಎಂಬುದು ಮತ್ತೊಮ್ಮೆ ಈ ಘಟನೆಯಿಂದ ಸಾಭೀತಾಗಿದೆ.
