ಅನಂತಕುಮಾರ್ ಹೆಗಡೆ ಮಲಗಿಬಿಟ್ಟ ಅಂದುಕೊಂಡಿದ್ದೆ.ಆತ ಇದ್ರೇನು,ಹೋದ್ರೇನು ಎಂದ ಆಸ್ನೋಟಿಕರ್ ಗೆ ಬಿಜೆಪಿಗೆ ಬರುವ ಆಸೆ!

1178

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗೆಡೆ ಅನಾರೋಗ್ಯಕ್ಕೆ ಒಳಗಾಗಿರುವುದಕ್ಕೆ ಮಾಜಿ ಸಚಿವ ಜೆಡಿಎಸ್ ಮುಖಂಡ ಆನಂದ್ ಆಸ್ನೋಡಿಕರ್ ಟೀಕೆಮಾಡಿದ್ದಾರೆ.

ಕಾರವಾರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ಆನಂದ್ ಆಸ್ನೋಟಿಕರ್ , ಅನಂತ್ ಕುಮಾರ್ ಹೆಗೆಡೆ ಅನಾರೋಗ್ಯದಿಂದ ಅವರ ರಾಜಕೀಯ ಭವಿಷ್ಯ ಮುಂದೆ ಕಷ್ಟಿವಿದೆ ,ಬಿಜೆಪಿಗೆ ಸೇರಿ ಮುಂದೆ ಎಂಪಿ ಸೀಟಿಗೆ ಬಿಜೆಪಿಯಿಂದ ನಿಲ್ಲಿ ಎಂದು ನನ್ನ ಸ್ನೇಹಿತರು ಹೇಳಿದ್ದರು.

ಮೊನ್ನೆ ಜಾತ್ರೆಯಲ್ಲಿ ನೋಡಿದಾಗ ಗಟ್ಟಿಯಾಗಿದ್ದಾನೆ. ಹಾಗಾಗಿ ಬಿಜೆಪಿಗೆ ಸೇರಿ ಎಂ.ಪಿ ಸೀಟಿಗೆ ನಿಲ್ಲುವುದು ಕಷ್ಟ.

ಅನಂತಕುಮಾರ್ ಹೆಗಡೆ ಮಲಗಿಬಿಟ್ಟ ಅಂತ ಅಂದುಕೊಂಡಿದ್ದೆವು,ಹೇಗೂ ಐದು ವರ್ಷ ಆತ ಯಾರಿಗೂ ಮುಖ ಕಾಣಿಸುವುದಿಲ್ಲ, ಹಾಗಾಗಿ ಆತನಿಗೆ ಹಂಡ್ರೆಡ್ ಪರ್ಸೆಂಟ್ ಏನೋ ಆಗಿರಬೇಕು, ಬೋನ್ ಕ್ಯಾನ್ಸರ್ ಆಗಿದೆ ,ಅದು ಆಗಿದೆ ಇದುವಾಗಿದೆ ಅಂತ ಎಲ್ಲಾ ರೀತಿಯ ಸುದ್ದಿ ಬರುತ್ತಿದೆ.

ಆದ್ರೆ ನನಗೆ ಮನಸ್ಸಿಗೆ ನೋವಾಗಿಲ್ಲ , ಹೀಗೂ ಕಾಣುವುದಿಲ್ಲ,ಹೇಗೂ ಕಾಣುವುದಿಲ್ಲ. ಎಲ್ಲಾದರೂ ಹಿಂದು ಮುಸ್ಲಿಂ ಗಲಾಟೆಯಾಗಬೇಕು , ಯಾರಾದ್ರೂ ಹಿಂದುಗಳು ಸಾಯಬೇಕು. ಅಂತ ಸಂದರ್ಭದಲ್ಲಿ ಮಾತ್ರ ಅವರನ್ನು ಕಾಣಬಹುದು.

ಆನಂದ್ ಆಸ್ನೋಟಿಕರ್ ಹೇಳಿಕೆ ವೀಡಿಯೋ ನೋಡಿ:-

ಅವರು ಚುನಾವಣೆ ಸ್ಪರ್ದಿಸಿದಾಗ ಆ ಸಂದರ್ಭದಲ್ಲಿ ಯಾವುದಾದರೂ ಅನುಕಂಪ ಬರುತ್ತದೆ ,ಯಾವಾಗಲೂ ಅವರ ಪರ ಒಳ್ಳೆ ಸನ್ನಿವೇಶ ಕ್ರಿಯೇಟ್ ಆಗುತ್ತೆ ,ಗೆಲ್ಲುತ್ತಾರೆ.

ಜಿಲ್ಲೆಯಲ್ಲಿ ಹಿಂದುತ್ವ ಶಕ್ತಿ ದೊಡ್ಡದಿದೆ ಅದನ್ನು ನಾನು ಒಪ್ಪಿದ್ದೇನೆ. ಇವತ್ತು ಕಮ್ಯುನಲ್ ನಲ್ಲೇ ನಮ್ಮ ರಾಜಕಾರಣ ನೆಡೆಯುವುದು .ಬಾಕಿ ವಿಚಾರದ ಮಾತೇ ಇಲ್ಲ. ಅನಂತಕುಮಾರ್ ಇದ್ರೇನು ,ಹೋದ್ರೇನು ನಮಗೇನೂ ಆಗುವುದಿಲ್ಲ ಎಂದು ಹೇಳಿದರು.

ನನ್ನ ರಾಜಕೀಯ ಜೀವನ ನಿರ್ಧಾರ ಮಾಡೋದು ದೇವೇಗೌಡರ ಕುಟುಂಬ!

ಮಧುಬಂಗಾರಪ್ಪನವರು ನನ್ನ ಅಣ್ಣ. ಅವರು ಕಾಂಗ್ರೆಸ್ ಗೆ ಹೋಗಿದ್ದಾರೆ ಆದ್ರೆ ನಾನು ಹೋಗಿವುದಿಲ್ಲ. ನನ್ನ ರಾಜಕೀಯ ಜೀವನವನ್ನು ದೇವೇಗೌಡರ ಕುಟುಂಬ ನಿರ್ಧಾರ ಮಾಡುತ್ತೆ. ಅವರು ಹೇಗೆ ಏನು ಮಾಡಬೇಕು ಎಂದು ಹೇಳುತ್ತಾರೋ ಹಾಗೆ ಮಾಡುತ್ತೇನೆ ಎಂದು ಆಸ್ನೋಟಿಕರ್ ಹೇಳಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ