BREAKING NEWS
Search

ಜೈಲಿನ ಕಂಬಿಯಿಂದ ಹೊರಬಂದ ಡಿ.ಕೆ ಶಿವಕುಮಾರ್! ಅಣ್ಣನಿಗಾಗಿ ಕಾದು ನಿಂತ ತಮ್ಮ!

362

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ 34 ದಿನಗಳಿಂದ ತಿಹಾರ್​ ಜೈಲಿನಲ್ಲಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ತಿಹಾರ್​ ಜೈಲಿನಿಂದ ಇಂದು ರಾತ್ರಿ ಬಿಡುಗಡೆಯಾದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ಹೈಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿದೆ.
25 ಲಕ್ಷ ರುಪಾಯಿಯ ಎರಡು ಬಾಂಡ್ ಮೂಲಕ ಬಿಡುಗಡೆ ಮಾಡಲಾಗಿದೆ.

ಜಾಮೀನು ಆದೇಶ ಪರಿಶೀಲನೆ ನಡೆಸಿದ ತಿಹಾರ್​ ಜೈಲು ಅಧಿಕಾರಿಗಳು ಬಿಡುಗಡೆ ಪ್ರಕ್ರಿಯೆ ನಡೆಸಿ ಇಂದು ರಾತ್ರಿ 9.30ಕ್ಕೆ ಅವರನ್ನು ಬಿಡುಗಡೆ ಮಾಡಿದರು.

ಸಹೋದರ ಸಂಸದ ಡಿ.ಕೆ.ಸುರೇಶ್​ ಜೈಲಿನ ಬಾಗಿಲಲ್ಲೇ ನಿಂತು ಅಣ್ಣನನ್ನು ಹೊರಗಡೆಗೆ ಬರಮಾಡಿಕೊಂಡರು. ಇವರ ಜೊತೆ ಹಲವು ಕಾಂಗ್ರೆಸ್​ ನಾಯಕರು ಇದ್ದರು.

ಹೈಕೋರ್ಟ್​ ಜಾಮೀನು ಆದೇಶ ಜೈಲು ಅಧಿಕಾರಿಗಳಿಗೆ ಸಂಜೆ.6.15ಕ್ಕೆ ತಲುಪಿತು. ಜೈಲು ಅಧಿಕಾರಿಗಳು 3 ತಾಸು ಬಿಡುಗಡೆ ಪ್ರಕ್ರಿಯೆ ನಡೆಸಿ ನಂತರ ಬಿಡುಗಡೆಗೊಳಿಸಿದರು.

ರಾತ್ರಿ ದೆಹಲಿಯಲ್ಲಿರುವ ಸಹೋದರ ಡಿ.ಕೆ.ಸುರೇಶ್​ ಮನೆಯಲ್ಲಿ ತಂಗಿದ್ದು ಬೆಳಗ್ಗೆ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇನ್ನು ಡಿ.ಕೆ ಬಿಡುಗಡೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ತಿಹಾರ್ ಜೈಲಿಗೆ ಭೇಟಿ ನೀಡಿದ ಸೋನಿಯಾ ಗಾಂಧಿ

ನಾಳೆ ಮಧ್ಯಾನದ ಒಳಗಾಗಿ ಶಿವಕುಮಾರ್ ಬೆಂಗಳೂರಿಗೆ ಆಗಮಿಸಲಿದ್ದು ಕಾಂಗ್ರೆಸ್ ಪಕ್ಷದ ರಾಜಕೀಯ ಬದಲಾವಣೆ ಸಹ ಆಗುವ ಸಾಧ್ಯತೆ ಗಳಿವೆ.

ಇಂದು ಕಾಂಗ್ರೆಸ್ ನ ವರಿಷ್ಟೆ ಸೋನಿಯಾ ಗಾಂಧಿ ಸಹ ಡಿಕೆ ಶಿವಕುಮಾರ್ ರವರನ್ನು ಭೇಟಿ ಮಾಡಿದ್ದು ಕಾಂಗ್ರೆಸ್ ನ ಕೆ.ಐ.ಸಿ.ಸಿ ಅಧ್ಯಕ್ಷ ಸ್ಥಾನ ನೀಡುವ ಕುರಿತು ಸಹ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಳ್ಳಲಿದೆ.




Leave a Reply

Your email address will not be published. Required fields are marked *