ಕಾರವಾರ :- ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಪಕ್ಷಾಂತರ ಮಾಡಿದ್ದಾರೋ ಅವರು ಸೋತಿದ್ದಾರೆ,
ಆ ಗಾಳಿ ಇಂದು ಕರ್ನಾಟಕದಲ್ಲಿ ಬೀಸುತ್ತಿದೆ.
ಅಧಿಕಾರ,ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು.

ಅನರ್ಹ ಶಾಸಕರು ಪ್ರಜಾ ಪ್ರಭುತ್ವದಲ್ಲಿ ಮಾರಕರು ಎಂದು ಮಾಜಿ ಸಚಿವ ಹಾಗೂ ಹಳಿಯಾಳ ಹಾಲಿ ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.
ಇಂದು ಶಿರಸಿಯಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉಪ ಚುನಾವಣೆಯಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸುತ್ತದೆ.
ಸ್ಥಿರ ಸರ್ಕಾರ ಕೊಡಲು ಶಕ್ತಿ ಇದ್ದರೆ ಸರ್ಕಾರ ರಚನೆ ಮಾಡಬೇಕು,ಕೇವಲ ಚೀಫ್ ಮಿನಿಸ್ಟರ್ ಮಂತ್ರಿ ಮಾಡಲು ಸರ್ಕಾರ ಆಗಬಾರದು.ಚುನಾವಣೆ ನಂತರ ಕಾಂಗ್ರೆಸ್ ಜೆಡಿಎಸ್ ಹೆಚ್ಚು ಸ್ಥಾನ ಬಂದಲ್ಲಿ ಸ್ಥಿರ ಸರ್ಕಾರ ಮಾಡಲು ಶಕ್ತಿ ಇದ್ದರೆ ಮಾಡಬೇಕು ಇಲ್ಲವಾದರೆ ಚುನಾವಣೆಗೆ ಹೋಗಬೇಕು ಎಂದರು.
ಶಿವರಾಮ್ ಹೆಬ್ಬಾರ್ ಆರೋಪ ತಳ್ಳಿಹಾಕಿದ ಆರ್.ವಿ ದೇಶಪಾಂಡೆ !
ಇನ್ನು ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಶಿವರಾಮ್ ಹೆಬ್ಬಾರ್ ಹೆಸರು ಹೇಳಿ ಮತ ಯಾಚಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ .
ಇದರಲ್ಲಿ ಯಾವ ಹುರುಳೂ ಇಲ್ಲ ,ಯಾವುದೇ ಆರೋಪ ಇದ್ರೂ ಹೇಳಲಿ,ನಿಮ್ಮ ಬಳಿ ದಾಖಲೆ ಇರಬೇಕು ದಾಖಲೆ ಇದ್ದರೆ ತೋರಿಸಲಿ ,ದಾಖಲೆ ಇಲ್ಲದೇ ಬೇಜವಬ್ದಾರಿ ಮಾತನಾಡಬಾರದು ಅದುಸರಿಯಲ್ಲ.
ಅವರು ಒಂದು ದೃಷ್ಠಿಯಿಂದ ಸೋತಿದ್ದಾರೆ ಎಂದು ಗೊತ್ತಾಗಿದೆ ಹಾಗಾಗಿ ಕೊನೆಯ ಅಸ್ತ್ರ ಹಣ ಮತ್ತು ಹೆಂಡ ಇದರ ಉಪಯೋಗ ಅವರು ಮಾಡುತ್ತಾರೆ ಎನ್ನುವ ಸುದ್ದಿ ಬಂದಿದೆ.
ಮತದಾರರು ಕ್ಷಣದ ಸುಖಕ್ಕಾಗಿ ಯಾರೂ ಇದಕ್ಕೆ ಬಲಿ ಬೀಳಬಾರದು.ತಕ್ಕ ಪಾಠ ಅನರ್ಹ ಶಾಸಕರಿಗೆ ಕಲಿಸಬೇಕು ಎಂದರು.
