BREAKING NEWS
Search

add

Astrology

Friday daily astrology|ಶುಕ್ರವಾರದ ದಿನ ಭವಿಷ್ಯ

439

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ವಾರ : ಶುಕ್ರವಾರ.

ಮೇಷರಾಶಿ
ಉದ್ಯೋಗ, ವ್ಯವಹಾರಗಳಲ್ಲಿ ಲಾಭ, ಹಲವು ದಿನಗಳಿಂದ ಬಾಕಿ ಉಳಿದಿದ್ದ ಕಾರ್ಯ ನೆರವೇರಲಿದೆ, ಆಸ್ತಿ ಮಾರಾಟ, ಪತ್ನಿಯೊಂದಿಗೆ ವಿರಸ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ, ಸಂಜೆಯ ವೇಳೆಗೆ ಶುಭ ಸಮಾಚಾರ ಕೇಳುವಿರಿ,ಆರೋಗ್ಯ ಸುಧಾರಣೆ.

ವೃಷಭರಾಶಿ
ಈ ದಿನ ಮಿಶ್ರ ಫಲ ,ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು ಲಭಿಸಲಿದೆ, ವ್ಯಾಪಾರದ ವ್ಯವಹಾರಗಳಲ್ಲಿ ಅಭಿವೃದ್ದಿ, ಧಾರ್ಮಿಕ ಕ್ಷೇತ್ರಗಳ ದರ್ಶನ, ಪರರಿಗೆ ಉಪಕಾರ ಮಾಡುವಿರಿ, ಮಾತನಾಡುವ ಮುನ್ನ ಎಚ್ಚರವಿರಲಿ.

ಮಿಥುನರಾಶಿ
ಭೂಮಿಗೆ ಸಂಬಂಧಪಟ್ಟ ವಿಚಾರದಲ್ಲಿ ಶುಭಫಲ, ರಾಜಕಾರಣಿಗಳಿಗೆ ಯಶಸ್ಸು, ಗಣ್ಯ ವ್ಯಕ್ತಿಗಳ ಭೇಟಿಯಿಂದ ಗೌರವ, ಸುಖ, ದುಃಖಗಳ ಸಮ್ಮಿಲನ ದಿನ, ದೇವತಾ ದರ್ಶನದಿಂದ ಮನಸಿಗೆ ನೆಮ್ಮದಿ.

ಕಟಕರಾಶಿ
ದೂರ ಪ್ರಯಾಣದಿಂದ ಯಶಸ್ಸು, ನಿರೀಕ್ಷಿತ ಧನಲಾಭ, ಕಪ್ಪು ವಸ್ತುಗಳಿಂದ ಅಧಿಕ ಲಾಭ, ವಾದ ವಿವಾದಗಳಲ್ಲಿ ಗೆಲುವು, ಸ್ನೇಹಿತರಿಂದ ಸಹಕಾರ, ದಿನಾಂತ್ಯಕ್ಕೆ ಶುಭ ಸಮಾಚಾರ ಕೇಳುವಿರಿ, ದೇವತಾ ದರ್ಶನ ಮಾಡಿ.

ಸಿಂಹರಾಶಿ
ಕಾರ್ಯಕ್ಷೇತ್ರದಲ್ಲಿ ಯಶಸ್ಸು, ವ್ಯಾಪಾರ, ವ್ಯವಹಾರಗಳಲ್ಲಿಯೂ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಅಧಿಕಾರಿಗಳ ಮನಸ್ಸನ್ನು ಗೆಲ್ಲುವುದರಿಂದ ಸಮಾಧಾನ, ಸಹೋದ್ಯೋಗಿಗಳಿಂದ ಕಿರಿಕಿರಿ.

ಕನ್ಯಾರಾಶಿ
ಆರ್ಥಿಕವಾಗಿ ಅಡಚಣೆ, ಇಷ್ಟಾರ್ಥ ಕಾರ್ಯ ಸಿದ್ದಿಯಿಂದ ಮನಸಿಗೆ ನೆಮ್ಮದಿ, ನಂಬಿದವರೇ ಮೊಸ ಮಾಡುವ ಸಾಧ್ಯತೆ, ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಅನುಕೂಲ.

ತುಲಾರಾಶಿ
ಧನಲಾಭ, ಕಠಿಣ ಪರಿಶ್ರಮದಿಂದ ಉತ್ತಮ ಪ್ರತಿಫಲ, ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ, ಖರ್ಚಿನ ಪ್ರಮಾಣವೂ ಹೆಚ್ಚಲಿದೆ, ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಶ್ಚಿಕರಾಶಿ
ವಿರೋಧಿಗಳಿಂದ ಕಿರಿಕಿರಿ, ಬಂಧುಗಳ ಪ್ರೀತಿ ವಿಶ್ವಾಸ ಲಭಿಸಲಿದೆ, ವ್ಯಾಪಾರ, ವ್ಯವಹಾರಗಳಲ್ಲಿ ತಾಳ್ಮೆ, ಸಹನೆಯಿಂದ ವರ್ತಿಸಿ, ಪ್ರಾಪಂಚಿಕ ಜೀವನವು ಸುಖಕರವಾಗಿರಲಿದೆ.

ಧನಸುರಾಶಿ
ವ್ಯಾಪಾರ, ವ್ಯವಹಾರಗಳು ಕುಂಟುತ್ತಾ ಸಾಗಲಿದೆ, ವಾದ ವಿವಾದಗಳಿಂದ ದೂರವಿದ್ದಷ್ಟು ಉತ್ತಮ, ಕೌಟುಂಬಿಕ ಜೀವನವು ಸಮಾಧಾನಕರ, ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ಅಡಚಣೆ, ವ್ಯಾಪಾರ, ವ್ಯವಹಾರಗಳಲ್ಲಿ ಆತಂಕ ಮುಂದುವರಿಯಲಿದೆ, ಹಣಕಾಸಿನ ಅಡಚಣೆ ಹೆಚ್ಚಲಿದೆ, ಕೌಟುಂಬಿಕವಾಗಿ ನೆಮ್ಮದಿಯ ದಿನ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರ ಕೇಳುವಿರಿ.

ಕುಂಭರಾಶಿ
ಮನೆಯಲ್ಲಿ ಸಂತಸದ ವಾತಾವರಣ, ವ್ಯಾಪಾರ, ವ್ಯವಹಾರಗಳಲ್ಲಿ ಆತಂಕ ಮುಂದುವರಿಯಲಿದೆ, ಹಣಕಾಸಿನ ಅಡಚಣೆ ಹೆಚ್ಚಾಗಲಿದೆ, ದೂರದ ಬಂಧುಗಳ ಆಗಮನದಿಂದ ಮನಸಿಗೆ ಸಂತಸ, ಮಕ್ಕಳಿಂದ ಶುಭಸುದ್ದಿ.

ಮೀನರಾಶಿ
ಆರೋಗ್ಯದ ಬಗ್ಗೆ ಎಚ್ಚರವಿರಲಿ, ಕುಟುಂಬದಲ್ಲಿ ಕಲಗ, ಪತ್ನಿಯೊಂದಿಗೆ ವಿರಸ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ, ಅತಿಯಾದ ಬೇಸರ, ಮಾತಿನ ಮೇಲೆ ಹಿಡಿತವಿರಲಿ,ವ್ಯಾಪಾರಿಗಳಿಗೆ ನಷ್ಟ,ಈ ದಿನ ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ