ಬಿಕ್ಕೆ ಹಣ್ಣಿನಲ್ಲಿದೆ ಔಷಧೀಯ ಗುಣ! ವಿಶೇಷ ತಿಳಿಯಿರಿ

235

ಬಿಕ್ಕೆ ಗಿಡ / Gardenia gummifera ( Rubiaceae )

ಬಿಕ್ಕೆ ಗಿಡ ನಾಲ್ಕೈದು ಅಡಿ ಎತ್ತರ ಬೆಳೆಯುವ ಗಟ್ಟಿಯಾದ ಕಾಂಡವನ್ನು ಹೊಂದಿರುವ ಸಸ್ಯ ಪ್ರಬೇಧ. ಗುಡ್ಡ ಬೆಟ್ಟದ ಬಯಲು ಪ್ರದೇಶದಲ್ಲಿ ಕಂಡು ಬರುತ್ತದೆ.

ಬಿಳಿಯ ಬಣ್ಣದ ಹೂಗಳನ್ನು ಬಿಡುತ್ತದೆ. ಬಾದಾಮಿಯಾಕಾರದ ಕಾಯಿ ಹಣ್ಣಾದಾಗ ಒಳಗಿನ ತಿರುಳು ತಿನ್ನಲು ಬಲು ರುಚಿಯಾಗಿರುತ್ತದೆ. ಬಿಕ್ಕೆ ಗಿಡದ ಬೇರು, ಕಾಂಡದಲ್ಲಿ ಒಸರುವ ಗೋಂದು ಔಷಧಿಯಾಗಿ ಬಳಸಲ್ಪಡುತ್ತದೆ.

  • ಹಳೆಯ ಹುಣ್ಣು :- ಬಿಕ್ಕಿ ಗಿಡಕ್ಕೆ ಗಾಯ ಮಾಡಿ ಒಸರುವ ಗೋಂದನ್ನು ಸಂಗ್ರಹಿಸಿ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ಲೇಪಿಸುತ್ತಿದ್ದರೆ ಗುಣವಾಗುತ್ತದೆ.
  • ಸರ್ಪಸುತ್ತು :- ಬಿಕ್ಕಿ ಗಿಡದ ಬೇರನ್ನು ನಿಂಬೆ ಹುಳಿಯಲ್ಲಿ ತೇಯ್ದು ಲೇಪಿಸುವುದರಿಂದ ಸರ್ಪಸುತ್ತು ನಿಯಂತ್ರಣಕ್ಕೆ ಬರುತ್ತದೆ.
  • ಜಂತು ನಾಶಕ್ಕೆ :- ಬಿಕ್ಕಿ ಗಿಡದ ಅಂಟನ್ನು ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಹೊಟ್ಟೆ ಹುಳು ನಾಶವಾಗುತ್ತದೆ.
ಬಿಕ್ಕೆ ಗಿಡದ ಹೂ
  • ಗಿಡದ ಚಿಗುರು ಸಂಗ್ರಹಿಸಿ ಚೆನ್ನಾಗಿ ಅರೆದು ಹುಳಿ ಮಜ್ಜಿಗೆಯಲ್ಲಿ ಬೆರೆಸಿ ಸೇವಿಸುವುದರಿಂದಲೂ ಹೊಟ್ಟೆ ಹುಳು ನಾಶವಾಗುತ್ತದೆ.
  • ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಅವಶ್ಯ.

ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ




Leave a Reply

Your email address will not be published. Required fields are marked *