ಕಾರವಾರದ ಶಾಸಕರ ಮಾತಿಗೆ ಸ್ಪಂದಿಸಿದ ಗೋವಾ ಸರ್ಕಾರ-ನಾಳೆಯಿಂದ ಗೋವ ಗಡಿ ಮುಕ್ತ!

6614

ಕಾರವಾರ :- ಕೇಂದ್ರ ಸರ್ಕಾರ ಅಂತರ್ ರಾಜ್ಯ ಗಡಿ ಮುಕ್ತಗೊಳಿಸುವಂತೆ ಸೂಚನೆ ನೀಡಿದರೂ ಗೋವಾ ಸರ್ಕಾರ ತನ್ನ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಗೆ ಎರಡು ಸಾವಿರ ಹಣ ಪಡೆದು ನಿರ್ಬಂಧ ಹೇರಿತ್ತು‌.

ಈ ಹಿನ್ನಲೆಯಲ್ಲಿ ಕರ್ನಾಟಕ -ಗೋವಾ ಗಡಿ ಜಿಲ್ಲೆಯ ಜನರಿಗೆ ಗೋವಾ ರಾಜ್ಯಕ್ಕೆ ಕೆಲಸ ನಿಮಿತ್ತ ಹೋಗಿ ಬರಲು ಕಷ್ಟಕರವಾಗಿತ್ತು. ಪ್ರತಿ ವ್ಯಕ್ತಿಗೆ ಎರಡುಸಾವಿರ ಹಣ ನೀಡಿ ಗೋವಾ ಪ್ರವೇಶಿಸುವುದೇ ದೊಡ್ಡ ಸಮಸ್ಯೆಯಾಗಿತ್ತು.

ಹೀಗಾಗಿ ಗೋವಾ ಗಡಿ ಭಾಗದ ಕಾರವಾರದ ವಾಟಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘವನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿ ಗೋವಾ ಸರ್ಕಾರಕ್ಕೆ ಮನವಿ ಮೂಲಕ ಗಡುವು ನೀಡಲಾಗಿತ್ತು.

ಇನ್ನು ಕಾರವಾರದ ಜನರಿಗೆ ಉದ್ಯೋಗ ನಿಮಿತ್ತ ಗೋವಾ ರಾಜ್ಯಕ್ಕೆ ತೆರಳುವ ಸಮಸ್ಯೆ ಯಿಂದ ತೊಂದರೆ ಅನುಭವಿಸುತಿದ್ದರು‌. ಹೀಗಾಗಿ ಕುದ್ದು ಕಾರವಾರ ಅಂಕೋಲ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ರವರು ಗೋವಾ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು ಈ ವೇಳೆ ಸೆಪ್ಟಂಬರ್ ಒಂದರಿಂದ ಗೋವಾ -ಕರ್ನಾಟಕ ಗಡಿ ಮುಕ್ತಗೊಳಿಸುವ ಭರವಸೆ ನೀಡಿದ್ದರು.
ನಿನ್ನೆ ದಿನ ಮಹಾರಾಷ್ಟ್ರ ಮೂಲದ ಪತ್ರಿಕೆಯ ಸಂದರ್ಶನದಲ್ಲಿ ಈ ಕುರಿತು ಪ್ರಸ್ತಾಪಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೆಪ್ಪೆಂಬರ್ 1 ರಿಂದ ಗೋವಾ ರಾಜ್ಯದ ಎಲ್ಲಾ ಗಡಿಯನ್ನು ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ