ಗೋವಾ ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರವಾರದ ಉದ್ಯೋಗಿಗಳ ಸಂಬಳ ಕಡಿತ ಮಾಡದಂತೆ ಕಾರವಾರ ಶಾಸಕರಿಂದ ಗೋವಾ ಸಿ.ಎಂ ಗೆ ಪತ್ರ

1275

ಕಾರವಾರ :- ಗೋವಾ ರಾಜ್ಯದ ಅನೇಕ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರವಾರ ತಾಲ್ಲೂಕಿನ ಯುವಕರು ಲಾಕ್ ಡೌನ್ ಆದೇಶಕ್ಕೆ ಒಂದು ದಿನ ಮೊದಲು ತಮ್ಮ ಸ್ವಂತ ಊರುಗಳಿಗೆ ವಾಪಾಸ್ಸಾಗಿದ್ದರು.

ಒಮ್ಮೆಲೆ ಲಾಕ್ ಡೌನ್ ಆದೇಶ ಬಂದ ಕಾರಣ ಅವರು ತಮ್ಮ ಕಂಪನಿಗಳಿಗೆ ತೆರಳಲಾಗದೆ ಸ್ವಂತ ಊರಿನಲ್ಲಿಯೇ ಉಳಿದುಕೊಂಡಿದ್ದರು ಈಗ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿ ತಮ್ಮ‌ತಮ್ಮ ಕಂಪನಿಗಳಿಗೆ ತೆರಳಲು ಸರಕಾರ ಅವಕಾಶ ಕಲ್ಪಿಸಿದೆ.

ಆದರೇ ಈ ಯುವಕರು ಕೆಲಸ ಮಾಡುತ್ತಿರುವ ಕಂಪನಿಗಳು ಸಂಬಳ ಕಡಿತಗೊಳಿಸುತ್ತೇವೆಂದು ಉದ್ಯೋಗಿಗಳಿಗೆ ತಿಳಿಸಿರುತ್ತಾರೆ.

ಸಾರಿಗೆ ನಿರ್ಬಂಧ ಇರುವುದರಿಂದ ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ಸಂಬಳ ಕಡಿತಗೊಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ ಸಾವಂತ ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಚೇರಿಗೆ ಪತ್ರ ರವಾನಿಸಿದ್ದು ಇವರ ಸಮಸ್ಯೆಗಳಿಗೆ ಸ್ಪಂದಿಸಲು ಕೋರಿದ್ದಾರೆ.

ಈ ಹಿನ್ನಲೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳು ಸೂಕ್ತ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸುವುದಾಗಿ ತಿಳಿಸಿದ್ದು ಸಂಬಳ ಕಡಿತಗೊಳಿಸದಂತೆ ಈ ಉದ್ಯೋಗಿಗಳಿಗೆವಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ