ಗೋಕರ್ಣದಲ್ಲಿ ನಾಲ್ಕು ಕೆಜಿ ಗಾಂಜಾ ವಶ-ಹುಬ್ಬಳ್ಳಿ ಮೂಲದ ಆರೋಪಿ ಬಂಧನ

865

ಕಾರವಾರ:- ಗೋಕರ್ಣ ದಲ್ಲಿ ಇಂದು ಪಿ.ಎಸ್.ಐ ನವೀನ್ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ನಾಲ್ಕು ಕೆಜಿ ಗಾಂಜಾ ವನ್ನು ವಶಪಡಿಸಿಕೊಂಡು ಹುಬ್ಬಳ್ಳಿ ಯ ನೇಕಾರ ನಗರದ ವಿನಾಯಕ್ ಪ್ರೇಮನಾಥ್ ಹಬೀಬ್ (25) ಎಂಬುವವನನ್ನು ವಶಕ್ಕೆ ಪಡೆದಿದ್ದು ಆತನಿಂದ ಅಂದಾಜು 80 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇಂದು ಗೋಕರ್ಣದ ಬೇಲೆಹಿತ್ತಲಲ್ಲಿ ಗಾಂಜಾ ಮಾರಾಟ ಮಾಡುವಾಗ ಮಾಲು ಸಮೇತ ಈ ಆರೋಪಿ ಸಿಕ್ಕಿಬಿದ್ದಿದ್ದು ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Reply

Your email address will not be published. Required fields are marked *