ಗೂಗಲ್ ಮ್ಯಾಪ್ ನಲ್ಲಿ ಹೊಸ ಅವಿಷ್ಕಾರ! ಇನ್ನುಮುಂದೆ ಪ್ರಯಾಣಕ್ಕೆ ದಾರಿ ಸುಗುಮ!ಏನು ವಿಶೇಷ ಗೊತ್ತ!

879

ಬೆಂಗಳೂರು:- ಹೊಸ ಊರಿಗೆ ಹೋದ್ರೆ ಕೈಯಲ್ಲಿ ವಿಳಾಸ ಇದ್ರೂ ಮನೆ ಹುಡುಕುವುದು ಕಷ್ಟ ಅದ್ರಲ್ಲೂ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಸ್ಸಿನಲ್ಲಿ ಹೋಗಬೇಕಾದರೆ ಬಸ್‌ ನಂಬರ್‌ ಗೊತ್ತಿರಬೇಕು. ಆದರೆ ಎಲ್ಲಾ ಬಸ್‌ಗಳ ನಂಬರ್‌ ನೆನಪಿಟ್ಟುಕೊಳ್ಳುವುದು ಹೇಗೆ ಸಾಧ್ಯ .

ಅಬ್ಬ ಯಾಕಾದ್ರೂ ಈ ಸಿಟಿಗೆ ಬಂದೆನೋ ಅಂತ ಹಿಡಿ ಶಾಪ ಕಂಡಿತ ಹಾಕ್ತೀವಿ ಅಲ್ವವಾ!.

ಅದಕ್ಕೊಂದು ಪರಿಹಾರವನ್ನು ಇದೀಗ ಗೂಗಲ್‌ ಮ್ಯಾಫ್ಸ್‌ ಕಂಡುಹಿಡಿದಿದೆ.

ಭಾರತಕ್ಕೆಂದೇ ಎಕ್ಸ್‌ಕ್ಲೂಸಿವ್‌ ಆಗಿ ಕೆಲವು ಫೀಚರ್‌ಗಳನ್ನು ನೀಡಿದ್ದು, ಅದರಲ್ಲಿ ನಮ್ಮ ಬೆಂಗಳೂರು, ಮೈಸೂರು ಮುಂತಾದ ಏರಿಯಾಗಳಲ್ಲೂ ಈ ಫೀಚರ್‌ ಲಭ್ಯವಾಗಲಿದೆ.

ಈ ಫೀಚರ್‌ ಏನೆಂದರೆ ರೈಲಿನ ಟೈಮಿಂಗ್ಸ್‌, ಯಾವ ಬಸ್ಸು ಹತ್ತಬೇಕು, ಆಟೋಗೆ ಎಷ್ಟುದುಡ್ಡಾಗುತ್ತದೆ ಎಂಬಿತ್ಯಾದಿ ಮಾಹಿತಿಗಳೆಲ್ಲಾ ನಿಮ್ಮ ಮೊಬೈಲ್ ನಲ್ಲಿ ಲಭ್ಯವಾಗಲಿದೆ.

ಇನ್ನುಮುಂದೆ ಸರಳ ಬಸ್ಸು ಪಯಣ!

ಬೆಂಗಳೂರು, ಮೈಸೂರು ಸೇರಿದಂತೆ ಚೆನ್ನೈ, ಹೈದರಾಬಾದ್‌, ಮುಂಬೈ ಇತ್ಯಾದಿ ನಗರಗಳಲ್ಲಿ ಗೂಗಲ್‌ ಮ್ಯಾಪ್‌ ತೆರೆದರೆ ಸಾಕು ನೀವು ಯಾವ ಕಡೆಗೆ ಹೋಗಬೇಕು ಅಂತ ಹೇಳುತ್ತೀರೋ ಅಲ್ಲಿಗೆ ಹೋಗಬೇಕಾದ ಬಸ್‌ ನಂಬರ್‌, ಅದರ ಸಮಯ ಇತ್ಯಾದಿ ಎಲ್ಲಾ ಮಾಹಿತಿಗಳೂ ಸಿಗುತ್ತವೆ. ಎಷ್ಟುಟ್ರಾಫಿಕ್‌ ಇದೆ, ನೀವು ಇಳಿಯಬೇಕಾದ ತಾಣ ತಲುಪಲು ಎಷ್ಟುಸಮಯ ತಗುಲುತ್ತದೆ ಎಂಬುದೆಲ್ಲವೂ ಇಲ್ಲಿ ಗೊತ್ತಾಗುತ್ತದೆ. ಗೂಗಲ್‌ ಮ್ಯಾಪ್‌ನಲ್ಲಿ ನೀವು ಎಲ್ಲಿಗೆ ಹೋಗಬೇಕು ಎಂದು ತಿಳಿಸಿದರೆ ಅಷ್ಟೇ ಸಾಕು. ಉಳಿದಿದ್ದೆಲ್ಲಾ ಸುಲಭ. ಪಯಣದ ಸಮಯದಲ್ಲಿ ನೀವು ಯಾವ ಏರಿಯಾದಲ್ಲಿದ್ದೀರಿ ಅಂತಲೂ ನಿಮಗೆ ಗೊತ್ತಾಗುತ್ತಿರುತ್ತದೆ.

ಟ್ರೈನ್‌ ಸಮಯ ಕೂಡ ಸಿಗುತ್ತೆ!

ದೂರದ ಊರಿಗೆ ರೈಲಲ್ಲಿ ಹೋಗುವವರಿಗೆ ರೈಲಿನ ಸಮಯ ಎಷ್ಟುಅನ್ನುವುದು ಮುಖ್ಯ. ಇದೀಗ ಅಪ್‌ಡೇಟ್‌ ಆಗಿರುವ ಗೂಗಲ್‌ ಮ್ಯಾಪ್‌ ರೈಲು ಎಷ್ಟುಸಮಯಕ್ಕೆ ನಿಮ್ಮ ರೈಲು ನಿಲ್ದಾಣಕ್ಕೆ ಬರಲಿದೆ ಎಂಬ ಮಾಹಿತಿಯನ್ನೂ ತಿಳಿಸಲಿದೆ. ರೈಲು ತಡವಾಗುತ್ತಾದರೆ ಅದರ ಮಾಹಿತಿಯನ್ನೂ ಗೂಗಲ್‌ ಮ್ಯಾಪ್‌ ನೀಡಲಿದೆ.

ಆಟೋ ಮಾಹಿತಿಯೂ ಲಭ್ಯ!

ಗೂಗಲ್‌ನ ಹೊಸ ಅವತಾರ ಎಷ್ಟುಚೆನ್ನಾಗಿದೆ ಎಂದರೆ ಇದರಲ್ಲಿ ಆಟೋಗಳ ಲಭ್ಯತೆಯೂ ತಿಳಿಯುತ್ತದೆ. ಗೂಗಲ್‌ ಮ್ಯಾಪ್‌ನಲ್ಲಿ ನೋಡಿಕೊಂಡು ಆಟೋ ಹತ್ತಿದರೆ ಯಾರೂ ಮೋಸ ಮಾಡೋಕಾಗಲ್ಲ. ಮೊದಲೇ ರೇಟು ಫಿಕ್ಸಾಗಿರುತ್ತದೆ, ಯಾವ ದಾರಿಯಲ್ಲಿ ಹೋಗುತ್ತೀರಿ ಅನ್ನುವುದೂ ತಿಳಿಯುತ್ತಿರುತ್ತದೆ. ಈ ಫೀಚರ್‌ ಸದ್ಯಕ್ಕೆ ಬೆಂಗಳೂರು ಮತ್ತು ದೆಹಲಿಯಲ್ಲಿ ಮಾತ್ರ ಸದ್ಯ ದೊರೆಯುತ್ತಿದೆ, ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಿಗೂ ಬರೋದ್ರಲ್ಲಿ ಅನುಮಾನವಿಲ್ಲ.
Leave a Reply

Your email address will not be published. Required fields are marked *

error: Content is protected !!