ಡ್ರಾಗನ್ ಪ್ರೂಟ್ ಹೆಸರನ್ನೇ ಬದಲಿಸಿದ ಬಿಜೆಪಿ ಸರ್ಕಾರ:ಹಣ್ಣಿನ ಹೆಸರು ಕೇಳಿದ್ರೆ ಶಾಕ್ ಆಕ್ತೀರಾ.!

1316

ಕನ್ನಡವಾಣಿ ಡೆಸ್ಕ:- ಉತ್ತರ ಪ್ರದೇಶ ಬಿಜೆಪಿ ಸರ್ಕಾರ ತನ್ನ ರಾಜ್ಯದಲ್ಲಿ ನಗರ ಪ್ರದೇಶದ ಹೆಸರನ್ನು ಬದಲಿಸಿ ಟೀಕೆಯ ಜೊತೆ ಭಾರಿ ಸಂಚಲನ ಸೃಷ್ಟಿಸಿತ್ತು.

ಈಗ ಆ ಸಾಲಿಗೆ ಗುಜರಾತಿನ ಬಿಜೆಪಿ ಸರ್ಕಾರ ಸೇರಿದೆ. ಆದ್ರೆ ಗುಜರಾತ್ ನಲ್ಲಿ ನಗರದ ಹೆಸರು ಬದಲಿಸಲಿಲ್ಲ .ಬದಲಿಗೆ ಗುಜರಾತ್ ನಲ್ಲಿ ಪ್ರಸಿದ್ಧಿ ಪಡೆದಿರುವ ಡ್ರಾಗನ್ ಪ್ರೂಟ್ ಗೆ ಮುಖ್ಯಮಂತ್ರಿ ವಿಜಯ್ ರೂಪಾನಿ ಹೆಸರನ್ನು ಬದಲಿಸಿ ಆದೇಶಿಸಿದ್ದಾರೆ.

ಹೌದು ಗುಜರಾತ್ ನಲ್ಲಿ ಸಿಗುವ ಡ್ರಾಗನ್ ಪ್ರೂಟ್ ಗೆ ಕಮಲಂ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ವಿಜಯ್ ರೂಪಾನಿ ಡ್ರಾಗನ್ ಪ್ರೂಟ್ ಚೈನಾ ದೇಶದ ಹಣ್ಣು ಇದು ನೋಡಲು ಕಮಲದಂತೆ ಇದೆ ಹಾಗಾಗಿ ಇದನ್ನು ಕಮಲಂ ಎಂದು ಮರು ನಾಮಕರಣ ಮಾಡಲಾಗಿದೆ‌.

ಕಮಲಂ ಎಂಬ ಶಬ್ಧ ಸಂಸ್ಕೃತದ್ದು ,ಸಂಸ್ಕೃತಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಕಮಲಂ ಎಂದು ಡ್ರಾಗನ್ ಪ್ರೂಟ್ ಗೆ ಹೆಸರು ಬದಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸದ್ಯ ಮುಖ್ಯಮಂತ್ರಿಗಳ ಈ ಘೋಷಣೆ ಪರ ವಿರೋಧದ ಅಲೆ ಎಬ್ಬಿಸಿದೆ. ಕೆಲವರು ಈ ಹಣ್ಣು ಬಿಜೆಪಿಯ ಚಿಹ್ನೆ ಎಂದು ಟೀಕಿಸಿದರೆ ಇನ್ನು ಕೆಲವರು ಚೀನಾ ವಿರೋಧವಾಗಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಸ್ವಾಗತಿಸಿದ್ದಾರೆ.

ಒಟ್ಟಿನಲ್ಲಿ ಗುಜರಾತ್ ನಲ್ಲಿ ಹಣ್ಣುಗಳು ಕೂಡ ಬಿಜೆಪಿ ಮಯವಾಗಿದ್ದು ವಿರೋಧಿಗಳು ತಿನ್ನಬೇಕಿದ್ದರೆ ಕಷ್ಟವಾಗಬಹುದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!