BREAKING NEWS
Search

ಚುನಾವಣೆ ಪ್ರಕ್ರಿಯೆಯಿಂದ ಗೃಹ ಸಚಿವರನ್ನು ದೂರ ಇಡಲು ಚುನಾವಣೆ ಆಯೋಗಕ್ಕೆ ಹೆಚ್.ಕೆ ಪಾಟೀಲ್ ಆಗ್ರಹ! ಕಾರಣವೇನು ಗೊತ್ತಾ?

129

ಕಾರವಾರ :- ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಆಗ್ರಹಿಸಿದ್ದಾರೆ. ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಚುನಾವಣೆ ನಡೆಯುವ ವರೆಗೂ ಬೊಮ್ಮಾಯಿ ಚುನಾವಣೆ ಪ್ರಕ್ರಿಯೆ ಯಿಂದ ದೂರು ಇಡುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಸಿದ್ರು.


ನವೆಂಬರ್ ೨೦ ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಯಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದೇ ಹಾಗೇ ಬಿಡಲಾಗಿತ್ತು,ಈ ಬಗ್ಗೆ ಚೆಕ್‌ಪೊಸ್ಟ್ ನಲ್ಲಿದ್ದ ಪೊಲೀಸರು ಬೆಂಗಾವಲು ವಾಹನದ ಚಾಲಕನನ್ನ ಅಮಾನತು ಮಾಡಲಾಗಿದೆ.ಅಮಾನತು ಮಾಡಿರುವುದು ನೋಡಿದರೆ ಗೃಹ ಸಚಿವರೇ ಅಕ್ರಮ ನಡೆಸಿದಂತೆ ಕಾಣುತ್ತಿದೆ.ಈ ಹಿನ್ನಲೆಯಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ರು.

ಬಿಜೆಪಿಯವರು ಮಾಡಿದ ಕುತಂತ್ರಕ್ಕೆ ಜನರು ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ,ರಾಜಕೀಯ ಅನೈತಿಕತೆಯನ್ನೇ ಬಿಜೆಪಿಗರು ಅಸ್ತ್ರವನ್ನಾಗಿನ ಮಾಡಿಕೊಳ್ತಾ ಇದ್ದಾರೆ,ಮಹಾರಾಷ್ಟ್ರ, ಬೆಂಗಾಲ್ ನಲ್ಲಿ ಆದ ಮುಖಭಂಗ ದಿಂದಾದರೂ ಬಿಜೆಪಿ ಪಾಠ ಕಲಿಯಬೇಕು. ಸಿ.ಎಂ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದಿದ್ದಾರೆ ಅವರ ವಿರುದ್ದ ಮಾನನಷ್ಟ ಮೊಕ್ಕದಮ್ಮೆ ಹಾಕಲಿ,ಈಗ ಸಾರ್ವಜನಿಕರ ಮುಂದೆ ಹೇಳುವುದನ್ನ ಅಲ್ಲಿ ಹೋಗಿ ಹೇಳ್ತೀವಿ ಇದೇ ವಿಷಯ ವನ್ನು ಬಿಸಿ ಪಾಟೀಲ್ ಹೆಬ್ಬಾರ್ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಒಪ್ಪಿಗೆ ಪಡೆದು ರಾಜೀನಾಮೆ‌ ಕೊಡಿಸಿದ್ದೇವೆ ಎಂದು ಹೇಳಿದ್ದಾರೆ,ಇದರ ವಿಡಿಯೋ ಸಹ ಅವರ ಕಾರ್ಯಕರ್ತರೇ ಹೊರ ಬಿಟ್ಟಿದ್ದಾರೆ ಎಂದರು.

ಯಲ್ಲಾಪುರ ದಲ್ಲಿ ಭೀಮಣ್ಣ ಗೆಲ್ತಾರೆ

ಯಲ್ಲಾಪುರದ ಕ್ಷೇತ್ರ ದಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಅಕ್ರೋಶದ ಅಲೆ ಇದೆ.ಇದರಿಂದ ಭೀಮಣ್ಣ ನಾಯ್ಕ ಗೆಲ್ಲುತ್ತಾರೆ. ಹೆಬ್ಬಾರ್ ಪಕ್ಷಕ್ಕೆ ದ್ರೋಹ ವೆಸಗಿ ಹೋಗಿದ್ದಾರೆ ಇದರಿಂದ ಕ್ಷೇತ್ರದಲ್ಲಿ ಅವರ ವಿರುದ್ಧ ಅಲೆ ಹೆಚ್ಚಾಗಿದೆ ,ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಅನುಕಂಪವಿದೆ ಈ ಕಾರಣದಿಂದ ಗೆಲ್ಲುತ್ತಾರೆ ಎಂದು ತಮ್ಮ ಅಭ್ಯರ್ಥಿ ಗೆಲುವಿನ ಕುರಿತು ಪಾಟೀಲ್ ಹೇಳಿದರು.




Leave a Reply

Your email address will not be published. Required fields are marked *