BREAKING NEWS
Search

ಇವರಿಗೆ ಮಣ್ಣೇ ಆಹಾರ!ಮಣ್ಣು ತಿಂದು ಬದುಕುತ್ತಾರೆ ಈ ಜನ!

777

ದುಡುಮೆ ಮಾಡದಿದ್ರೆ ಮುಂದೆ ಮಣ್ಣು ತಿನ್ನಬೇಕಾಗುತ್ತೆ ಎಂದು ನಮ್ಮ ಹಿರಿಯರು ಬೈಯುವ ಮಾತುಗಳು ಉಂಟು .ಆದ್ರೆ ಈ ದೇಶದ ಬಹುತೇಕ ಜನರು ದಿನದ ಆಹಾರವಾಗಿ ಮಣ್ಣನ್ನೇ ತಿನ್ನುತ್ತಾರೆ. ಅರೇ ಇವರಿಗೇನು ಹುಚ್ಚೇ ಮಣ್ಣು ತಿಂದು ಬದುಕಲು ಸಾಧ್ಯವೇ ಅಂತ ನೀವು ಯೋಚಿಸಬಹುದು,ಆದ್ರೆ ಇವರು ಬದುಕಲಿಕ್ಕಾಗಿಯೇ ಮಣ್ಣು ತಿನ್ನುತ್ತಾರೆ.

ಹೌದು ಮಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಜನರಿರುವ ಆದೇಶ ಮತ್ಯಾವುದೂ ಅಲ್ಲ ಅಮೇರಿಕಾದ ಪಕ್ಕದಲ್ಲಿಯೇ ಇರುವ ಹೈಟಿ ಎಂಬ ಪುಟ್ಟ ದೇಶ.

ಈ ದೇಶ ದಲ್ಲಿ ನಮ್ಮ ದೇಶದಂತೆ ಸ್ವತಂತ್ರ ದೇಶ,ನಮ್ಮದೇಶದಲ್ಲಿ ಇರುವಂತೆ ಪ್ರಧಾನಿ ರಾಷ್ಟ್ರಪತಿ ಎಲ್ಲಾ ಇದ್ದಾರೆ.ಆದರೂ ಈ ದೇಶದಲ್ಲಿ ಬ್ರಷ್ಟಾಚಾರ ,ನಿರುದ್ಯೋಗ, ಹಣಕಾಸು ಮುಗ್ಗಟ್ಟು ,ಪ್ರಕೃತಿ ವಿಕೋಪ ದಂತಹ ಹೊಡೆತಗಳು ಬಿದ್ದು ಒಂದು ಹೊತ್ತಿನ ಊಟಕ್ಕೂ ಇಲ್ಲಿ ಕಷ್ಟ ಪಡುವಂತಾಗಿದ್ದು ಸಾವಿರಾರು ಮಂದಿ ಆಹಾರವಿಲ್ಲದೇ ಸತ್ತ ನಿದರ್ಶನಗಳಿವೆ.
ಪ್ರಾನ್ಸ್ ಮತ್ತು ಆಫ್ರಿಕಾ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಇಲ್ಲಿನ ಜನ ಸಾಂಸ್ಕೃತಿಕವಾಗಿ ಶ್ರೀಮಂತರು.ಪ್ರಂಚ್ ಮತ್ತು Haition creole ಭಾಷೆ ಮಾತನಾಡುತ್ತಾರೆ ಇಲ್ಲಿನ ಜನ.

Haitians

2010ರಲ್ಲಿ ಭೂಕಂಪವಾಗಿ ಇಡೀ ದೇಶದ ಆರ್ಥಿಕತೆ ಕುಸಿಯಿತು.ಹಸಿವಿನಿಂದ ಉದ್ಯೋಗವಿಲ್ಲದೇ ಜನ ದಂಗೆಎದ್ದರು.
ಇಲ್ಲಿನ ಜನ ಒಂದು ದಿನಕ್ಕೆ 100 ರಿಂದ 150 ರುಪಾಯಿ ಕೂಲಿ ಪಡೆದರೆ ಅದೇ ಹೆಚ್ಚು. ಮಹಿಳೆಯರಿಗೆ ಉದ್ಯೋಗದ ಅವಕಾಶವಿಲ್ಲ .
ಹೀಗಾಗಿ ಒಂದು ಹೊತ್ತಿನ ಊಟವನ್ನು ಸಹ ಇವರು ನೊಡುವುದು ಕಷ್ಟವಾಯಿತು.ಈ ನಾಡಿನಲ್ಲಿ ಬಾಣಂತಿಯರಿಗೆ ಪೊಷಕಾಂಶ ಸಿಗಲಿ ಎಂದು ಮಣ್ಣನ್ನು ತಿನ್ನಿಸುತಿದ್ದರು.ಕೊನೆಗೆ ಹಸಿವಿಗೆ ಇದೇ ಊಟವಾಗಿ ಮಾರ್ಪಟ್ಟಿತು.

ಮಣ್ಣನ್ನು ಆಹಾರವಾಗಿ ಹೇಗೆ ಬಳಸುತ್ತಾರೆ ಗೊತ್ತಾ?!

ಮಣ್ಣಿನಲ್ಲಿ ತಯಾರಿಸುತ್ತಿರುವ ಕುಕ್ಕೀಸ್ ಬಿಸ್ಕೇಟ್


ಊರಿನಲ್ಲಿ ಆಹಾರಕ್ಕಾಗಿ ಬಳಸಲು ಕೆರೆಯ ಬಳಿ ಸಿಗುವ ತೇವಬರಿತ ಜೇಡಿ ಮಣ್ಣು ಅಥವಾ ನುಣುಪಿನ ಮಣ್ಣನ್ನು ಸ್ಬಚ್ಚಗೊಳಿಸಿ ಸಂಗ್ರಹಿಸುತ್ತಾರೆ ,ಹೀಗೆ ಸಂಗ್ರಹಿಸಿದ ಮಣ್ಣನ್ನು ಮನೆಗೆ ತಂದು ಹದ ಮಾಡುತ್ತಾರೆ.

ಮಕ್ಕಳಿಗೆ ತಿನ್ನಲು ತಯಾರಾದ ಮಣ್ಣಿನ ಬನ್!


ಹದ ಮಾಡಿದ ಮಣ್ಣಿಗೆ ತರಕಾರಿಯಿಂದ ತೆಗೆದ ರಸ ಅಥವಾ ಎಣ್ಣೆಯನ್ನು ಹಾಗೂ ರುಚಿಗಾಗಿ ಉಪ್ಪನ್ನು ಬೆರಸಿ ಹದ ಮಾಡಿ ಅವುಗಳನ್ನು ಕೇಕ್ ರೂಪದಲ್ಲಿ ಹಾಗೂ ಬಿಸ್ಕೇಟ್ ರೂಪದಲ್ಲಿ ಬಿಸಿಲಿಗೆ ಒಣಗಿಸುತ್ತಾರೆ.
ಹೀಗೆ ಬಿಸಿಲಿನಲ್ಲಿ ಒಣಗಿದ ಮಣ್ಣಿನ ಖಾದ್ಯ ತಯಾರಾಗುತ್ತದೆ. ನಂತರ ಕುಟುಂಬದವರು ಇವುಗಳನ್ನು ಆಹಾರವಾಗಿ ಸೇವಿಸುತ್ತಾರೆ.

ಮಣ್ಣು ತಿಂದು ಸತ್ತರು!


ಹೀಗೆ ಹಸಿವಿನಿಂದ ಮಣ್ಣಿನಿಂದ ಮಾಡಿದ ಪದಾರ್ಥ ಮಾಡಿ ತಿಂದು ನೂರಾರು ಮಕ್ಕಳು ,ವೃದ್ಧರು,ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ.
ಪ್ರತಿ ವರ್ಷ ಮಣ್ಣು ತಿಂದು ಸತ್ತವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಮಣ್ಣಿನಲ್ಲಿ ತಯಾರಿಸಿದ ಪದಾರ್ಥಗಳಿಂದ ವೈರೆಸ್ ,ಬ್ಯಾಕ್ಟೀರಿಯಾ ಗಳು ದೇಹ ಸೇರಿ ಸಾವು ತರುತ್ತದೆ ಎಂದು ಇಲ್ಲಿನ ಸರ್ಕಾರ ಹಾಗೂ ವಿದೇಶಿ ಎನ್.ಜಿ.ಓ ಗಳು ಜನರನ್ನು ಜಾಗೃತಿ ಮಾಡಿದರೂ ಜನ ಕ್ಕೆ ಹಸಿವು ನೀಗಿಸಿಕೊಳ್ಳಲು ಇರುವುದು ಇದೊಂದೆ ಮಾರ್ಗವಾಗಿದೆ.

ಶುದ್ಧ ಕುಡಿಯುವ ನೀರಿಲ್ಲ!


ಆಹಾರ ಮಾತ್ರವಲ್ಲ ಇಲ್ಲಿ ಕುಡಿಯಲು ಶುದ್ದ ನೀರಿಗೂ ಕಷ್ಟವಾಗಿದೆ.ಶುದ್ಧ ಕುಡಿಯುವ ನೀರಿಗಾಗಿ ದೊಡ್ಡ ಕ್ರಾಂತಿ, ಚಳುವಳಿ ಸಹ ನಡೆದು ಘರ್ಷಣೆಗಳಾಗಿ ಸಾವುನೊವುಗಳಾಗಿವೆ.


ಇಲ್ಲಿನ ಜನರ ಬಡತನ, ನಿರುದ್ಯೋಗ, ಶಿಕ್ಷಣಕ್ಕಾಗಿ ಅಮೇರಿಕಾ ಸೇರಿದಂತೆ ಹಲವು ದೇಶಗಳು ಹಣ ಸಹಾಯ ಹಾಗೂ ಎನ್.ಜಿ.ಓ ಗಳನ್ನು ಕಳಿಸುವ ಮೂಲಕ ನೆರವಾಗುತ್ತಿದೆ.ಆದರೇ ಇಲ್ಲಿನ ಜನರ ಹಸಿವು ಇಂದಿಗೂ ನಿಗದೇ ಬಳಲುತಿದ್ದು ಅತ್ಯಂತ ಬಡ ದೇಶಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಪ್ರಿಯ ಓದುಗರೇ ನಾವು ಮನೆಯಲ್ಲಿ ಹೊಟ್ಟೆತುಂಬ ಉಂಡು ಅನ್ನವನ್ನು ಚಲ್ಲುತ್ತೇವೆ,ಆ ಅನ್ನದ ಮಹತ್ವ ನಮಗೆ ಅರಿವಾಗುವುದಿಲ್ಲ.ನಿಜವಾಗಿ ಅನ್ನದ ಮಹತ್ವ ತಿಳಿಯಬೇಕಾದರೇ ಹೊರಜಗತ್ತನ್ನು ನೀಡಲೇ ಬೇಕು.
ಈ ಲೇಖನ ಇಷ್ಟವಾದರೇ ಕನ್ನಡ ವಾಣಿ ವೆಬ್ ನ್ಯೂಸ್ ನ ಬೆಲ್ ಬಟನ್ ಕ್ಲಿಕ್ ಮಾಡಿ ಪ್ರತಿ ಸುದ್ದಿಗಳನ್ನು ಓದಿ ಪ್ರೋತ್ಸಾಹಿಸಿ.

ಲೇಖನ-ಶುಭಶ್ರೀಕೆರೆಕೈ .
Leave a Reply

Your email address will not be published. Required fields are marked *