BREAKING NEWS
Search

ಹಳಿಯಾಳದಲ್ಲಿ ಸ್ಪೋಟಗೊಂಡಿತು ಶುದ್ಧ ಕುಡಿಯುವ ನೀರಿನ ಘಟಕ!

230

ಹಳಿಯಾಳ:- ಶುದ್ದ ಕುಡಿಯುವ ನೀರಿನ ಘಟಕ ದಲ್ಲಿ ಬಾಯ್ಲರ್ ನಲ್ಲಿ ತಾಂತ್ರಿಕ ದೋಷ ದಿಂದ ಟ್ಯಾಂಕರ್
ಸ್ಪೋಟ ಗೊಂಡು ಚಿದ್ರಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಅರ್ಬನ್ ಬ್ಯಾಂಕ್ ವೃತ್ತದ ಬಳಿ ನಡೆದಿದೆ.

ಹಳಿಯಾಳದ ಪುರಸಭೆಯ ಶುದ್ದ ನೀರಿನ ಘಟಕ ಇದಾಗಿದ್ದು ವರ್ಷಗಳ ಹಿಂದೆ 10 ಲಕ್ಷ ಅನುದಾನದಲ್ಲಿ ಐದು ಸಾವಿರ ಲೀಟರ್ ಸಾಮರ್ಥದ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು.


ಇಂದು ಬಾಯ್ಲರ್ ನಲ್ಲಿ ತಾಂತ್ರಿಕ ದೋಷದಿಂದ ಬಾಯ್ಲರ್ ನಲ್ಲಿ ಅಧಿಕ ಒತ್ತಡ ಕಾಣಿಸುಕೊಂಡ ಹಿನ್ನಲೆಯಲ್ಲಿ ಸ್ಪೋಟಗೊಂಡಿದೆ.
ಸ್ಪೋಟದಿಂದ ಟ್ಯಾಂಕರ್ ಹಾಗೂ ಕಿಟಕಿಯ ಗಾಜುಗಳು ಒಡೆದಿದ್ದು ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಹಾಗೂ ಹಳಿಯಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ.




Leave a Reply

Your email address will not be published. Required fields are marked *