ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ:ಎಲ್ಲಿ ಎಷ್ಟು ಹಾನಿ.

1591

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ವರಣನ ಅಬ್ಬರ ಹೆಚ್ಚಾಗಿದ್ದು ಗುಡ್ಡ ಕುಸಿತದ ಜೊತೆ ದೊಡ್ಡ ಅನಾಹುತವನ್ನ ತಂದೊಡ್ಡಿದೆ.

ಇಂದು ಸುರಿದ ಅಬ್ಬರದ ಮಳೆಗೆ ಹೊನ್ನಾವರದ ಹಳದಿಪುರದ ಬಗ್ರಾಣಿ ಕ್ರಾಸ್ ಬಳಿ ಮನೆಯ ಮೇಲೆ ಆಲದ ಮರ ಬಿದ್ದು ಆರು ಜನರಿಗೆ ಗಾಯವಾಗಿದ್ದು ಹತ್ತುಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಜೋಯಿಡಾದ ಅಣಶಿ ಘಟ್ಟ ಭಾಗದಲ್ಲಿ ನಿರಂತರ ಗುಡ್ಡ ಕುಸಿಯುತಿದ್ದು ಅನಮೋಡದ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.4Aಯ ಗೋವಾ-ಅನಮೋಡ ರಸ್ತೆ ತಾತ್ಕಾಲಿಕ ಸ್ಥಗಿತವಾಗಿದೆ.

ಇನ್ನು ಹಳಿಯಾಳದ ಸಾತ್ನಳ್ಳಿ ಕೆರೆಯಲ್ಲಿ ಮಂಜುನಾಥ್ ಮೋರೆ ಎಂಬುವವರು
ಮಳೆಯ ಅಬ್ಬರಕ್ಕೆ ಕೆರೆಯ ನೀರಿನಲ್ಲಿ ಕೊಚ್ಚಿಹೋಗಿ ಸಾವು ಕಂಡಿದ್ದಾನೆ.

ಹಳಿಯಾಳದಲ್ಲಿ ಸಾವುಕಂಡ ವ್ಯಕ್ತಿ.

ಇನ್ನು ಜಿಲ್ಲೆಯಲ್ಲಿ ಅವಿರತ ಮಳೆ ಬೀಳುತಿದ್ದು ಎರಡು ದಿನಗಳ ಕಾಲ ಆರೆಂಜ್ ಅಲರ್ಟ ನೀಡಲಾಗಿದೆ.

ಕಾರವಾರ – ಜೋಯಿಡಾ ರಸ್ತೆ ಬಂದ್!

ಅನಮೋಡ್ ರಸ್ತೆ.

ಕಾರವಾರ- ಜೋಯಿಡಾ ಭಾಗದ ಘಟ್ಟದಲ್ಲಿ ಅಲ್ಪ ಗುಡ್ಡ ಕುಸಿತವಾಗಿದ್ದು ಅಪಾಯ ಇರುವುದರಿಂದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ತಜ್ಞರ ಸಮಿತಿ ರಚಿಸಿದ್ದು ,ಇವರ ವರದಿ ನಂತರ ಜೋಯಿಡಾ- ಕಾರವಾರ ಭಾಗದ ಗಟ್ಟದ ರಸ್ತೆಯನ್ನು ರಾತ್ರಿ ವೇಳೆಯಲ್ಲಿ ಸಂಚಾರ ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

ಸೇತುವೆಮೇಲೆ ಹರಿದ ನೀರು: ಗ್ರಾಮ ಸಂಪರ್ಕ ಬಂದ್?

ಗಂಗಾವಳಿ ನದಿ ನೀರು ತುಂಬಿ ಸೇತುವೆಮೇಲೆ ಹರಿದ ಗ್ರಾಮ ಸಂಪರ್ಕ ಕಡಿತವಾದ ಘಟನೆ ಯಲ್ಲಾಪುರ ತಾಲೂಕಿನ ಪಣಸಗುಳಿ ಬಳಿ ನಡೆದಿದೆ.

ಪಣಸಗುಳಿ -ಕೆಳಸೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿ ಸೇತುವೆ ಮೇಲೆ ನೀರು ಹರಿದಿದ್ದರಿಂದ ಗ್ರಾಮಕ್ಕೆ ಸಂಪರ್ಕಿಸುವ ಏಕೈಕ ಸಂಪರ್ಕ ರಸ್ತೆ ಬಂದ್ ಆಗಿ ಗ್ರಾಮಕ್ಕೆ ಜಲ ದಿಗ್ಭಂಧನವಾಗಿದೆ.

ಶಿರಸಿ- ಸಿದ್ದಾಪುರದಲ್ಲಿ ಅಬ್ಬರಿಸಿದ ಮಳೆ.
ಶಿರಸಿ ಸಿದ್ದಾಪುರ ಭಾಗದಲ್ಲೂ ಅಬ್ಬರದ ಮಳೆ ಸುರಿದಿದ್ದು ಸಿದ್ದಾಪುರ ಭಾಗದ ವರದಾ ನದಿ ತುಂಬಿ ಹರಿಯುತ್ತಿದೆ. ಇನ್ನು ಶಿರಸಿಯ ಸೋಂದಾ ದೇವದಕೆರೆ ಹೊಳೆ ತುಂಬಿ ಹರಿದಿದ್ದು ಸೇತುವೆ ಇಂದ ಮೇಲ್ಮಟ್ಟಕ್ಕೆ ನೀರು ಹರಿದುಬರುತ್ತಿದೆ.

ಇಂದಿನ ತಾಲೂಕುವಾರು ಮಳೆ ವಿವರ:-

ಅಂಕೋಲ- 57.0 ಮಿ.ಮೀ,

ಭಟ್ಕಳ 65.0 ಮಿ.ಮೀ.

ದಾಂಡೇಲಿ 9.4 ಮಿ.ಮೀ .

ಹಳಿಯಾಳ 7.2 ಮಿ.ಮೀ.

ಹೊನ್ನಾವರ 75.3 ಮಿ.ಮೀ.

ಕಾರವಾರ 45.2 ಮಿ.ಮಿ.

ಕುಮಟಾ 63.8 ಮಿ.ಮೀ.

ಮುಂಡಗೋಡ 9.6 ಮಿ.ಮೀ.

ಸಿದ್ದಾಪುರ 50.6 ಮಿ.ಮೀ.

ಶಿರಸಿ 105.0 ಮಿ.ಮೀ.

ಜೋಯಡಾ 25.8 ಮಿ.ಮೀ.

ಯಲ್ಲಾಪುರ 17.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 531.3 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಜಲಾಶಯ ಮಟ್ಟ :-

ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 29.86 ಮೀ (2022), 1771.00 ಕ್ಯೂಸೆಕ್ಸ್ (ಒಳಹರಿವು) 1771.0 ಕ್ಯೂಸೆಕ್ಸ (ಹೊರ ಹರಿವು)

ಕೊಡಸಳ್ಳಿ: 75.50 ಮೀ (ಗರಿಷ್ಟ), 68.10 ಮೀ. (2022), 3436 ಕ್ಯೂಸೆಕ್ಸ್ (ಒಳ ಹರಿವು) 459 (ಹೊರಹರಿವು)

ಸೂಪಾ: 564.00 ಮೀ (ಗ), 518.60 ಮೀ (2022), 1257.489 ಕ್ಯೂಸೆಕ್ಸ್ (ಒಳ ಹರಿವು), 135.950 ಕ್ಯೂಸೆಕ್ಸ್ (ಹೊರ ಹರಿವು)

ತಟ್ಟಿಹಳ್ಳ: 468.38 ಮೀ (ಗ), 451.55 ಮೀ (2022), 49.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು).

ಬೊಮ್ಮನಹಳ್ಳಿ: 438.38 ಮೀ (ಗ), 434.11 ಮೀ (2022), 30 ಕ್ಯೂಸೆಕ್ಸ್ (ಒಳ ಹರಿವು) 2981 ಕ್ಯೂಸೆಕ್ಸ್ (ಹೊರ ಹರಿವು).

ಗೇರುಸೊಪ್ಪ: 55.00 ಮೀ (ಗ), 48.96 ಮೀ (2022) 4479 ಕ್ಯೂಸೆಕ್ಸ್ (ಒಳ ಹರಿವು) 3905 ಕ್ಯೂಸೆಕ್ಸ್ (ಹೊರ ಹರಿವು).

ಲಿಂಗನಮಕ್ಕಿ: 1819.00 ಅಡಿ (ಗ), 1752.65 ಅಡಿ (2022) 9348.0 ಕೂಸೆಕ್ಸ (ಒಳ ಹರಿವು) 2367.00 ಕ್ಯೂಸೆಕ್ಸ್ (ಹೊರ ಹರಿವು.

ಸದ್ಯ ಜಿಲ್ಲೆಯಲ್ಲಿ ಮಳೆಯಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮಳೆಯ ಅಬ್ಬರಕ್ಕೆ ಯಾವಾಗ ಎಲ್ಲಿ ಏನು ಆಗುತ್ತದೆಯೋ ಎಂಬ ಭೀತಿಯಲ್ಲಿ ಜನರು ದಿನದೂಡುವಂತಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ