BREAKING NEWS
Search

ಅಂದು ಅನಾಥವಾಗಿ ಠಾಣೆಯಲ್ಲಿ ಕೂತ ಗಣಪ ಕೋರ್ಟ ಗೆ ಸಾಕ್ಷಿಯಾಗಿದ್ದ ! ಇದು ಕಥೆಯಲ್ಲ ಸತ್ಯ!

499

ಶಿವಮೊಗ್ಗ:- ಅರೇ ಇದೇನಪ್ಪ ಗಣಪತಿ ಕೋರ್ಟ ಗೆ ಸಾಕ್ಷಿಯಾಗಿದ್ದನೇ ಅಂತ ನೀವು ಮೂಗಿನ ಮೇಲೆ ಬೆರಳಿಡಬೇಡಿ.ಇದು ಕಥೆಯಲ್ಲ ಸತ್ಯ ಅಂದು ಠಾಣೆಗೆ ಬಂದು ಕೂತ ಗಣಪ ಇಂದು ಪೊಲೀಸರ ಆರಾದ್ಯ ದೈವವಾಗಿದ್ದಾನೆ .

ಎಲ್ಲಿ ಅಂತಿರಾ ಹಾಗಿದ್ರೆ ಈ ಸುದ್ದಿ ಕೊನೆ ವರೆಗೂ ಓದಲೇ ಬೇಕು.

ಪ್ರತಿವರ್ಷ ಚೌತಿಯಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಪೇಟೆ ಠಾಣೆಯಲ್ಲಿ (ಮುಂಚೆ ಇಲ್ಲಿಯೇ ಗ್ರಾಮಾಂತರ ವಿಭಾಗದ ಠಾಣೆ ಇತ್ತು) ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಅದೇ ದಿನ ರಾತ್ರಿ ವಿಸರ್ಜಿಸುತ್ತಾರೆ.

ಅಂದು ಪೇಟೆ ಆರಕ್ಷಕ ಠಾಣೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಸಿಬ್ಬಂದಿಗಳೆಲ್ಲ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಸಾರ್ವಜನಿಕರಿಗೂ ಠಾಣೆ ಗಣಪನ ದರ್ಶನಕ್ಕೆ ಅನುವು ಮಾಡಿ ಕೊಡುತ್ತಾರೆ.

ಈ ಆಚರಣೆ 1965 ರಿಂದಲೂ ನಡೆದು ಕೊಂಡು ಬಂದಿದ್ದು 1965ರಲ್ಲಿ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ವೇಳೆ ನಡೆದ ಗಲಾಟೆ ಯಲ್ಲಿ ಲಾಠಿ ಚಾರ್ಜ್ ನಂತರ ಗಣಪನ ಮೂರ್ತಿ ಅನಾಥವಾಗಿತ್ತು.

ಅದನ್ನು ಠಾಣೆಗೆ ಒಯ್ದು ರಕ್ಷಿಸಿ, ನ್ಯಾಯಾಲಯಕ್ಕೆ ಸಾಕ್ಷಿಗಾಗಿ ದಿನ ಕೊಂಡೊಯುತ್ತಿದ್ದರು. ಅಲ್ಲದೆ ಮೂರ್ತಿಗೆ ದಿನ ಪೊಲೀಸರೇ ಪೂಜೆ ಮಾಡುತ್ತಿದ್ದರು. ಕೋರ್ಟ ನಲ್ಲಿ ಅಂತಿಮ ತೀರ್ಪು ಬರುವ ವರೆಗೂ ಈ ಗಣಪ ಠಾಣೆಯಲ್ಲಿಯೇ ಪೊಲೀಸರ ಅಥಿತಿಯಾಗಿ ಪೂಜೆ ಸ್ವೀಕರಿಸುತಿದ್ದ.

ಅಂದು ಠಾಣೆಗೆ ಬಂದ ಗಣಪ ಇಂದಿಗೂ ವರ್ಷಕ್ಕೊಮ್ಮೆ ಠಾಣೆಯ ಆವರಣದಲ್ಲಿ ಪ್ರತಿಷ್ಠಾಪನೆ ಗೊಂಡು ಸೇವೆ ಸ್ವೀಕರಿಸಿ ತೆರಳುತ್ತಾನೆ.

ಹಿಂದೂ ಮಹಾಸಭಾ ಗಣಪತಿ ಇಡಲು ಪ್ರಾರಂಭಿಸಿ ಕೆಲ ವರ್ಷವಾಗಿತ್ತಷ್ಟೇ . ಆಗ ಕೆ ಎ ಐತಾಳ್ ಅವರು ಸಂಘದ ಅಧ್ಯಕ್ಷರಾಗಿದ್ದರು. ಮೊದಲಿಗೆ ವರದಾ ರಸ್ತೆಯ SBM ಬಳಿ ಗಣಪತಿ ಪೆಂಡಾಲ್ ಇತ್ತು ನಂತರ ಸಿಂಡಿಕೇಟ್ ಬ್ಯಾಂಕ್ ಬಳಿ ತದನಂತರ ಪರಿಮಳ ಕಾಫಿ ವರ್ಕ್ಸ್ ಬಳಿ ಪೆಂಡಾಲ್ ಹಾಕುತ್ತಿದ್ದರು.

ವಿಸರ್ಜನಾ ದಿನ ಜಾತ ಪೆಂಡಾಲ್ ಬಳಿಯಿಂದ ಮಾರ್ಕೆಟ್ ರೋಡ್ ಮಾರ್ಗವಾಗಿ ನೆಹರು ನಗರದ ಒಳಹೊಕ್ಕು ಬಿ ಎಚ್ ರಸ್ತೆಯ ಮೂಲಕ ಅಶೋಕ್ ರೋಡ್ ಗೆ ಬಂದು ಗಣಪತಿ ಕೆರೆ ತಲುಪುತಿತ್ತು.

ಈಗ ಇದೇ ಗಣಪತಿ ಚೌತಿ ಯಂದು ಠಾಣೆಯಲ್ಲಿ ಪ್ರತಿಷ್ಠಾಪನೆ ಗೊಂಡು ಪೂಜೆ ಸ್ವೀಕರಿಸುವ ಮೂಲಕ ಜನರ ವಿಘ್ನ ನಿವಾರಿಸವ ಆರಾಧ್ಯ ದೈವವಾಗಿದ್ದಾನೆ.

#sagar #Hindumaha saba ganapa #shivamogga,
Leave a Reply

Your email address will not be published. Required fields are marked *