BREAKING NEWS
Search

ಭಾನುವಾರದ ದಿನ ಭವಿಷ್ಯ

393

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ದ್ವಿತೀಯಾ, ಉಪರಿ ತೃತೀಯಾ ತಿಥಿ,
ಉತ್ತರ ನಕ್ಷತ್ರ, ಭಾನುವಾರ

ರಾಹುಕಾಲ: ಸಂಜೆ 5:01 ರಿಂದ 6:33
ಗುಳಿಕಕಾಲ: ಮಧ್ಯಾಹ್ನ 3:28 ರಿಂದ 5:01
ಯಮಗಂಡಕಾಲ: ಬೆಳಗ್ಗೆ 10:50 ರಿಂದ 12:23

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳು ನಿವಾರಣೆಯಾಗಿ ನೆಮ್ಮದಿ ಸಿಗಲಿದೆ. ಭೂಮಿ, ಮನೆ ಖರೀದಿ ವ್ಯವಹಾರ ಮಾಡಲು ಇದು ಉತ್ತಮ ದಿನ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಕೆಲಸ ಕಾರ್ಯಗಳಲ್ಲಿ ನಿಧಾನ ಪ್ರಗತಿ, ಹಣಕಾಸು ವಿಚಾರದಲ್ಲಿ ಚೇತರಿಕೆ, ವಾಹನ ರಿಪೇರಿಯಿಂದ ಖರ್ಚು, ಆತ್ಮೀಯರೊಂದಿಗೆ ವೈಮನಸ್ಸು, ಸುಳ್ಳು ಹೇಳುವ ಪರಿಸ್ಥಿತಿ ನಿರ್ಮಾಣ, ಕೋರ್ಟ್ ಕೇಸ್‍ಗಳಲ್ಲಿ ಸಮಸ್ಯೆ,

ವೃಷಭ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡಬಂದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತಸವಾಗುವುದು. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಲು ಇದು ಸಕಾಲ. ಕಾರ್ಯನಿಮಿತ್ತ ಅಧಿಕ ಓಡಾಟವಿರುತ್ತದೆ,ಆತ್ಮೀಯರಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಿತ ಶತ್ರುಗಳ ಕಾಟ ದಮನ, ಕುಟುಂಬದಲ್ಲಿ ಅಹಿತಕರ ವಾತಾವರಣ, ಬಂಧುಗಳಿಂದ ಸಹಾಯ, ಆಕಸ್ಮಿಕ ಹಣ ಖರ್ಚು, ಸ್ತ್ರೀಯರಿಗೆ ಅನುಕೂಲ,ಆರೋಗ್ಯ ಮಧ್ಯಮ.

ಮಿಥುನ: ಆರ್ಥಿಕವಾಗಿ ನಿವ್ವಳ ಲಾಭ ಸಿಗುವುದರಿಂದ ಆದಾಯಕ್ಕೆ ಕೊರತೆಯಿರದು. ಆದರೆ ವಿಶ್ವಾಸಕ್ಕೆ ದ್ರೋಹ ಬಗೆಯುವವರು ನಿಮ್ಮ ಬೆನ್ನ ಹಿಂದೆಯೇ ಇರುವರು. ಪಾಲು ಬಂಡವಾಳ ಹೂಡಿಕೆಯಲ್ಲಿ ಎಚ್ಚರಿಕೆ. ಸಂಚಾರದಲ್ಲಿ ಜಾಗ್ರತೆ ವಹಿಸಿ,ದಾನ-ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಅನಿರೀಕ್ಷಿತ ದ್ರವ್ಯ ಲಾಭ, ಗೌರವ ಸನ್ಮಾನ ಪ್ರಾಪ್ತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹೊಸ ವ್ಯವಹಾರಗಳಿಗೆ ಆಲೋಚನೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಮನಸ್ಸಿನಲ್ಲಿ ಆತಂಕ-ಭಯ.

ಕಟಕ: ಅನಗತ್ಯ ಹಣ ಖರ್ಚು, ಪುಣ್ಯಕ್ಷೇತ್ರ ದರ್ಶನಕ್ಕೆ ಮನಸ್ಸು, ಕಾರ್ಯ ಪ್ರಗತಿಗಾಗಿ ಓಡಾಟ, ಸ್ಥಿರಾಸ್ತಿ ಮಾರಾಟಕ್ಕೆ ಯೋಜನೆ, ಮಾನಸಿಕ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ಸಿಂಹ: ಆತ್ಮೀಯರನ್ನು ಭೇಟಿ ಮಾಡುವಿರಿ, ಉದ್ಯೋಗಸ್ಥರಿಗೆ ಅನುಕೂಲ, ವ್ಯಾಪಾರದಲ್ಲಿ ಲಾಭ, ಸೈಟ್-ವಾಹನ ಖರೀದಿಗೆ ಆಲೋಚನೆ, ಮನಸ್ಸಿನಲ್ಲಿ ಭಯ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕಾರ್ಯದಲ್ಲಿ ವಿಳಂಬ.

ಕನ್ಯಾ: ಹೊಸ ವ್ಯವಹಾರಕ್ಕೆ ಮನಸ್ಸು, ಅನಗತ್ಯ ಹಣವ್ಯಯ ಕೆಲಸ ಕಾರ್ಯಗಳಲ್ಲಿ ಅಪಜಯ, ದುಷ್ಟ ಜನರ ಸಹವಾಸದಿಂದ ತೊಂದರೆ, ಕೃಷಿಯಲ್ಲಿ ಲಾಭ, ವಸ್ತ್ರಾಭರಣ ಪ್ರಾಪ್ತಿ.

ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಕೆಟ್ಟ ಮಾತುಗಳನ್ನಾಡುವಿರಿ, ಇಲ್ಲ ಸಲ್ಲದ ಅಪವಾದ ನಿಂದನೆ, ಸ್ವಜನರಿಂದ ವಿರೋಧ, ಆಕಸ್ಮಿಕ ಧನ ಲಾಭ, ವಾಹನ ಅಪಘಾತದಿಂದ ತೊಂದರೆ.

ವೃಶ್ಚಿಕ: ವಾಸಗೃಹದಲ್ಲಿ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೇಹದಲ್ಲಿ ಆಲಸ್ಯ, ಮಾನಸಿಕ ನೆಮ್ಮದಿಗೆ ಧಕ್ಕೆ.

ಧನಸ್ಸು: ವಿಪರೀತ ವ್ಯಸನ, ದೂರ ಪ್ರಯಾಣ, ನಾನಾ ರೀತಿಯ ಚಿಂತೆ, ಸುಖ ಭೋಜನ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ದ್ರವ್ಯ ಲಾಭ, ಸೈಟ್-ವಾಹನ ಖರೀದಿಗೆ ಸಹಕಾರ.

ಮಕರ: ವ್ಯಾಪಾರ-ಉದ್ಯೋಗದಲ್ಲಿ ಲಾಭ, ಹಣಕಾಸು ಅನುಕೂಲ, ಇಷ್ಟಾರ್ಥ ಸಿದ್ಧಿ, ಋಣ ಬಾಧೆ, ದುಷ್ಟ ಜನರಿಂದ ತೊಂದರೆ, ಬಂಧುಗಳಲ್ಲಿ ಮನಃಸ್ತಾಪ, ಯತ್ನ ಕಾರ್ಯದಲ್ಲಿ ವಿಘ್ನ.

ಕುಂಭ: ಸ್ಥಾನ ಬದಲಾವಣೆ, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ವ್ಯಾಸಂಗಕ್ಕೆ ತೊಂದರೆ, ಮಾನಸಿಕ ಅಶಾಂತಿ, ಸ್ಥಿರಾಸ್ತಿ ವಿಚಾರವಾಗಿ ಸಮಸ್ಯೆ.

ಮೀನ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ರೋಗ ಬಾಧೆ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಪರಸ್ತ್ರೀಯಿಂದ ಧನ ಲಾಭ, ನಾನಾ ರೀತಿಯಲ್ಲಿ ಧನಾಗಮನ, ವಾರಾಂತ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ.
Leave a Reply

Your email address will not be published. Required fields are marked *