BREAKING NEWS
Search

ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ರಾಜ್ಯ ವನ್ಯಜೀವಿ ಮಂಡಳಿ

279

ಕಾರವಾರ/ಬೆಂಗಳೂರು :- ಹಲವು ದಶಕಗಳಿಂದ ವಿಘ್ನ ನಿವಾರಣೆಯಾಗದೇ ರಾಜಕೀಯ ಚದುರಂಗದಾಟದಲ್ಲಿ ಸದಾ ನೆನೆಗುದಿಗೆಗೆ ಬಿದ್ದಿದ್ದ ಅಂಕೋಲಾ-ಹುಬ್ಬಳ್ಳಿ ರೈಲುಮಾರ್ಗ ಕ್ಕೆ ರಾಜ್ಯ ವನ್ಯಜೀವಿ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕಿದೆ.

ಪ್ರತಿ ಬಾರಿ ಸರ್ಕಾರಕ್ಕೆ ಈ ಯೋಜನೆಯ ರೈಲು ಮಾರ್ಗದ ಬಗ್ಗೆ ಮನದಟ್ಟು ಮಾಡುತ್ತಲೇ ಬರಲಾಗಿತ್ತು. ಆದರೆ ಎಲ್ಲ ಅಸ್ತು ಎನ್ನುವಂತಿರುವಾಗಲೇ ರಾಜ್ಯ ವನ್ಯಜೀವಿ ಮಂಡಳಿಯಿಂದ ರೈಲು ಮಾರ್ಗ ನಿರ್ಮಾಣಕ್ಕೆ ಅಡೆ- ತಡೆಯಾಗಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿತ್ತು. ಆದರೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ನೇತ್ರತ್ವದಲ್ಲಿ ನಡೆದ
ಸಭೆಯಲ್ಲಿ ರಾಜ್ಯ ವನ್ಯ ಜೀವಿ ಮಂಡಳಿ ಈ ಮಾರ್ಗದ ರೈಲು ಸಂಚಾರಕ್ಕೆ ತನ್ನ ಅನುಮತಿ ನೀಡಿದೆ.

ಕಾರವಾರ-ಅಂಕೋಲ ಶಾಸಕಿ ರೂಪಾಲಿ ನಾಯ್ಕ ರಿಂದ ಮುಖ್ಯಮಂತ್ರಿಗಳಿಗೆ ಮನವಿ.

ಇದರಿಂದಾಗಿ ರೈಲು ಮಾರ್ಗ ನಿರ್ಮಾಣದಲ್ಲಿ ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಉಳಿದಂತಾಗಿದೆ. ಕೇಂದ್ರ ವನ್ಯಜೀವಿ ಮಂಡಳಿಯೊಂದು ಸಮ್ಮತಿ ಸೂಚಿಸಿದಲ್ಲಿ ಈ ಮಾರ್ಗದ ರೈಲು ಓಡುವುದು ಖಚಿತವಾಗಿದೆ.

ರೈಲ್ವೆ ಯೋಜನೆಗೆ ಒಂದಾದ ಪರ ವಿರೋಧಿ ನಾಯಕರು!

ಇಂದು ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಾದ ಮಾಜಿ ಸಚಿವ ಹಳಿಯಾಳ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ, ಅವರ ಕಟ್ಟಾ ವಿರೋಧಿಯಾಗಿರುವ ಸಚಿವ ಶಿವರಾಮ್ ಹೆಬ್ಬಾರ್ ,ಜಿಲ್ಲೆಯ ಎಲ್ಲಾ ಶಾಸಕರು,ಜಗದೀಶ್ ಶಟ್ಟರ್ ,ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರಿಗೆ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೂ ಭಾಗಿಯಾಗಿದ್ದರು.ಈ ವೇಳೆ ಸಚಿವ ಶಿವರಾಮ್ ಹೆಬ್ಬಾರ್ ಜಿಲ್ಲೆಯ ಅಭಿವೃದ್ಧಿ,ಉದ್ಯೋಗ,ವಾಣಿಜ್ಯ ವಹಿವಾಟಿನ ಬೆಳವಣಿಗೆಗೆ ಈ ಮಾರ್ಗ ಎಷ್ಟು ಮುಖ್ಯ ಎಂಬ ಬಗ್ಗೆ ವಿವರಿಸಿದರು.ಇದನ್ನು ಮಾಜಿ ಸಚಿವ ಆರ್ .ವಿದೇಶಪಾಂಡೆ ಹಾಗೂ ಜಿಲ್ಲೆಯ ಎಲ್ಲಾ ಶಾಸಕರೂ ದ್ವನಿ ಗೂಡಿಸುವ ಮೂಲಕ ಈ ಮಾರ್ಗದ ಅವಷ್ಯಕತೆಯನ್ನು ತಿಳಿಯಪಡಿಸಿದರು.ಇದಕ್ಕೆ ಕೇಂದ್ರ ಸಚಿವರು ಕೂಡ ಸಾತ್ ನೀಡಿದ್ದು ದಶಕಗಳಿಂದ ನೆನೆಗುದಿಗೆಗೆ ಬಿದ್ದಿದ್ದ ಅಂಕೋಲ ಹುಬ್ಬಳ್ಳಿ ರೈಲ್ವೆ ಮಾರ್ಗ ಕ್ಕೆ ರಾಜ್ಯ ಹಸಿರು ಮಂಡಳಿ ಸಮ್ಮತಿಸಿ ಕೇಂದ್ರಕ್ಕೆ ಪ್ರಸ್ಥಾವನೆ ಸಲ್ಲಿಸಿದೆ.

ಅಂಕೋಲ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ವಿಘ್ನವಾಗಿದ್ದೇನು?.

ಸಾಂದರ್ಭಿಕ ಚಿತ್ರ.

ಜಿಲ್ಲೆಯ ಜನರ ಬಹು ವರ್ಷದ ಬೇಡಿಕೆಯಾಗಿದ್ದ ಈ ರೈಲು ಮಾರ್ಗಕ್ಕೆ ಪರಿಸರವಾದಿಗಳ ತೀರ್ವ ವಿರೋಧ ವ್ಯಕ್ತವಾಗಿತ್ತು.
ಎರಡು ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳು ನಾಶದ ಜೊತೆ ಕಾಳಿ ಹುಲಿ ರಕ್ಷಿತ ಪ್ರದೇಶಕ್ಕೆ ದಕ್ಕೆಯಾಗುವ ಆತಂಕದ ಜೊತೆ ಪಶ್ಚಿಮ ಘಟ್ಟದ ಅಳಿವು ಉಳುವಿನ ಪ್ರಶ್ನೆ ಉದ್ಭವವಾಗಿತ್ತು.
ಈ ಮಾರ್ಗದ ರೈಲು ಯೋಜನೆ ಪ್ರಸ್ತಾಪವನ್ನು ಕೈಬಿಡುವಂತೆ ರಾಷ್ಟ್ರೀಯ ಹುಲಿರಕ್ಷಣಾ ಪ್ರಾಧಿಕಾರ ಶಿಪಾರಸ್ಸು ಮಾಡಿತ್ತು.ಇದಲ್ಲದೇ
ಯೋಜನೆ ಸ್ಥಳದ ಪರಿಶೀಲನೆಯನ್ನು ಹುಲಿ ಸಂರಕ್ಷಣಾ ಪ್ರಾಧಿಕಾರ ಈಗಾಗಲೇ ನಡೆಸಿದೆ ಜತೆಗೆ ವರದಿಯನ್ನೂ ನೀಡಿದ್ದು ಈ ರೈಲ್ವೆ ಯೋಜನೆಯ ನಿರ್ಮಾಣದಿಂದ ಆಗುವ ಪ್ರಾಣಿಗಳ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶಗಳಮೇಲೆ ಬೀರುವ ದುಷ್ಪರಿಣಾಮಗಳಾಗುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ಹುಬ್ಬಳ್ಳಿ -ಕರಾವಳಿಯನ್ನು ಸಂಪರ್ಕಿಸುವ ಅತೀ ಸರಳವಾದ ಮಾರ್ಗ ಇದಾಗಿದ್ದು 168.28 ಕಿಲೋಮೀಟರ್ ಅಂತರದ ಈ ಮಾರ್ಗಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಸಹ ಒಪ್ಪಿಗೆ ಸೂಚಿಸಿರಲಿಲ್ಲ.

1999ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆಯಾಗಿದ್ದರೂ ಪರಿಸರ ಪ್ರೇಮಿಗಳು ಸುಪ್ರಿಂ ಕೋರ್ಟ ನಲ್ಲಿ ಮೇಲ್ಮನವಿ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದ್ದರು.
ಆದರೇ ಈಗ ರಾಜ್ಯ ವನ್ಯಜೀವಿ ಮಂಡಳಿಯಿಂದ ಒಪ್ಪಿಗೆ ಸಿಕ್ಕಿದ್ದು ಮುಂದಿನ ದಾರಿ ಸುಗಮವಾಗಿದೆ.
Leave a Reply

Your email address will not be published. Required fields are marked *