ಹುಬ್ಬಳ್ಳಿಯಲ್ಲಿ ದೇಶದ್ರೋಹಿಗಳಿಗೆ ಸಹಾಯ ಮಾಡಿದ ಪೊಲೀಸ್ ಇನ್ ಸ್ಪೆಕ್ಟರ್ ಅಮಾನತ್ತು!

1306

ಹುಬ್ಬಳ್ಳಿ:- ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಬಗ್ಗೆ ಚಾರ್ಚ್ ಶೀಟ್ ಸಲ್ಲಿಸದೇ ವಿಳಂಬ ಮಾಡಿ ಅವರಿಗೆ ಜಾಮೀನು ಸಿಗುವಂತೆ ಸಹಾಯ ಮಾಡಿದ್ದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಎಂಬುವವನನ್ನು ಕರ್ತವ್ಯ ಲೋಪ ದಡಿ ಅಮಾನತ್ತು ಮಾಡಲಾಗಿದೆ.

ಈ ಕುರಿತು ಉತ್ತರ ವಲಯ ಐ‌ಜಿಪಿ ರಾಘವೇಂದ್ರ ಸುಹಾಸ್ ಆದೇಶ ಹೊರಡಿಸಿದ್ದಾರೆ.

ದೇಶದ್ರೋಹಿ ಆರೋಪಿಗಳು‌

ಹುಬ್ಬಳ್ಳಿಯ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಾಸೀತ ಸೋಪಿ,ತಾಲೀಬ್ ವಾನಿ ಅಮೀರ್ ,ಮೊಯಿನುದ್ದೀನ್ ವಾನಿ ಎಂಬ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿ ವೀಡಿಯೋ ವೈರಲ್ ಮಾಡಿದ್ದರು.ಈ ಕುರಿತು 90 ದಿನದಲ್ಲಿ ಚಾರ್ಚ್ ಶೀಟ್ ಅನ್ನು ಸಲ್ಲಿಸಬೇಕಿತ್ತು ‌ಆದರೇ ಚಾರ್ಚ ಶೀಟ್ ಸಲ್ಲಿಕೆ ಮಾಡದೇ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಗುವಂತಾಗಿತ್ತು.
ಇದರ ಹಿಂದ ಠಾಣೆಯ ಇನ್ ಸ್ಪೆಕ್ಟರ್ ಡಿಸೋಜಾ ರವರ ಕೈವಾಡವಿರು ಹಾಗೂ ಉದ್ದೇಶ ಪೂರ್ವಕ ಲೋಪ ಎಸಗಿರುವ ಆರೋಪ ಕೇಳಿಬಂದಿದ್ದು ದೇಶದ್ರೋಹಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಹಲವು ಸಂಘಟನೆ ಆರೋಪ ಮಾಡಿತ್ತು. ಇದರ ಬೆನ್ನಲ್ಲೇ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದ್ದು ಅಮಾನತ್ತು ಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ