ಪೊಲೀಸ ವಾಹನದಲ್ಲಿ ಹುಬ್ಬಳ್ಳಿಯಿಂದ ಗೊರ್ಕಣಕ್ಕೆ ನಾಲ್ವರ ಪ್ರಯಾಣ – ವರದಿ ಕೇಳಿದ ಡಿಐಜಿ..!

1014

ಹುಬ್ಬಳ್ಳಿ.:- ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಸಿಕ್ಕಿರುವ ಪೊಲೀಸ್ ಜೀಪ್ ಪೊಲೀಸ್ ಅರಣ್ಯ ವಿಚಕ್ಷಣ ದಳಕ್ಕೆ ಸೇರಿರುವುದು ಎಂಬ ಅಂಶ ಬೆಳಕಿಗೆ ಬಂದಿದೆ. ಇದು ಇದೀಗ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ. ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡವಾಣಿ.ನ್ಯೂಸ್ ವರದಿ ಆದಾರದಲ್ಲಿ ವಿಚಕ್ಷಣ ದಳದ ಪಿಎಸ್ಐಗೆ ವರದಿ ನೀಡುವಂತೆ ಡಿಐಜಿ ರವರು ತಿಳಿಸಿದ್ದಾರೆ.

ಆಗಿದ್ದೇನು?

ಪೊಲೀಸ್ ಇಲಾಖೆಯಲ್ಲಿ ಅರಣ್ಯ ಹಾಗೂ ಅಬಕಾರಿ ವಿಚಕ್ಷಣ ದಳವೆಂದು ಇರುತ್ತದೆ. ಪ್ರತಿ ಜಿಲ್ಲೆಯಲ್ಲಿರುವ ಈ ವಿಚಕ್ಷಣ ದಳದಲ್ಲಿ ಒಬ್ಬ ಪಿಎಸ್‌ಐ, ಇಬ್ಬರು ಹವಾಲ್ದಾರರು, ಇಬ್ಬರು ಕಾನ್ಸ್ಟೆಬಲ್ ಇರುತ್ತಾರೆ. ಇವರು ನೇರವಾಗಿ ಡಿಐಜಿ ವಿಚಕ್ಷಣ ದಳಕ್ಕೆ ವರದಿ ಮಾಡಿಕೊಳ್ಳುತ್ತದೆ.

ಈ ವಿಚಕ್ಷಣ ದಳದ ಪಿಎಸ್‌ಐ ತಮ್ಮ ಸಂಬಧಿಕರೊಬ್ಬರನ್ನು ಬಿಟ್ಟು ಬರುವಂತೆ ಚಾಲಕನ ಜೊತೆಗೆ ನಾಲ್ವರನ್ನು ಸೇರಿಸಿ ಹಣ ಪಡೆದು ಗೋಕರ್ಣಕ್ಕೆ ಕಳುಹಿಸಿದ್ದರು ಎಂದು ಹೇಳಲಾಗಿದೆ. ಈ ವೇಳೆ ಗೋಕರ್ಣದಲ್ಲಿ ಇವರ ವಾಹನ ಸಿಕ್ಕಿದೆ. ವಾಹನದಲ್ಲಿದ್ದವರನ್ನೆಲ್ಲ ಅರಣ್ಯ ಹಾಗೂ ಅಬಕಾರಿ ವಿಷಯಕ್ಕೆ ಸೇರಿದಂತೆ ರೇಡ್ ಮಾಡುವ ಅಧಿಕಾರ ಹೊಂದಿರುವ ಈ ದಳ ತನಗೆ ಕೊಟ್ಟಿರುವ ವಾಹನವನ್ನು ದುರುಪಯೋಗಪಡಿಸಿಕೊಂಡಿರುವುದು. ಇದು ಪೊಲೀಸ್ ವಿಚಕ್ಷಣ ದಳಕ್ಕೆ ದೊಡ್ಡ ತಲೆನೋವಾದಂತಾಗಿದೆ.

ಇದರೊಂದಿಗೆ ವಿಚಕ್ಷಣ ದಳದ ಪಿಎಸ್ಐಗೆ ಈ ಕುರಿತು ವರದಿ ನೀಡುವಂತೆ ವಿಚಕ್ಷಣ ದಳದ ಡಿಐಜಿ ಸೂಚನೆ ನೀಡಿದ್ದಾರೆ .

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾತನಾಡಿ, ಇದು ಅರಣ್ಯ ವಿಚಕ್ಷಣ ದಳಕ್ಕೆ ಸಂಬಂಧಪಟ್ಟಿದ್ದು. ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇನ್ನು

ಪೊಲೀಸ್ ಕಮಿಷನರ್ ಆರ್.ದಿಲೀಪ್ ಕನ್ನಡವಾಣಿಯೊಂದಿಗೆ ಮಾತನಾಡಿ ಕಮಿಷನರೇಟ್‌ಗೂ ಗೋಕರ್ಣದಲ್ಲಿ ದೊರೆತ ವಾಹನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ