1ರಿಂದ 5ನೇ ತರಗತಿ ಪ್ರಾರಂಭ ಸದ್ಯಕ್ಕಿಲ್ಲ,ಖಾಸಗಿ ಶಾಲೆಗಳು ಪ್ರಾರಂಭವಾದ್ರೆ ಕ್ರಮ-ಸುರೇಶಕುಮಾರ್ .

1850

ಹುಬ್ಬಳ್ಳಿ :- 1ರಿಂದ 5 ನೇ ತರಗತಿಯ ಶಾಲೆಗಳ ಆರಂಭ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಲೆ ಆರಂಭ ಮಾಡೋ ಬಗ್ಗೆ ಸರ್ಕಾರ ಸಹ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ‌.‌

ಆರೋಗ್ಯ ಇಲಾಖೆ ವರದಿ ಆಧರಿಸಿದ ಶಾಲೆ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ಹೇಳಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶಕುಮಾರ್, ಪ್ರಾಥಮಿಕ ತರಗತಿಗಳನ್ನು ನಾವು ನಿನ್ನೆಯಿಂದ ಆರಂಭ ಮಾಡಬೇಕಿತ್ತು.

ಆದ್ರೆ ದೇಶದ ಎರಡು ರಾಜ್ಯಗಳಲ್ಲಿ‌ ಕೊರೋನಾ -2 ಅಲೆ ಜೋರಾಗಿದೆ, ಅದ್ರಲ್ಲಿ ಕರ್ನಾಟವೂ ಸಹ ಒಂದಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ತಜ್ಞರ ವರದಿ ಕೇಳಲಾಗಿದೆ.

ತಜ್ಞರ ವರದಿ ಆಧಾರಿಸಿ ಶಾಲೆ ಆರಂಭ ನಿರ್ಧಾರ ಕೈಗೊಳ್ಳುತ್ತೇವೆ. ಆದ್ರೆ ಖಾಸಗಿ ಶಾಲೆಗಳು ತರಗತಿ ಆರಂಭಿಸಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ