ಪ್ಲಾಸ್ಮಾ ಥೆರಪಿಗೆ ರಕ್ತ ನೀಡಲು ಹಿಂದೇಟು ಹಾಕುತ್ತಿರಿವ ಸೊಂಕಿನಿಂದ ಗುಣಮುಖರಾದವರು! ಕಾರಣವೇನು ಗೊತ್ತಾ?

634

ಹುಬ್ಬಳ್ಳಿ: – ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ನೀಡಲು ಐಸಿಎಂಆರ್‌ ನಿಂದ ಅನುಮತಿ ನೀಡಿದೆ.
ರಾಜ್ಯದಲ್ಲಿ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಇದೇ ಮಾದರಿಯಲ್ಲಿ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿಯೂ ರೋಗಿಗಳ ಚಿಕಿತ್ಸೆಗೆ ಪ್ಲಾಸ್ಮಾ ಬಳಸಲು ಮುಂದಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಅನುಮತಿ ಸಿಕ್ಕ ಕಾರಣ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕಿಮ್ಸ್ ವೈದ್ಯರು ಸಿದ್ದತೆ ಮಾಡಿಕೊಂಡಿದ್ದಾರೆ.
ಆದ್ರೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ರಕ್ತ‌ ಸಿಗುತ್ತಿಲ್ಲ.

ಕೊವಿಡ್ ಸೋಂಕಿನಿಂದ ಗುಣಮುಖರಾದ ರೋಗಿಗಳು ರಕ್ತ ನೀಡಲು ನಿರಾಕರಿಸಿದ್ದಾರೆ.

ಈ ಹಿಂದೆ ರಕ್ತ ನೀಡಲು ಒಪ್ಪಿಕೊಂಡಿದ್ದ ಕೋವಿಡ್ ಸೊಂಕಿನಿಂದ ಗುಣಮುಖರಾದವರು
ಕೊನೆಗೆ ರಕ್ತ ನೀಡಲು ನಿರಾಕರಿಸಿ ತಮ್ಮ ಅಸಲಿ ಮುಖ ತೋರಿಸಿದ್ದಾರೆ.

ಹೀಗಾಗಿ ಹೊರ ಜಿಲ್ಲೆಯಲ್ಲಿ ಸೊಂಕಿನಿಂದ ಗುಣಮುಖರಾದವರ ರಕ್ತಕ್ಕಾಗಿ ಕಿಮ್ಸ್ ವೈದ್ಯರು ಬೇಡಿಕೆ ಸಲ್ಲಿಸಿದ್ದಾರೆ.

ಹೊರ ಜಿಲ್ಲೆಯಿಂದಲೂ ರಕ್ತ ನೀಡುವುದು ಅಸದ್ಯ ಎಂದು ಹೇಳಲಾಗುತಿದ್ದು ಸದ್ಯಕ್ಕೆ ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಯುವುದು ಸಾಧ್ಯವಾಗುವುದು ಕಷ್ಟಸಾಧ್ಯ ಎನ್ನಲಾಗಿದೆ.

ಒಂದು ಕಡೆ ಸೊಂಕಿತರನ್ನು ಗುಣಪಡಿಸಲು ರಕ್ತ ಸಿಗುತ್ತಿಲ್ಲ,ಮತ್ತೊಂದೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೊಳಪಡುವ ರೋಗಿಯು ಸಹ ಆಸ್ಪತ್ರೆಯಲ್ಲಿಲ್ಲ.

ಬಾಗಲಕೋಟೆ ಮೂಲದ ಗರ್ಭಿಣಿ ಮಹಿಳೆಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ವೈದ್ಯರು ಸಿದ್ದತೆ ಮಾಡಿಕೊಂಡಿದ್ದರು‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಅಗತ್ಯವಿಲ್ಲ ಎಂದು ಚಿಕಿತ್ಸೆ ನೀಡುತಿದ್ದ ವೈದ್ಯರು ತಿಳಿಸಿದ್ದಾರೆ.

ಸದ್ಯಕ್ಕೆ ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿಗೆ ಗುಣಮುಖರಾದವರಿಂದ ರಕ್ತ ಸಿಗದ ಹಿನ್ನಲೆಯಲ್ಲಿ ಈ ಕೆಲಸವನ್ನು ಕೈ ಬಿಡುವಂತಾಗಿದೆ.

ರಕ್ತ ನೀಡುವುದಿಲ್ಲ!


ಹುಬ್ಬಳ್ಳಿಯಲ್ಲಿ ಸೊಂಕಿನಿಂದ ಗುಣಮುಖರಾದವರಲ್ಲಿ ಬಹುತೇಕರು ಮುಂದೆ ತಮಗೆ ತೊಂದರೆಯಾದರೆ ಎನ್ನುವ ಭಯವೇ ರಕ್ತ ನೀಡಲು ಹಿಂದೇಟು ಹಾಕಲು ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಯಾರೂ ಕೂಡ ಮುಂದೆಬರುತಿಲ್ಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ