ತನ್ನ ಹೆಸರಿನ ಇನ್ಸುರೆನ್ಸ್ ಹಣಕ್ಕಾಗಿ ಅಮಾಯಕನನ್ನು ಕೊಲೆಮಾಡಿ ಸಿಕ್ಕಿಬಿದ್ದ ಭೂಪ

604

ಹುಬ್ಬಳ್ಳಿ :- 50 ಲಕ್ಷದ ಜೀವವಿಮೆ ಆಸೆಗಾಗಿ ಅಮಾಯಕ ಯುವಕನೊಬ್ಬನ ಕೊಲೆ ಮಾಡಿರುವ ಪ್ರಕರಣವನ್ನು ಹುಬ್ಬಳ್ಳಿ ಪೊಲೀಸರು ಬಯಲಿಗೆಳದಿದ್ದಾರೆ .

ನಿನ್ನೇ ರಾತ್ರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ರೇವಡಿ ಹಾಳ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದನೆನ್ನಲಾದ ಸಂಜೀವಕುಮಾರ್ ಬೆಂಗೇರಿ ತನ್ನ ಹೆಸರಿನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ವಿಮೆ ಹೊಂದಿದ್ದ . ಆದ್ರೆ ಆ ಹಣವನ್ನು ಪಡೆಯಬೇಕು ಎನ್ನುವ ಆಸೆಯಿಂದ ವ್ಯೆಕ್ತಿಯೊಬ್ಬನನ್ನು ಕೊಲೆ ಮಾಡಿ , ಶವದ ಪಕ್ಕದಲ್ಲಿ ತನ್ನ ಬೈಕ್ ಚಪ್ಪಲಿ ಬಿಟ್ಟು ತಾನೇ ಸತ್ತಿರುವುದಾಗೆ ಸೀನ್ ಕ್ರಿಯೇಟ್ ಮಾಡಿದ್ದ.
ಈ ಅಪಘಾತದ ಸುದ್ದಿ ಮನೆಯವರಿಗೆ ತಲುಪಿತ್ತು ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ರು .

ಇನ್ನು ಪೊಲೀಸ್ರು ಸಹ ಸತ್ತ ವ್ಯೆಕ್ತಿಯನ್ನು ಸಂಜೀವಕುಮಾರ್ ಬೆಂಗೇರಿ ಎಂದೆ ತಿಳಿದಿದ್ದರು. ಆದ್ರೆ ಸತ್ತ ವ್ಯೆಕ್ತಿಯ ಸಹೋದರ ಮಂಜುನಾಥ್ ಬೇಂಗೇರಿ ತನ್ನ ಅಣ್ಣನ ಕೈ ಮೇಲೆ ಶ್ರೀ ರಾಮನ ಹಚ್ಚೆ ಇರುವುದಾಗೆ ಹೇಳಿಕೆ ನೀಡಿದ್ದ . ಬಳಿಕ ಪೊಲೀಸ್ರು ಶವ ಪರಿಕ್ಷೆ ಮಾಡಿದಾಗ ಕೈ ಮೇಲೆ ಯಾವುದೇ ಹಚ್ಚೆ ಇರಲಿಲ್ಲ, ಅಲ್ಲದೆ ಅದೊಂದು ಮುಸ್ಲಿಂ ವ್ಯೆಕ್ತಿಯ ಶವ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ನಂತರ ಪ್ರಕರಣದ ಬೆನ್ನುಬಿದ್ದ ಪೊಲೀಸರು ಇದು ಇನ್ಸುರೆನ್ಸ್ ಹಣ ಹೊಡೆಯಲು ಆಡಿದ ನಾಟಕ ಎಂಬುದನ್ನು ಪತ್ತೆ ಹಚ್ಚಿದ್ದಾರೆ.ತಕ್ಷಣ ಕಾರ್ಯ ಪ್ರೌವೃತ್ತರಾದ ಗೋಕುಲ್ ರೋಡ್ ಠಾಣಾ ಪೊಲೀಸ್ರು , ಮಹಾಂತೇಶ ದುಗ್ಗಾಣಿ ಹಾಗೂ ಅಮೀರ್ ಶೇಖ್ ರನ್ನು ವಶಕ್ಕೆ ಪಡೆದಿದ್ದಾರೆ . ಇನ್ನು ಪ್ರಕರಣದ ಪ್ರಮೂಖ ಆರೋಪಿ ಸಂಜೀವಕುಮಾರ್ ಬೆಂಗೇರಿ ತಲೆ ಮರೆಸಿಕೊಂಡಿದ್ದು ಈತನ ಬಂಧನಕ್ಕೆ ಬಲೆ ಬೀಸಲಾಗಿದೆ.
One thought on “ತನ್ನ ಹೆಸರಿನ ಇನ್ಸುರೆನ್ಸ್ ಹಣಕ್ಕಾಗಿ ಅಮಾಯಕನನ್ನು ಕೊಲೆಮಾಡಿ ಸಿಕ್ಕಿಬಿದ್ದ ಭೂಪ

Leave a Reply

Your email address will not be published. Required fields are marked *

error: Content is protected !!