BREAKING NEWS
Search

ಇನ್ನುಮುಂದೆ ATM ಕಾರ್ಡ ಇಲ್ಲದೇ ಹಣ ಡ್ರಾ ಮಾಡಬಹುದು! ಹೇಗೆ ಗೊತ್ತಾ?

927

ನವ ದೆಹಲಿ:- ಎಟಿಎಂ ಕಾರ್ಡ ಹಿಡಿದು ಇನ್ನುಮುಂದೆ ನೀವು ಹಣ ಡ್ರಾ ಮಾಡುವ ಅವಷ್ಯಕತೆ ಇಲ್ಲ , ಮನೆಯಲ್ಲೇ ಕಾರ್ಡ ಮರೆತೆ, ಪಿನ್ ಮರೆತುಹೋಯ್ತು,ಕಾರ್ಡ ಕಳೆದುಹೋಯ್ತು ಹೀಗೆ ಒಂದಲ್ಲಾ ಒಂದು ಸಮಸ್ಯೆ ಗ್ರಾಹಕರನ್ನು ಕಾಡುತ್ತಲೇ ಇರುತ್ತದೆ.

ಹೀಗಾಗ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಂಬ ಖ್ಯಾತಿಗೆ ಒಳಗಾಗಿರುವ ಎಸ್.ಬಿ.ಐ. ಹೊಸ ಸೇವೆ ಶುರು ಮಾಡಿದೆ. ಎಸ್.ಬಿ.ಐ. ಇದಕ್ಕೆ ಯೋನೊ ಕ್ಯಾಶ್ ಎಂದು ಹೆಸರಿಟ್ಟಿದೆ.

ಇನ್ನುಮುಂದೆ ಎಸ್.ಬಿ.ಐ. ಬ್ಯಾಂಕ್ ನಿಂದ 1.65 ಲಕ್ಷ ರೂಪಾಯಿ ಒರೆಗೆ ಡ್ರಾ ಮಾಡಲು ನಿಮಗೆ ಎಟಿಎಂ ಕಾರ್ಡ್ ಅವಶ್ಯಕತೆಯಿರುವುದಿಲ್ಲ.

ಸಾಂದರ್ಭಿಕ ಚಿತ್ರ. Google photo

ಎಟಿಎಂ ಕಾರ್ಡ್ ಇಲ್ಲದೆ ಯೋನೊ ಆಪ್ ಮೂಲಕ ಹಣ ಡ್ರಾ ಮಾಡಬಹುದು. ಕಾರ್ಡ್ ಇಲ್ಲದೆ ಎಟಿಎಂ ಮೂಲಕ ಹಣ ಡ್ರಾ ಮಾಡುವ ಸೇವೆಯನ್ನು ಶುರು ಮಾಡಿರುವ ಮೊದಲ ಬ್ಯಾಂಕ್ ಎಸ್.ಬಿ.ಐ. ಆಗಿದೆ.

ಈ ಸೇವೆ ಮೂಲಕ ಎಟಿಎಂ ಕಾರ್ಡ್ ನಿಂದಾಗುವ ಮೋಸವನ್ನು ತಪ್ಪಿಸಬಹುದಾಗಿದೆ ಎನ್ನುತ್ತದೆ ಬ್ಯಾಂಕ್ .

ಈ ಸೇವೆಗೆ ಎಟಿಎಂನಲ್ಲಿ ಯೋನೋ ಕ್ಯಾಶ್ ಪಾಯಿಂಟ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಗ್ರಾಹಕರು ಹಣ ಡ್ರಾ ಮಾಡಬಹುದು.

ಯೋನೊ ಆಪ್ ನಲ್ಲಿ ಹಣ ವರ್ಗಾವಣೆಗೆ 6 ಡಿಜಿಟಲ್ ಪಿನ್ ನೀಡಲಾಗುವುದು. ಮೊಬೈಲ್ ನಲ್ಲಿ ಎಸ್ಎಂಎಸ್ ಮೂಲಕ 6 ಅಂಕಿಯ ರೆಫರೆನ್ಸ್ ನಂಬರ್ ಕೂಡ ನಿಮ್ಮ ಮೊಬೈಲ್ ಗೆ ಬರಲಿದೆ.

ನಂತರ ನಿಮ್ಮ ಹತ್ತಿರದ ಎಟಿಎಂಗೆ ಹೋಗಿ 30 ಸೆಕೆಂಡಿನಲ್ಲಿ ಕಾರ್ಡ ಇಲ್ಲದೇ ಮೊಬೈಲ್ ನಲ್ಲಿ ಬಂದ ಎಟಿಎಂನಲ್ಲಿ 6 ಡಿಜಿಟಲ್ ನಂಬರ್ ಹಾಗೂ 6 ರೆಫರೆನ್ಸ್ ನಂಬರ್ ಹಾಕಿ ಹಣ ಡ್ರಾ ಮಾಡಬಹುದಾಗಿದೆ.

ಸದ್ಯ ಈ ಹೊಸ ಯೋಜನೆಯನ್ನು ಬ್ಯಾಂಕ್ ಪ್ರಾರಂಭಿಸಿದ್ದು ದೇಶದಲ್ಲೆಡೇ ಚಾಲ್ತಿಗೆ ಬರುತ್ತಿದೆ.
Leave a Reply

Your email address will not be published. Required fields are marked *