ಕುಮಟಾದ ಮೂರು ವರ್ಷದ ಬಾಲಕನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ

262

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ಅನಿತಾ,ಸಂತೋಷ್ ನಾಯ್ಕರವರ ಮೂರು ವರ್ಷದ ಏಳು ತಿಂಗಳು ಪುತ್ರ ಸಂಪ್ರೀತ್ ಅತೀವ ಜ್ಞಾಪಕ ಶಕ್ತಿ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ ದಾಖಲೆ ಬರೆದಿದ್ದಾನೆ.

ಮೂರು ವರ್ಷ ಏಳು ತುಂಗಳ ಈ ಪುಟ್ಟ ಬಾಲಕ
ಇಂಡಿಯನ್ ಕ್ಯಾಪಿಟಲ್ಸ್ ನೇಮ್ ,ಜಗತ್ತಿನ ರಾಜದಾನಿ ಹೆಸರು ,ನ್ಯಾಷನಲ್ ಸಿಂಬಲ್,ಕನ್ನಡ,ಇಂಗ್ಲೀಷ್ ,ಹಿಂದಿ ಭಾಷೆಯಲ್ಲಿ ಸಂಖ್ಯೆ ಅಂಕೆಗಳು ,ಎಲಿಮಿನೆಂಟ್ ನೇಮ್,ದೇಹದ ಎಲ್ಲಾ ಭಾಗಗಳ ಹೆಸರು.ಕನ್ನಡ,ಇಂಗ್ಲೀಷ್ ,ಹಿಂದಿ ಅಕ್ಷರಗಳನ್ನು ,ಹೇಳುವುದು ಮತ್ತು ಗರ್ತಿಸಿ ಬರೆಯುವುದು, ರಾಷ್ಟ್ರೀಯ,ಅಂತರಾಷ್ಟ್ರೀಯ ನಾಯಕರ ಹೆಸರು,ರಾಷ್ಟ್ರಗೀತೆಗಳುನ್ನು ಹೇಳುತ್ತಾನೆ. ಈವರೆಗೂ ಅಂಗನವಾಡಿಗೂ ಹೋಗದ ಈ ಪುಟ್ಟ ಬಾಲಕನಿಗೆ ತಾಯಿ ಅನಿತಾ ಸಂತೋಷ್ ನಾಯ್ಕರವರೇ ಶಿಕ್ಷಕರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಈತ ಎಲ್ಲವನ್ನೂ ನೆನಪಿಟ್ಟುಕೊಂಡು ಗುರುತಿಸಿ,ಬರೆಯುವ ಜೊತೆ ಅಕ್ಷರದಲ್ಲಿ ಸಹ ಬರೆಯುತ್ತಾನೆ.

ಬಾಲಕನ ಟ್ಯಾಲಂಟಿನ ವಿಡಿಯೋ ನೋಡಿ:-

ಈತನ ಅತೀವ ಜ್ಞಾಪಕ ಶಕ್ತಿ ಕಾರಣದಿಂದ ಇಂಡಿಯೋ ಬುಕ್ ಆಫ್ ರೆಕಾರ್ಡ ನಲ್ಲಿ ದಾಖಲೆ ಬರೆದಿದ್ದಾನೆ.ತಾಯಿಯ ಆರೈಕೆಯಲ್ಲಿ ಅತೀವ ಜ್ಞಾಪಕ ಶಕ್ತಿಯ ಕನಿಯಾಗಿರುವ ಈತನನ್ನು ಐ.ಪಿ.ಎಸ್ ಮಾಡಬೇಕು ಎನ್ನುವ ಹಂಬಲ ಇವರ ಪೊಷಕರದ್ದು.ಈ ಚಿಕ್ಕ ವಯಸ್ಸಿನಲ್ಲಿಯೇ ಇಂಡಿಯನ್ ಬುಕ್ ಆಫ್ ರೆಕಾರ್ಡ ಮಾಡಿದ್ದು ಈತನ ಸಾಧನೆಗೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *